'ಜೇಮ್ಸ್' ಚಿತ್ರದಲ್ಲಿ ಪುನೀತ್ ಜೊತೆಗೆ ತೆಲುಗು ನಟ ಶ್ರೀಕಾಂತ್ ಅಭಿನಯ
ನಿರ್ದೇಶಕ ಚೇತನ್ ಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ತಂಡ ಈ ವಾರದಿಂದ ಚಿತ್ರೀಕರಣವನ್ನು ಪುನರ್ ಆರಂಭಿಸಲಿದೆ. ಸ್ಯಾಂಡಲ್ ವುಡ್ ಹಾಗೂ ನೆರೆಯ ರಾಜ್ಯಗಳ ಪ್ರಸಿದ್ಧ ಕಲಾವಿದರು ಚಿತ್ರದಲ್ಲಿ ಅಭಿನಯಿಸುತ್ತಿರುವುದರ ಬಗ್ಗೆ ಚಿತ್ರ ತಯಾರಕರು ಸುಳಿವು ನೀಡಿದ್ದಾರೆ.

ಬೆಂಗಳೂರು: ನಿರ್ದೇಶಕ ಚೇತನ್ ಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ತಂಡ ಈ ವಾರದಿಂದ ಚಿತ್ರೀಕರಣವನ್ನು ಪುನರ್ ಆರಂಭಿಸಲಿದೆ. ಸ್ಯಾಂಡಲ್ ವುಡ್ ಹಾಗೂ ನೆರೆಯ ರಾಜ್ಯಗಳ ಪ್ರಸಿದ್ಧ ಕಲಾವಿದರು ಚಿತ್ರದಲ್ಲಿ ಅಭಿನಯಿಸುತ್ತಿರುವುದರ ಬಗ್ಗೆ ಚಿತ್ರ ತಯಾರಕರು ಸುಳಿವು ನೀಡಿದ್ದಾರೆ.
ತೆಲುಗಿನ ಖ್ಯಾತ ನಟ ಶ್ರೀಕಾಂತ್ ಪ್ರಮುಖಪಾತ್ರದಲ್ಲಿ ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.ಫೀಪಲ್ಸ್ ಎನ್ ಕೌಂಟರ್ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿ,ನಾಯಕ ನಟನಾಗಿ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಶ್ರೀಕಾಂತ್, ಮೊದಲ ಬಾರಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
1993ರಲ್ಲಿ ಹೆಂಡ್ತಿ ಹೇಳಿದರೆ ಕೇಳಬೇಕು , ಕನ್ನಡ ಚಿತ್ರದಲ್ಲಿ ಮೊದಲ ಬಾರಿಗೆ ಅಭಿನಯಿಸಿದ್ದ ಶ್ರೀಕಾಂತ್, 2007ರಲ್ಲಿ ಯುಗಾದಿ ಚಿತ್ರದಲ್ಲೂ ರವಿಚಂದ್ರನ್ ಜೊತೆಗೆ ನಟಿಸಿದ್ದರು. ಪ್ರೇಮ್ ನಿರ್ದೇಶನದ ವಿಲನ್ ಚಿತ್ರದಲ್ಲಿ ಶಿವರಾಜ್ ಕುಮಾರ್ ಹಾಗೂ ಸುದೀಪ್ ಜೊತೆಗೆ ತೆರೆ ಹಂಚಿಕೊಂಡಿದ್ದರು.
ಶ್ರೀಕಾಂತ್ ಚಿತ್ರದ ಭಾಗವಾಗುತ್ತಿರುವ ಬಗ್ಗೆ ಚಿತ್ರ ತಂಡದಿಂದ ಅಧಿಕೃತವಾಗಿ ಘೋಷಣೆಯಾಗಲಿದ್ದು, ಅವರ ಪಾತ್ರದ ಬಗ್ಗೆ ವಿವರ ತಿಳಿದುಬರಬೇಕಿದೆ. ರಾಮ್ - ಲಕ್ಷ್ಮಣ್ ಜೋಡಿ ಸಾಹಸ ಸಂಯೋಜಿಸುತ್ತಿದ್ದು, ಇತ್ತೀಚಿಗೆ ಬಾಕಿ ಇದ್ದ ಯುವರತ್ನ ಚಿತ್ರದ ಹಾಡುಗಳ ಚಿತ್ರೀಕರಣವನ್ನು ಮುಗಿಸಿರುವ ಪುನೀತ್ ರಾಜ್ ಕುಮಾರ್, ಇದೀಗ ಜೇಮ್ಸ್ ಕಡೆಗೆ ಗಮನ ಹರಿಸಲಿದ್ದಾರೆ.
ಕರ್ಮಷಿಯಲ್ ಮನೋರಂಜನಾತ್ಮಕ ಚಿತ್ರವನ್ನು ಕಿಶೋರ್ ಪತಿಕೊಂಡ ನಿರ್ಮಿಸುತ್ತಿದ್ದು, ಚರಣ್ ರಾಜ್ ಸಂಗೀತ ಸಂಯೋಜಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


