ಸಿನಿಮಾ ಸುದ್ದಿ

ಸೋನು ನಿಗಮ್ ಜೊತೆ ಹಾಡುವುದು ನನ್ನ ಬದುಕಿನ ದೊಡ್ಡ ಕನಸಾಗಿತ್ತು: ಸಂಗೀತಾ ರಾಜೀವ್

1990 ರ ದಶಕದ ಸುಮಧುರ ರೋಮ್ಯಾಂಟಿಕ್ ಹಾಡುಗಳನ್ನು ಮತ್ತೆ ತರುವ ಪ್ರಯತ್ನವನ್ನು ಗಾಯಕಿ ಸಂಗೀತಾ ರಾಜೀವ್ ಮಾಡಿದ್ದಾರೆ.

ಸೋನು ನಿಗಮ್ ಜೊತೆ ಹಾಡುವುದು ನನ್ನ ಬದುಕಿನ ದೊಡ್ಡ ಕನಸಾಗಿತ್ತು: ಸಂಗೀತಾ ರಾಜೀವ್
ಸೋನು ನಿಗಮ್
Published On :

ಬೆಂಗಳೂರು: 1990 ರ ದಶಕದ ಸುಮಧುರ ರೋಮ್ಯಾಂಟಿಕ್ ಹಾಡುಗಳನ್ನು ಮತ್ತೆ ತರುವ ಪ್ರಯತ್ನವನ್ನು ಗಾಯಕಿ ಸಂಗೀತಾ ರಾಜೀವ್ ಮಾಡಿದ್ದಾರೆ. 

ಗಾಯಕಿ ಸಂಗೀತ ರಾಜೀವ್ ಬಿಗ್ ಬಾಸ್ ಕನ್ನಡ ಸೀಸನ್ ವಿಜೇತ ಶೈನ್ ಶೆಟ್ಟಿ ಜೊತೆ ಅಭಿನಯಿಸಿರುವ ಆಲ್ಬಂ ಗೀತೆ ರಿಲೀಸ್ ಆಗಿದ್ದು, ಆರು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.

ಹಾಡು ಉತ್ತಮವಾಗಿ ಮೂಡಿ ಬಂದಿದ್ದು, ಲಾಂಗ್ ಡ್ರೈವ್ ಹೋಗುವಾಗ ಕೇಳಲು ಈ ಹಾಡು ಇಂಪಾಗಿದೆ, ಸೋನು ನಿಗಮ್ ಜೊತೆ ಹಾಡುವ ಮೂಲಕ ಸಂಗೀತಾ ಅವರ ಕನಸು ನನಸಾಗಿದೆ.

ಸೋನು ನಿಗಮ್ ಜೊತೆ ಹಾಡಬೇಕೆಂಬುದು ನನ್ನ ಕನಸಾಗಿತ್ತು, ಇದನ್ನು ನಾನು ನಿರೀಕ್ಷಿಸಿರಲಿಲ್ಲ,  ನನ್ನ ಜೊತೆ ಹಾಡಲು ಅವರು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬ ಸಂಶಯವಿತ್ತು,  ಸೋನು ನಿಗಮ್ ಅವರ ಧ್ವನಿಯನ್ನು ಮನಸ್ಸಿನಲ್ಲಿಟ್ಟುಕೊಂಡು ನಾನು ಸಾಹಿತ್ಯ ಬರೆದಿದ್ದೆ,  ಹಲವು ತಿಂಗಳ ಹಿಂದೆಯೇ ಹಾಡು ಬರೆಯಲಾಗಿತ್ತು,  ಅಂದಿನಿಂದ ಸೋನು ನಿಗಮ್ ಸಂಪರ್ಕದಲ್ಲಿದ್ದೆ, ಆದರೆ ಅವರು ದುಬೈನಲ್ಲಿದ್ದರು, ದುಬೈ ನಲ್ಲಿ ಸರಿಯಾದ ರೆಕಾರ್ಡಿಂಗ್ ಸೌಲಭ್ಯವಿರಲಿಲ್ಲ, ಹಾಗಾಗಿ ಪ್ರಾಜೆಕ್ಟ್ ತಡವಾಯಿತು, ಮುಂಬೈಗೆ
ವಾಪಾಸಾದ ನಂತರ ರೆಕಾರ್ಡಿಂಗ್ ಮಾಡಲಾಯಿತು.

ಮಿಲನ ಸಿನಿಮಾದ ನಿನ್ನಿಂದಲೇ ಹಾಡು ನಾನು ಮತ್ತು ಗುಂಡ ಟೈಟಲ್ ಟ್ರಾಕ್ ಸೋನು ಹಾಡಿದ್ದರು, ಅದು ತುಂಬಾ ಫೇಮಸ್ ಆಗಿದ್ದವು, ಹಾಗಾಗಿ ಜನರ ಮನಸ್ಸಿನಲ್ಲಿ ಸೋನು ನಿಗಮ್ ಅವರ ಸದಾ ನೆನಪಿನಲ್ಲಿರುತ್ತಾರೆ.

ಸೋನು ನಿಗಮ್ ನಮಗಿಂತ ಹೆಚ್ಚಿನ ಕನ್ನಡಿಗರಾಗಿದ್ದಾರೆ, ಅವರು ತುಂಬಾ ವಿಧೇಯ ಮತ್ತು ವೃತ್ತಿಪರರು, ನಾನ ಸಂಯೋಜಿಸಿದ್ದ ಹಾಡನ್ನು ಮತ್ತಷ್ಟು ಸುಧಾರಿಸಿ ಅದರಲ್ಲಿ ಆಯ್ಕೆ ಮಾಡುವಂತೆ ಕಳಿಸಿದ್ದರು ಎಂದು ಸಂಗೀತಾ ತಿಳಿಸಿದ್ದಾರೆ, ಜೊತೆಗೆ ಹಾಡನ್ನು ಹೇಗೆ ಪ್ರಮೋಟ್ ಮಾಡಬೇಕು ಎಂಬ ಬಗ್ಗೆ ಸಲಹೆ ನೀಡಿದ್ದರು.

ಆಡಿಯೋ ನಂತರ ವಿಡಿಯೋ ಬಗ್ಗೆ ಹೇಳುವುದಾದರೇ ಶೈನ್ ಶೆಟ್ಟಿ ಮತ್ತು ಸಂಗೀತಾ ನಡುವಿನ ಕೆಮಿಸ್ಟ್ರಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನನ್ನ ನಟನೆಯ ಭಾಗಕ್ಕೆ ಸೋನು ಅವರು ಧ್ವನಿ ನೀಡಿರುವುದೇ ಹಾಡಿನ ಹೈಲೈಟ್ ಎಂದು ಶೈನ್ ಶೆಟ್ಟಿ ಹೇಳಿದ್ದಾರೆ. 

ಕನ್ನಡ ಹಾಡುಗಳು ಮತ್ತಷ್ಟು ಜನಪ್ರಿಯವಾಗಲು ನಾವು ಹೆಚ್ಚಿನ ಪ್ರಯತ್ನ ಮಾಡಬೇಕಾಗಿದೆ, ಸಂಜು ಮತ್ತು ಗೀತಾ ಹಾಡು ರಿಲೀಸ್ ಆದ ವೇಳೆ ನಾನು ಮುಂಬಯಿಯಲ್ಲಿದ್ದೆ, ಕನ್ನಡೇತರ ಸ್ನೇಹಿತರು ಈ ಹಾಡು ಕೇಳಿ ಇಷ್ಟಪಟ್ಟರು.

ಶೈನ್ ಹಾಗೂ ಸಂಗೀತಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಫೋಟೋ ವನ್ನು ಪೋಸ್ಟ್ ಮಾಡಿದ್ದು, ನೀನೇ ನೀನೆ ಎನ್ನುವ ಮ್ಯೂಸಿಲ್ ಆಲ್ಬಂ ಒಂದರ ಟೀಸರ್ ಬಿಡುಗಡೆ ಎನ್ನುವ ಮೂಲಕ ಸರ್ಪ್ರೈಸ್ ಮೇಲಿನ ಪರದೆಯನ್ನು ಸರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.