ಸಿನಿಮಾ ಸುದ್ದಿ

ಲಾಕ್'ಡೌನ್'ನಿಂದ ಆರ್ಥಿಕ ಸಂಕಷ್ಟ: ಕಿರುತೆರೆ ನಟ ಮನ್ಮೀತ್ ಗ್ರೇವಾಲ್ ಆತ್ಮಹತ್ಯೆಗೆ ಶರಣು

ಕೊರೋನಾ ಲಾಕ್'ಡೌನ್ ಹಿನ್ನೆಲೆಯಲ್ಲಿ ತೀವ್ರ ಆರ್ಥಿಕ ಸಂಕಷ್ಟ ಎದುರಾದ ಕಾರಣ ನೊಂದು ಟಿವಿ ನಟ ಮನ್ಮೀತ್ ಗ್ರೇವಾಲ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಲಾಕ್'ಡೌನ್'ನಿಂದ ಆರ್ಥಿಕ ಸಂಕಷ್ಟ: ಕಿರುತೆರೆ ನಟ ಮನ್ಮೀತ್ ಗ್ರೇವಾಲ್ ಆತ್ಮಹತ್ಯೆಗೆ ಶರಣು
ಮನ್ಮೀತ್ ಗ್ರೇವಾಲ್
Published On :

ಮುಂಬೈ: ಕೊರೋನಾ ಲಾಕ್'ಡೌನ್ ಹಿನ್ನೆಲೆಯಲ್ಲಿ ತೀವ್ರ ಆರ್ಥಿಕ ಸಂಕಷ್ಟ ಎದುರಾದ ಕಾರಣ ನೊಂದು ಟಿವಿ ನಟ ಮನ್ಮೀತ್ ಗ್ರೇವಾಲ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. 

ಮುಂಬೈನ ಖಾರ್ಗರ್ ನಿವಾಸದಲ್ಲಿ ನಟ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿದುಬಂದಿದೆ. 

ಪಂಜಾಬ್ ಮೂಲದ 23 ವರ್ಷದ ಗ್ರೇವಾಲ್ ಆದತ್ ಸೆ ಮಜ್ಯೂರ್, ಕುಲದೀಪಕ್ ನಂತಹ ಕಾರ್ಯಕ್ರಮಗಳಲ್ಲಿ ನಟಿಸಿದ್ದರು. 

ಲಾಕ್'ಡೌನ್ ಪರಿಣಾಮ ಗ್ರೇವಾಲ್ ಅವರು ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುವಂತಾಗಿತ್ತು. ಸಾಲ ತೀರಿಸಲು ಸಾಧ್ಯವಾಗದೆ ಖಿನ್ನತೆಗೆ ಒಳಗಾಗಿದ್ದರು. ಕೆಲ ವೆಬ್ ಸೀರೀಸ್ ಯೋಜನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಗ್ರೇವಾಲ್ ಲಾಕ್'ಡೌನ್ ಹಿನ್ನೆಲೆಯಲ್ಲಿ ಕೆಲಸ ನಿಲ್ಲಿಸಿದ್ದರು ಎಂದು ಸ್ನೇಹಿತ ಮತ್ತು ನಿರ್ಮಾಪಕ ಮಂಜಿತ್ ಸಿಂಗ್ ರಜಪೂತ್ ಅವರು ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.