ಮುಗ್ಧ ತಮಿಳಿಗರ ಹತ್ಯೆಯನ್ನು ನಾನು ಎಂದಿಗೂ ಸಮರ್ಥಿಸಿಕೊಂಡಿಲ್ಲ: '800' ಬಯೋಪಿಕ್ ಬಗ್ಗೆ ಮುತ್ತಯ್ಯ ಮುರಳೀಧರನ್
ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಮುಗ್ಧ ತಮಿಳಿಗರನ್ನು ಹತ್ಯೆ ಮಾಡಿರುವುದನ್ನು ತಾವು ಎಂದೂ ಸಮರ್ಥಿಸಿಕೊಳ್ಳಲಿಲ್ಲ ಎಂದು ಶ್ರೀಲಂಕಾ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಹೇಳಿದ್ದಾರೆ.

ಚೆನ್ನೈ: ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಮುಗ್ಧ ತಮಿಳಿಗರನ್ನು ಹತ್ಯೆ ಮಾಡಿರುವುದನ್ನು ತಾವು ಎಂದೂ ಸಮರ್ಥಿಸಿಕೊಳ್ಳಲಿಲ್ಲ ಎಂದು ಶ್ರೀಲಂಕಾ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಹೇಳಿದ್ದಾರೆ.
ತಮ್ಮ ಜೀವನ ಚರಿತ್ರೆಯಾಧಾರಿತ ತಮಿಳು ಚಿತ್ರ 800 ತಯಾರಾಗುತ್ತಿರುವ ಸಂದರ್ಭದಲ್ಲಿ ಉಂಟಾಗಿರುವ ರಾಜಕೀಯ ವಿವಾದಕ್ಕೆ ಸಂಬಂಧಪಟ್ಟಂತೆ ತಮಿಳಿನಲ್ಲಿ ವಿವರವಾಗಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಶ್ರೀಲಂಕಾದಲ್ಲಿ ತಮಿಳಿಗನಾಗಿ ನಾಗರಿಕ ಯುದ್ಧವನ್ನು ಕಂಡ ಬಗೆಯನ್ನು ಹೇಳಿದ್ದಾರೆ.
800 ಚಿತ್ರದಲ್ಲಿ ಮುತ್ತಯ್ಯ ಮುರಳೀಧರನ್ ಪಾತ್ರವನ್ನು ವಿಜಯ್ ಸೇತುಪತಿ ನಿಭಾಯಿಸುತ್ತಿದ್ದು, ತಮಿಳು ಪರ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದು ಚಿತ್ರೋದ್ಯಮದ ಕೆಲವರು ವಿಜಯ್ ಸೇತುಪತಿ ಚಿತ್ರದಲ್ಲಿ ನಟಿಸಬಾರದು, ಚಿತ್ರವನ್ನು ಕೈಬಿಡಬೇಕೆಂದು ಸಹ ಒತ್ತಾಯಿಸಿದ್ದರು.
ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಮುರಳೀಧರನ್ ಅವರು ಮಾಡಿದ ಕೆಲವು ಹೇಳಿಕೆಗಳ ಆಧಾರದ ಮೇಲೆ ಮತ್ತು ಯುದ್ಧ ಅಪರಾಧದ ಆರೋಪ ಹೊತ್ತಿರುವ ಗೋಟಬಯಾ ರಾಜಪಕ್ಸೆ ಅವರ ಬೆಂಬಲವನ್ನು ಆಧರಿಸಿ "ಜನಾಂಗೀಯ ಹತ್ಯೆಗೆ" "ಕ್ಷಮೆಯಾಚಕ"ದ ಬಗ್ಗೆ ಮುರಳೀಧರ್ ದೃಷ್ಟಿಕೋನ, ಮಾಡಿರುವ ಹೇಳಿಕೆಗಳನ್ನು ಆಧರಿಸಿ ಅವರ ಜೀವನ ಚರಿತ್ರೆಯಾಧಾರಿತ ಚಿತ್ರಕ್ಕೆ ವಿರೋಧ ವ್ಯಕ್ತವಾಗಿದೆ.
ತಮ್ಮ ಕುರಿತು ಸಿನೆಮಾ ಮಾಡುತ್ತೇವೆಂದು ಬಂದಾಗ ಆರಂಭದಲ್ಲಿ ಒಪ್ಪಿರಲಿಲ್ಲ. ಆದರೂ ಕೊನೆಗೆ ತಾವು ಈ ಮಟ್ಟಕ್ಕೆ ಬೆಳೆಯಲು, ತಮ್ಮ ಸಾಧನೆಗೆ ಕಾರಣರಾದ ಪೋಷಕರು, ಕೋಚ್ ಮತ್ತು ಹಲವರ ಬಗ್ಗೆ ಕಥೆಯಲ್ಲಿ ಹೇಳುವುದರಿಂದ ಚಿತ್ರ ಮಾಡಲು ಒಪ್ಪಿಗೆ ನೀಡಿದೆ. ತಮ್ಮ ಕುಟುಂಬದವರು ಚಹಾ ಬೆಳೆ ಬೆಳೆಯುವ ಕೆಲಸ ಮಾಡುತ್ತಿದ್ದರು. ತಮಿಳರ ವಿರುದ್ಧ ನಡೆದ ನಾಗರಿಕ ಯುದ್ಧ ಮೂರು ದಶಕಗಳಿಗೂ ಹೆಚ್ಚು ಕಾಲ ಮುಂದುವರಿಯಿತು, ಇದರಿಂದ ತಮಿಳರು ಸಾಕಷ್ಟು ಕಷ್ಟ ಅನುಭವಿಸಿದ್ದಾರೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


