ಸಿನಿಮಾ ಸುದ್ದಿ

ಎರಡು ಭಾಗಗಳಲ್ಲಿ ಬರಲಿದೆ ಶರಣ್ ಅಭಿನಯದ 'ಅವತಾರ ಪುರುಷ'

ಶರಣ್ ಮತ್ತು ಅಶಿಕಾ ರಂಗನಾಥ್ ನಟನೆಯ ಅವತಾರ ಪುರುಷ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾವಾಗಿದ್ದು, ಪುಷ್ಕರ್ ಮಂಜುನಾಥಯ್ಯ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ

ಎರಡು ಭಾಗಗಳಲ್ಲಿ ಬರಲಿದೆ ಶರಣ್ ಅಭಿನಯದ 'ಅವತಾರ ಪುರುಷ'
ಶರಣ್ ಮತ್ತು ಆಶಿಕಾ ರಂಗನಾಥ್
Published On :

ಎರಡು ಭಾಗಗಳಲ್ಲಿ ಸಿನಿಮಾ ರಿಲೀಸ್ ಆಗುವುದು ಇತ್ತೀಚಿನ ಟ್ರೆಂಡ್ ಆಗಿದೆ. ಶರಣ್ ಮತ್ತು ಅಶಿಕಾ ರಂಗನಾಥ್ ನಟನೆಯ ಅವತಾರ ಪುರುಷ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾವಾಗಿದ್ದು, ಪುಷ್ಕರ್ ಮಂಜುನಾಥಯ್ಯ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ

ಬ್ಲಾಕ್ ಬಸ್ಟರ್ ಸಿನಿಮಾಗಳಾದ ಬಾಹುಬಲಿ ಮತ್ತು ಕೆಜಿಎಫ್ 2 ಭಾಗಗಳಾಗಿ ಬಂದ ನಂತರ ಇನ್ನೂ ರಿಲೀಸ್ ಆಗದ ಕಬ್ಜ,  ತೋತಾಪುರಿ ಮತ್ತು ಸುನಿ ನಿರ್ದೇಶನದ ಅವತಾರ ಪುರುಷ ಸಿನಿಮಾಗಳು 2 ಭಾಗಗಳಾಗಿ ತೆರೆ ಕಾಣಲು ಸಿದ್ಧತೆ ನಡೆಸಿವೆ.

ಸಿನಿಮಾ ಕಥೆಗೆ ಅಗತ್ಯವಿರುವ ಕಾರಣ 2 ಭಾಗಗಳನ್ನಾಗಿ ಸಿನಿಮಾ ಮಾಡಲು ನಿರ್ಧರಿಸಲಾಗಿದೆ ಎಂದು ಚಿತ್ರತಂಡ ತಿಳಿಸಿದೆ. ಅವತಾರ ಪುರುಷದ ಕಥೆಯನ್ನು ಮೊದಲು ವೆಬ್ ಸಿರೀಸ್ ಗಾಗಿ ಬರೆಯಲಾಗಿತ್ತು. ನಂತರ ಸಿನಿಮಾ ಮಾಡಲು ನಿರ್ಧರಿಸಲಾಯಿತು,

ಶರಣ್ ಅವರ ಪ್ರೇಕ್ಷಕರನ್ನು ಗಮನದಲ್ಲಿರಿಸಿಕೊಂಡು ಹೊಸ ವಿಷಯಗಳ ಬಗ್ಗೆ ಸಿನಿಮಾದಲ್ಲಿ ಸೇರಿಸಲಾಗಿದೆ.  ಅವತಾರ ಪುರುಷನ ಮೊದಲ ಚಾಪ್ಟರ್ ನಲ್ಲಿ ಅಷ್ಟ ದಿಗ್ಭಂದನ   ಮಂಡಲಕ  ಎಂಬ ಟ್ಯಾಗ್ ಲೈನ್ ಇದ್ದು, ಶರಮ್ ಪಾತ್ರಕ್ಕೆ ಕಾಮಿಡಿಯನ್ನು ಸೇರಿಸಲಾಗಿದೆ.

ಎರಡನೇ ಚಾಪ್ಟರ್ ಗೆ ತ್ರಿಶಂಕು ಎಂದು ಟ್ಯಾಗ್ ಲೈನ್ ನೀಡಲಾಗಿದೆ. ಅದರಲ್ಲಿ ಮ್ಯಾಜಿಕ್ ಎಲಿಮೆಂಟ್ ಸೇರಿಸಲಾಗಿದೆ ಎಂದು ನಿರ್ದೇಶಕ ಸುನಿ ತಿಳಿಸಿದ್ದಾರೆ. ಸದ್ಯ ಚಿತ್ರೀಕರಣದ ಕೊನೆಯ ಹಂತದಲ್ಲಿರುವ ಚಿತ್ರದ ಎರಡೂ ಭಾಗಗಳು ಈ ತಿಂಗಳು ಪೂರ್ಣಗೊಳ್ಳಲಿವೆ,  ಪಾರ್ಟ್1 ಮತ್ತು ಪಾರ್ಟ್ 2 ಎರಡನ್ನು ಒಂದರ ಹಿಂದೆ ಒಂದು ರಿಲೀಸ್ ಮಾಡಲು ನಿರ್ದರಿಸಲಾಗಿದೆ, ಸಂಕ್ರಾಂತಿ ವೇಳೆ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.