ಕೋವಿಡ್-19 ಎಫೆಕ್ಟ್: ರುದ್ರಪ್ರಯಾಗ ಚಿತ್ರೀಕರಣ ಮುಂದೂಡಿದ ರಿಷಬ್ ಶೆಟ್ಟಿ
ಎ;ಲ್ಲವೂ ಅಂದುಕೊಂಡಂತೆ ನಡೆದಿದ್ದರೆ ನಿರ್ದೇಶಕ ರಿಷಬ್ ಶೆಟ್ಟಿ ಮಾರ್ಚ್ 26 ರಂದು ರುದ್ರಪ್ರಯಾಗ ಚಿತ್ರದ ಶೂಟಿಂಗ್ ಪ್ರಾರಂಭಿಸಬೇಕಿತ್ತು ಆದರೆ ಈಗ ಕೋವಿಡ್ -19 ಹಾವಳಿ ಕಾರಣ ಮುಂದೂಡಲ್ಪಟ್ಟಿದೆ.

ಎ;ಲ್ಲವೂ ಅಂದುಕೊಂಡಂತೆ ನಡೆದಿದ್ದರೆ ನಿರ್ದೇಶಕ ರಿಷಬ್ ಶೆಟ್ಟಿ ಮಾರ್ಚ್ 26 ರಂದು ರುದ್ರಪ್ರಯಾಗ ಚಿತ್ರದ ಶೂಟಿಂಗ್ ಪ್ರಾರಂಭಿಸಬೇಕಿತ್ತು ಆದರೆ ಈಗ ಕೋವಿಡ್ -19 ಹಾವಳಿ ಕಾರಣ ಮುಂದೂಡಲ್ಪಟ್ಟಿದೆ.
ಜಯಣ್ಣ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಅನಂತ್ ನಾಗ್ ಮುಖ್ಯ ಪಾತ್ರದಲ್ಲಿದ್ದಾರೆ.
ನಿರ್ದೇಶಕ ಶೆಟ್ಟಿತಮ್ಮ ಊರಾದ ಕುಂದಾಪುರಕ್ಕೆ ತರಳಿದ್ದು ಅಲ್ಲೇ ನೆಲೆಸಿದ್ದಾರೆ. ಈ ಬಿಡುವಿನ ವೇಳೆಯಲ್ಲಿ ಅವರು ತಮ್ಮ ಚಿತ್ರದ ಸ್ಕ್ರಿಪ್ಟ್ ಅನ್ನು ಮರುಪರಿಶೀಲನೆ ಮಾಡುತ್ತಿದ್ದಾರೆ.
"ಶೂಟಿಂಗ್ ಗುರುವಾರದಿಂದ ಪ್ರಾರಂಭವಾಗಬೇಕಿತ್ತು, ಆದರೆ ಈಗ ನಾವು ಅದನ್ನು ಮುಂದೂಡಬೇಕಾಯಿತು. ಕಲಾವಿದರ ದಿನಾಂಕಗಳ ಲಭ್ಯತೆಗೆ ಅನುಗುಣವಾಗಿ ಮೊದಲ ವೇಳಾಪಟ್ಟಿಯನ್ನು ಈಗ ಪುನರ್ ಪರಿಶೀಲಿಸಬೇಕಿದೆ/ ಈಗಾಗಲೇ ಸ್ಕ್ರಿಪ್ಟ್ ಅನ್ನು ಅಂತಿಮಗೊಳಿಸಿದ್ದರಿಂದ ಮತ್ತು ಸಂಭಾಷಣೆಗಳು ಸಿದ್ಧವಾಗಿರುವುದರಿಂದ ನಾನೀಗ ಹೆಚ್ಚಿನ ಕಥೆಯಲ್ಲಿ ಸುಧಾರಿಸುವ ಕೆಲಸದಲ್ಲಿದ್ದೇನೆ"
ಏತನ್ಮಧ್ಯೆ ರಿಷಬ್ ಇನ್ನೂ ಎರಡು ಸ್ಕ್ರಿಪ್ಟ್‌ಗಳನ್ನು ಬರೆಯಲು ಮುಂದಾಗುತ್ತಿದ್ದಾರೆ.“ವಿಷಯಗಳು ಅಥವಾ ಪ್ರಕಾರವನ್ನು ಬಹಿರಂಗಪಡಿಸುವುದು ಈಗ ಸಾಧ್ಯವಿಲ್ಲ. , ಒಂದು ಕಥೆಯಲ್ಲಿ, ಹುಟ್ಟಿನಿಂದ 45 ವರ್ಷಗಳವರೆಗೆ ವ್ಯಕ್ತಿಯ ಜೀವನ ಪ್ರಯಾಣವನ್ನು ಅನ್ವೇಷಿಸಲು ನಾನು ಬಯಸುತ್ತೇನೆ ಎಂದುನಾನು ಹೇಳಬಲ್ಲೆ. ಎರಡನೆಯ ಕಥಾವಸ್ತುವು 1970 ರ ದಶಕದ ಒಂದು ಆಕ್ಷನ್ ಡ್ರಾಮಾ ಇದು ವಾಸ್ತವಕ್ಕೆ ಹತ್ತಿರವಾಗಲಿದೆ, ನಮ್ಮ ಸುತ್ತಮುತ್ತಲಿನ ಘಟನೆಗಳ ಸುತ್ತಲೂ ಕಥೆ ಹೆಣೆದಿದ್ದೇನೆ"ಅವರು ಹೇಳುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


