ಸಿನಿಮಾ ಸುದ್ದಿ

ಮತ್ತೆ ಬೆಳ್ಳಿಪರದೆ ಮೇಲೆ ಕಮಲ್ ಹಾಸನ್ ಕಮಾಲ್!

ಹಿರಿಯ ನಟ, ರಾಜಕಾರಣಿ ಕಮಲ್ ಹಾಸನ್ ತಾವು ಹೊಸ ಚಿತ್ರವೊಂದರಲ್ಲಿ ಅಭಿನಯಿಸಲು ತಯಾರಾಗಿದ್ದಾರೆ. ಯುವ ನಿರ್ದೇಶಕ ಲೋಕೇಶ್ ಕನಗರಾಜ್ ಅವರ ಚಿತ್ರ್ದಲ್ಲಿ ಕಮಲ್ ಕಾಣಿಸಿಕೊಳ್ಳುತ್ತಿದ್ದಾರೆ.

ಮತ್ತೆ ಬೆಳ್ಳಿಪರದೆ ಮೇಲೆ ಕಮಲ್ ಹಾಸನ್ ಕಮಾಲ್!
Published On :

ಹಿರಿಯ ನಟ, ರಾಜಕಾರಣಿ ಕಮಲ್ ಹಾಸನ್ ತಾವು ಹೊಸ ಚಿತ್ರವೊಂದರಲ್ಲಿ ಅಭಿನಯಿಸಲು ತಯಾರಾಗಿದ್ದಾರೆ. ಯುವ ನಿರ್ದೇಶಕ ಲೋಕೇಶ್ ಕನಗರಾಜ್ ಅವರ ಚಿತ್ರ್ದಲ್ಲಿ ಕಮಲ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ನಟ "ಮತ್ತೊಂದು ಪ್ರಯಾಣ ಪ್ರಾರಂಭವಾಗುತ್ತಿದೆ" ಎಂದು ಬರೆದುಕೊಂಡಿರುವುದಲ್ಲದೆ ಚಿತ್ರದ ಪೋಸ್ಟರ್ ಸಹ ಹಂಚಿಕೊಂಡಿದ್ದಾರೆ. 

ಪೋಸ್ಟರ್‌ನಲ್ಲಿ ಬಂದೂಕುಗಳಿಂದ ಮಾಡಿದ ಕಮಲ್‌ ಅವರ ಚಿತ್ರವಿದೆ. ಜತೆಗೆ “Once upon a time there lived a ghost…” ಎನ್ನುವ ಲೈನ್ ಸಹ ಇದೆ.

ನಿರ್ದೇಶಕ ಲೋಕೇಶ್ ಕನಗರಾಜ್  2017 ರಲ್ಲಿ ಮನಗರಂ ಚಿತ್ರದ ಮೂಲಕ ಚಿತ್ರ ನಿರ್ದೇಶಾನ ಕ್ಷೇತ್ರಕ್ಕೆ ಬಂದಿದ್ದರು. ಕಳೆದ ವರ್ಷ ಕಾರ್ತಿಯವರ ಕೈತಿ ಚಿತ್ರ ನಿರ್ದೇಶಿಸಿದ್ದು ಇದು ಪ್ರೇಕ್ಷಕರು ಮತ್ತು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಇನ್ನು ಅವರ "ಮಾಸ್ಟರ್" ಚಿತ್ರದಲ್ಲಿ ವಿಜಯ್ ಪ್ರಧಾನ ಪಾತ್ರದಲ್ಲಿದ್ದರು. ಆದರೆ ಕೋವಿಡ್ ಕಾರಣದಿಂದ ಈ ಬಿಗ್ ಬಜೆಟ್ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ. 

ಕಮಲ್ ಹಾಸನ್ ಅವರ ಸ್ವಂತ ಬ್ಯಾನರ್  ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್  ಈ ಚಿತ್ರವನ್ನು ನಿರ್ಮಿಸಲಿದೆ. ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ತರ್ಶನ್ ಪ್ರಮುಖ ಪಾತ್ರ ವಹಿಸಲಿದ್ದಾರೆ ಎನ್ನಲಾಗಿದೆ. ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ತರ್ಶನ್ ಪ್ರಮುಖ ಪಾತ್ರ ವಹಿಸಲಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.