ಸಿನಿಮಾ ಸುದ್ದಿ

ಧ್ರುವ ಸರ್ಜಾ ಅಭಿಮಾನಿಗಳಿಗೆ ಮತ್ತೊಂದು ಗಿಫ್ಟ್: ಪೊಗರು ಸಿನಿಮಾ ತಂಡದ ಹೊಸ ಪ್ಲಾನ್

ಧ್ರುವ ಸರ್ಜಾ ಅಭಿನಯದ, ನಂದ ಕಿಶೋರ್ ನಿರ್ದೇಶನದ 'ಪೊಗರು' ಚಿತ್ರದ 'ಖರಾಬು' ಹಾಡಿಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಈ ಹಾಡಿಗೆ 21 ಮಿಲಿಯನ್‌ಗೂ ಅಧಿಕ ವೀವ್ಸ್ ಅಗಿದೆ

ಧ್ರುವ ಸರ್ಜಾ ಅಭಿಮಾನಿಗಳಿಗೆ ಮತ್ತೊಂದು ಗಿಫ್ಟ್: ಪೊಗರು ಸಿನಿಮಾ ತಂಡದ ಹೊಸ ಪ್ಲಾನ್
ಧ್ರುವ ಸರ್ಜಾ
Published On :

ಧ್ರುವ ಸರ್ಜಾ ಅಭಿನಯದ, ನಂದ ಕಿಶೋರ್ ನಿರ್ದೇಶನದ 'ಪೊಗರು' ಚಿತ್ರದ 'ಖರಾಬು' ಹಾಡಿಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಈ ಹಾಡಿಗೆ 21 ಮಿಲಿಯನ್‌ಗೂ ಅಧಿಕ ವೀವ್ಸ್ ಅಗಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರದ ಹಾಡೊಂದಕ್ಕೆ ಯೂಟ್ಯೂಬ್‌ನಲ್ಲಿ ಸಿಕ್ಕ ಬಹುದೊಡ್ಡ ಹಿಟ್ ಇದು.

ಇದರಿಂದ ಸಂತಸಗೊಂಡಿರುವ ಪೊಗರು ಸಿನಿಮಾ ತಂಡ ಮತ್ತೊಂದು ಪ್ಲಾನ್ ಮಾಡಿದೆ.ಧ್ರುವ ಸರ್ಜಾ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ಈ ಹಾಡಿನಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ಪ್ರೀತಿಸುವಂತೆ ಪೀಡಿಸುವ ದೃಶ್ಯಗಳಿವೆ, ಆನಂದ್ ಆಡಿಯೋ ಬಿಡುಗಡೆ ಮಾಡಿರುವ ಈ ಹಾಡು ವೈರಲ್  ಆಗಿದೆ. ಇತ್ತೀಚಿನ ದಿನಗಳಲ್ಲಿ ಟಿಕ್ ಟಾಕ್‌ನಲ್ಲಿಯೂ ಈ ಹಾಡು ಹೆಚ್ಚು ಹರಿದಾಡುತ್ತಿದೆ.

ಚಂದನ್ ಶೆಟ್ಟಿ ಸಂಗೀತ ನೀಡಿರುವ ಈ ಹಾಡಿನ ಯಶಸ್ಸು, ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನು ಮೂಡಿಸಿದೆ. ಹಾಗೆಯೇ ಈಗ ಕೊರೊನಾ ವೈರಸ್ ಭೀತಿ ಇನ್ನೂ ಇರುವುದರಿಂದ ಚಿತ್ರೀಕರಣ ಪೂರ್ಣಗೊಳಿಸಿ ಸಿನಿಮಾ ತೆರೆಗೆ ತರುವುದು ತಡವಾಗುತ್ತದೆ. ಹಾಗಾಗಿ ಅಭಿಮಾನಿಗಳ ಬಯಕೆ ತಣಿಸಲು ಚಿತ್ರತಂಡ ಮತ್ತೊಂದು ಉಪಾಯ ಮಾಡಿದೆ.

'ಖರಾಬು' ಹಾಡಿನ ವಿಚಿತ್ರ ಗೆಟಪ್ ಮತ್ತು ನೃತ್ಯಗಳು ಅಭಿಮಾನಿಗಳಿಗೆ ಇಷ್ಟವಾಗಿದೆ. ಈ ಕಾರಣದಿಂದ ಈ ಹಾಡಿನ ಮೇಕಿಂಗ್ ವಿಡಿಯೋವನ್ನು ಬಿಡುಗಡೆ ಮಾಡಲು ನಂದ ಕಿಶೋರ್ ಬಯಸಿದ್ದಾರೆ. ಈಗ ನಿಯಮಗಳು ಸಡಿಲಿಕೆಯಾಗಿರುವುದರಿಂದ ಮೇಕಿಂಗ್ ವಿಡಿಯೋ ಸಿದ್ಧಪಡಿಸಿ ಬಳಿಕ ಉಳಿದ ಚಟುವಟಿಕೆಗಳನ್ನು ಮುಂದುವರಿಸಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಚಿತ್ರದಲ್ಲಿ ನಾಯಕನ ಇಂಟ್ರೊಡಕ್ಷನ್ ಹಾಡಿನ ಚಿತ್ರೀಕರಣ ಬಾಕಿ ಉಳಿದಿದೆ. ನಿಗದಿಯಾದಂತೆ ನಡೆದಿದ್ದರೆ ಈ ವೇಳೆಗೆ 'ಪೊಗರು' ಚಿತ್ರಮಂದಿರದಲ್ಲಿ ಇರುತ್ತಿತ್ತು. ಹೈದರಾಬಾದ್‌ನಲ್ಲಿ ಹಾಡಿನ ಶೂಟಿಂಗ್ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಕೊರೊನಾ ವೈರಸ್ ಕಾರಣದಿಂದ ಚಿತ್ರೀಕರಣ ಸ್ಥಗಿತಗೊಂಡಿತ್ತು.

ಬಿಕೆ ಗಂಗಾಧರ್ ನಿರ್ಮಾಣದ ಸಿನಿಮಾದಲ್ಲಿ ಧ್ರುವ ಸರ್ಜಾ ರಶ್ಮಿಕಾ ಮಂದಣ್ಣ, ಚಿಕ್ಕಣ್ಣ, ಕುರಿ ಪ್ರತಾಪ್, ರವಿ ಶಂಕರ್ ಮುಂತಾದವರು ನಟಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.