ಪುನೀತ್ 'ಜೇಮ್ಸ್' ಚಿತ್ರದಲ್ಲಿ ಅನು ಪ್ರಭಾಕರ್, ಆದಿತ್ಯ ಮೆನನ್
ಅಕ್ಟೋಬರ್ 12 ರಂದು ಸಂತೋಷ್ ಆನಂದ್ ರಾಮ್ ಅವರ "ಯುವರತ್ನ" ಚಿತ್ರದ ಚಿತ್ರೀಕರಣ ಮುಗಿಸಿದ ಪುನೀತ್ ರಾಜ್‌ಕುಮಾರ್ ತಮ್ಮ ಮುಂದಿನ ಯೋಜನೆ "ಜೇಮ್ಸ್" ಚಿತ್ರದ ಚಿತ್ರೀಕರಣವನ್ನು ಪುನರಾರಂಭಿಸಲು ಸಜ್ಜಾಗಿದ್ದಾರೆ.

ಅಕ್ಟೋಬರ್ 12 ರಂದು ಸಂತೋಷ್ ಆನಂದ್ ರಾಮ್ ಅವರ "ಯುವರತ್ನ" ಚಿತ್ರದ ಚಿತ್ರೀಕರಣ ಮುಗಿಸಿದ ಪುನೀತ್ ರಾಜ್‌ಕುಮಾರ್ ತಮ್ಮ ಮುಂದಿನ ಯೋಜನೆ "ಜೇಮ್ಸ್" ಚಿತ್ರದ ಚಿತ್ರೀಕರಣವನ್ನು ಪುನರಾರಂಭಿಸಲು ಸಜ್ಜಾಗಿದ್ದಾರೆ. ಚೇತನ್ ಕುಮಾರ್ ನಿರ್ದೇಶನದ ಕಮರ್ಷಿಯಲ್ ಎಂಟರ್ಟೈನರ್ "ಜೇಮ್ಸ್:" ನಲ್ಲಿ ತೆಲುಗು ನಟ ಶ್ರೀಕಾಂತ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಅಲ್ಲದೆ ದಕ್ಷಿಣ ಭಾರತದ ಮತ್ತೊಬ್ಬ ನಟ ಆದಿತ್ಯ ಮೆನನ್ ಸಹ ಮುಂದಿನ ದಿನಗಳಲ್ಲಿ ಸೆಟ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡಿದ್ದ ಈ ನಟ ಇದಕ್ಕೆ ಮುನ್ನ ಮೊದಲು ಕನ್ನಡ ಟಿವಿ ಧಾರಾವಾಹಿಯಲ್ಲಿ ಕ್ಯಾಮೆರಾವನ್ನು ಎದುರಿಸಿದ್ದರು. ಶಿವಾಜಿನಗರ, ಜಾಗ್ವಾರ್, ಕೋಲಾರ ಮತ್ತು ಸೀತಾರಾಮ ಕಲ್ಯಾಣ ಮುಂತಾದ ಚಲನಚಿತ್ರಗಳಲ್ಲಿ ಅಭಿನಯಿಸಿದ್ದ ಆದಿತ್ಯ ಪಾಲಿಗೆ "ಜೇಮ್ಸ್" ಕನ್ನಡದಲ್ಲಿ ಹೊಸದೊಂದು ಬ್ರೇಕ್ ನೀಡಲಿದೆಯೆ ನೋಡಬೇಕಿದೆ.
"ಜೇಮ್ಸ್" ಗಾಗಿ ನಟಿ ಅನು ಪ್ರಭಾಕರ್ ಸಹ ಬಣ್ಣ ಹಚ್ಚುತ್ತಿರುವುದು ಇನ್ನೊಂದು ವಿಶೇಷ. 55 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಅನು ಪ್ರಭಾಕರ್ ಪುನೀತ್ ಅವರೊಂದಿಗೆ ಕಾಣಿಸಿಕೊಳ್ಳುತ್ತಿರುವುದು ಇದು ಮೊದಲ ಬಾರಿಯಾಗಿದೆ. ಇತ್ತೀಚೆಗೆ ಮಹಿಳಾ ಕೇಂದ್ರಿತ ಚಿತ್ರವಾದ ಅರ್ಣಾ ಸದ್ಯಾ ಅವರ "ಸಾರವಜ್ರ" ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು ರಿಲೀಸ್ ಗೆ ಸಿದ್ದವಾಗಿದೆ. "ಜೇಮ್ಸ್" ಅನ್ನು ಕಿಶೋರ್ ಪಾತಿಕೊಂಡ ನಿರ್ಮಿಸಿದ್ದರೆ ಚರಣ್ ರಾಜ್ ಸಂಗೀತ ಸಂಯೋಜಿಸಿದ್ದಾರೆ. ನಿರ್ದೇಶಕ ಚೇತನ್ ಕುಮಾರ್ ಅವರು ಚಿತ್ರದ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಗಳನ್ನ ಬರೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


