ಸಿನಿಮಾ ಸುದ್ದಿ

ನಿಮ್ಮ ದಿಟ್ಟತನಕ್ಕೊಂದು ಹ್ಯಾಟ್ಸ್​ ಆಫ್​: ಕಂಗನಾರನ್ನು ಭಗತ್ ಸಿಂಗ್ ಗೆ ಹೋಲಿಸಿದ ನಟ ವಿಶಾಲ್

ತಮಿಳು ನಟ ವಿಶಾಲ್, ಮಹಾರಾಷ್ಟ್ರ ಸರ್ಕಾರದ ವಿರುದ್ಧ ಸಮರ ಸಾರಿರುವ ಬಾಲಿವುಡ್​ ನಟಿ ಕಂಗನಾ ರಣಾವತ್​ರನ್ನು ​ಸ್ವಾತಂತ್ರ್ಯ ಹೋರಾಟಗಾರ ಭಗತ್​ ಸಿಂಗ್​ ಹೋಲಿಸಿ ಟ್ವೀಟ್​ ಮಾಡಿದ್ದಾರೆ.

ನಿಮ್ಮ ದಿಟ್ಟತನಕ್ಕೊಂದು ಹ್ಯಾಟ್ಸ್​ ಆಫ್​: ಕಂಗನಾರನ್ನು ಭಗತ್ ಸಿಂಗ್ ಗೆ ಹೋಲಿಸಿದ ನಟ ವಿಶಾಲ್
ವಿಶಾಲ್
Published On :

ಚೆನ್ನೈ: ತಮಿಳು ನಟ ವಿಶಾಲ್, ಮಹಾರಾಷ್ಟ್ರ ಸರ್ಕಾರದ ವಿರುದ್ಧ ಸಮರ ಸಾರಿರುವ ಬಾಲಿವುಡ್​ ನಟಿ ಕಂಗನಾ ರಣಾವತ್​ರನ್ನು ​ಸ್ವಾತಂತ್ರ್ಯ ಹೋರಾಟಗಾರ ಭಗತ್​ ಸಿಂಗ್​ ಹೋಲಿಸಿ ಟ್ವೀಟ್​ ಮಾಡಿದ್ದಾರೆ.

ನಿಮ್ಮ ದಿಟ್ಟತನಕ್ಕೊಂದು ಹ್ಯಾಟ್ಸ್​ ಆಫ್​, ಯಾವುದು ತಪ್ಪು ಮತ್ತು ಯಾವುದು ಸರಿ ಎನ್ನುವ ವಿಚಾರದಲ್ಲಿ ಧ್ವನಿಯೆತ್ತಲು ನೀವು ಯಾವತ್ತೂ ಎರಡು ಬಾರಿ ಯೋಚಿಸಿಯೇ ಇಲ್ಲ. ಇದು ನಿಮ್ಮ ವೈಯಕ್ತಿಕ ಸಮಸ್ಯೆಯಲ್ಲ, ಸರ್ಕಾರವೇ ನಿಮ್ಮ ವಿರುದ್ಧವಾಗಿದ್ದರೂ ನೀವು ಕುಗ್ಗದೇ ಗಟ್ಟಿಯಾಗಿ ಉಳಿಯುವ ಮೂಲಕ ಒಂದು ದೊಡ್ಡ ಉದಾಹರಣೆಯಾಗಿ ನಿಂತಿದ್ದೀರಿ. ಇದು 1920ರ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಭಗತ್​ ಸಿಂಗ್​​ ಹೋಲುವಂತಿದೆ.

ಯಾವುದು ಸರಿಯಿಲ್ಲ ಎಂದು ಕಂಡುಬಂದಾಗ ಸರ್ಕಾರದ ವಿರುದ್ಧ ಧ್ವನಿ ಏರಿಸಲು ನೀವು ಉದಾಹರಣೆಯೊಂದನ್ನು ಸ್ಥಾಪಿಸಿದ್ದೀರಿ ಮತ್ತು ಸರ್ಕಾರದ ವಿರುದ್ಧ ಧ್ವನಿಯೇರಿಸಲು ಸೆಲೆಬ್ರಿಟಿಯೇ ಆಗಿರಬೇಕಂತಲ್ಲ. ಅದು ಸಾಮಾನ್ಯ ವ್ಯಕ್ತಿಯು ಆಗಿರಬೇಕು. ಈ ವಿಚಾರದಲ್ಲಿ ನಾನು ನಿಮಗೆ ನಮಸ್ಕರಿಸುತ್ತೇನೆಂದು ವಿಶಾಲ್​, ಕಂಗನಾಗೆ ಪೋಸ್ಟ್​ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ. ನಟ ವಿಶಾಲ್ ತಮಿಳುನಾಡಿನಲ್ಲಿ ನಡೆಯುವ ಪ್ರಸಿದ್ಧ ಜಲ್ಲಿಕಟ್ಟು ಕ್ರೀಡೆಗೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದರು. 

ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಜೀವನ ಕಥೆ ಆಧಾರಿತ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.