ಕೊನೆಗೂ ರಿವೀಲ್ ಆಯ್ತು ಕೆಜಿಎಫ್ 2 ರಿಲೀಸ್ ಡೇಟ್!
ಕೆಜಿಎಫ್ ಸಿನಿಮಾ ತೆರೆಕಂಡು ಒಂದುವರೆ ವರ್ಷ ಕಳೆದಿದೆ. ಈಗ ಕೆಜಿಎಫ್ ಚಾಪ್ಟರ್ 2 ಯಾವಾಗ ಬರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

ಕೆಜಿಎಫ್ ಸಿನಿಮಾ ತೆರೆಕಂಡು ಒಂದುವರೆ ವರ್ಷ ಕಳೆದಿದೆ. ಈಗ ಕೆಜಿಎಫ್ ಚಾಪ್ಟರ್ 2 ಯಾವಾಗ ಬರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.
ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಮೂಲಗಳ ಪ್ರಕಾರ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 500 ಕೋಟಿ ರೂಪಾಯಿ ಕಮಾಯಿ ಮಾಡಲಿದೆ ಎನ್ನಲಾಗುತ್ತಿದೆ. ಈ ಮಧ್ಯೆ ಸಿನಿಮಾ ರಿಲೀಸ್ ಡೇಟ್ ಬಗ್ಗೆ ಹೊಸ ಅಪ್ಡೇಟ್ ಒಂದು ಸಿಕ್ಕಿದೆ.
ಕೆಜಿಎಫ್ ಸಿನಿಮಾ ತೆರೆಕಂಡು ಒಂದುವರೆ ವರ್ಷ ಕಳೆದಿದೆ. ಈಗ ಕೆಜಿಎಫ್ ಚಾಪ್ಟರ್ 2 ಯಾವಾಗ ಬರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.
ರಿಲೀಸ್ ವಿಚಾರದಲ್ಲಿ ಈವರೆಗೆ ಸಿನಿಮಾ ತಂಡದಿಂದ ಯಾವುದೇ ಮಾಹಿತಿ ಹೊರ ಬಿದ್ದಿಲ್ಲ. ಅಕ್ಟೋಬರ್ 23 ರಂದು ದಸರಾ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ಕೆಜಿಎಫ್ ಚಿತ್ರತಂಡ ಹೈದರಾಬಾದ್ ನಲ್ಲಿ ಶೂಟಿಂಗ್ ಮುಗಿಸಿದೆ.
ಇದೇ ದಸರಾ ಹಬ್ಬಕ್ಕೆ ಅಂದರೆ ಅಕ್ಟೋಬರ್ 23ಕ್ಕೆ ಕೆಜಿಎಫ್-2 ಸಿನಿಮಾ ಪ್ಯಾನ್ ಇಂಡಿಯಾ ಹಾಗೂ ವಿದೇಶಗಳಲ್ಲೂ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ಬಗ್ಗೆ ಚಿತ್ರತಂಡದಿಂದ ಇನ್ನೂ ಅಧಿಕೃತ ಮಾಹಿತಿ ದೊರೆತಿಲ್ಲ.
ಈಗಾಗಲೇ ಚಿತ್ರದ ಪ್ರಮುಖ ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು ಹೈದರಾಬಾದ್ನಲ್ಲಿ ಚಿತ್ರತಂಡ ಕೊನೆಯ ಹಂತದ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದುವರೆಗೂ ಚಿತ್ರ ನಿರ್ದೇಶಕ ಪ್ರಶಾಂತ್ ಚಿತ್ರದ ಬಗ್ಗೆ ಎಲ್ಲಾ ರೀತಿಯ ಅಪ್ಡೇಟ್ ಗಳನ್ನ ನೀಡ್ತಿದ್ದಾರೆ.
ಚಿತ್ರ ರಿಲೀಸ್ ಡೇಟ್ ಬಗ್ಗೆ ಎಲ್ಲೂ ಮಾತಾಡಿಲ್ಲ. ಆದ್ರೆ ಕೆಜಿಎಫ್-2 ನಿರ್ಮಿಸ್ತಿರೋ ಹೊಂಬಾಳೆ ಫಿಲಂನ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಕಾರ್ತಿಕ್ ಗೌಡ ಈ ತಿಂಗಳ ಕೊನೆಯಲ್ಲಿ ನಿಮಗೆ ಚಿತ್ರದ ಬಗ್ಗೆ ಅಪ್ಡೇಟ್ ಸಿಗಲಿದೆ ಆದ್ರೆ ಖಂಡಿತ ಕೆಜಿಎಫ್-2 ಟೀಸರ್ ಬಗ್ಗೆ ಅಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನೇನು ಚಿತ್ರ ಮುಗಿಯೋ ಹಂತದಲ್ಲಿರುವುದರಿಂದ ದಸರಾ ಟೈಂಗೆ ರಿಲೀಸ್ ಆಗಬಹುದು ಅನ್ನೋ ಲೆಕ್ಕಾಚಾರದ ಮೇಲೆ ಈ ಸುದ್ದಿ ಹೊರಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


