'ರಾಜಮಾರ್ತಾಂಡ': ಅಣ್ಣ ಚಿರಂಜೀವಿ ಸರ್ಜಾ ಪಾತ್ರಕ್ಕೆ ಧುೃವ ಸರ್ಜಾ ಡಬ್ಬಿಂಗ್!
ಚಿರಂಜೀವಿ ಸರ್ಜಾ ಅವರ ಅಕಾಲಿಕ ಮೃತ್ಯು ಕನ್ನಡ ಚಿತ್ರರಂಗಕ್ಕೆ ಅಪಾರ ನಷ್ಟವನ್ನೇ ತಂದೊಡ್ಡಿದ್ದು, ಇದೀಗ ಚಿರಂಜೀವಿ ಸರ್ಜಾ ಅವರು ಅಭಿನಯಿಸಿದ್ದ ಸಿನಿಮಾವೊಂದಕ್ಕೆ ಅವರ ಸಹೋದರ ಧ್ರುವ ಸರ್ಜಾ ಅವರು ಡಬ್ ಮಾಡಲಿದ್ದಾರೆ.

ಬೆಂಗಳೂರು: ಚಿರಂಜೀವಿ ಸರ್ಜಾ ಅವರ ಅಕಾಲಿಕ ಮೃತ್ಯು ಕನ್ನಡ ಚಿತ್ರರಂಗಕ್ಕೆ ಅಪಾರ ನಷ್ಟವನ್ನೇ ತಂದೊಡ್ಡಿದ್ದು, ಇದೀಗ ಚಿರಂಜೀವಿ ಸರ್ಜಾ ಅವರು ಅಭಿನಯಿಸಿದ್ದ ಸಿನಿಮಾವೊಂದಕ್ಕೆ ಅವರ ಸಹೋದರ ಧ್ರುವ ಸರ್ಜಾ ಅವರು ಡಬ್ ಮಾಡಲಿದ್ದಾರೆ.
ಚಿರಂಜೀವಿ ಸರ್ಜಾ ಕಾಣಿಸಿಕೊಂಡಿದ್ದ ರಾಜಮಾರ್ತಾಂಡ ಚಿತ್ರಕ್ಕೆ ನಟ ಧ್ರುವ ಸರ್ಜಾ ಅವರು ಡಬ್ ಮಾಡುತ್ತಿದ್ದಾರೆಂದು ತಿಳಿದುಬಂದಿದೆ. ಈ ಕುರಿತು ರಾಜಮಾರ್ತಾಂಡ ಚಿತ್ರ ನಿರ್ದೇಶಕ ರಾಮ್ ನಾರಾಯಣ್ ಅವರು ದೃಢಪಡಿಸಿದ್ದಾರೆ.
ಚಿರಂಜೀನಿ ಸರ್ಜಾ ಅವರು ನಿಧನ ಹೊಂದುವುದಕ್ಕೂ ಮುನ್ನ ಹಲವು ಪ್ರಾಜೆಕ್ಟ್ ಗಳಲ್ಲಿ ತೊಡಗಿಕೊಂಡಿದ್ದರು. ಆದರೆ, ಅವರ ನಿಧನದ ನಂತರ ಆ ಎಲ್ಲಾ ಸಿನಿಮಾಮಗಳು ಅರ್ಧಕ್ಕೆ ನಿಂತುಹೋಗಿದ್ದವು.
ಚಿರಂಜೀವಿ ಸರ್ಜಾ ಅಭಿನಯಿಸಿದ್ದ ರಣಂ ಸಿನಿಮಾ ಬಿಡುಗಡೆಗೆ ಸಿದ್ಧವಾಗಿತ್ತು. ಇನ್ನು ಏಪ್ರಿಲ್ ಸಿನಿಮಾದ ಕಾರ್ಯಗಳು ಬಾಕಿಯಿತ್ತು. ಇನ್ನು ರಾಜಮಾರ್ತಾಂಡ ಚಿತ್ರದ ಒಂದು ಹಾಡಿನ ಚಿತ್ರೀಕರಣ ಹಾಗೂ ಡಬ್ಬಿಂಗ್ ಬಾಕಿ ಉಳಿದಿತ್ತು. ಅಷ್ಟರಲ್ಲಾಗಲೇ ಚಿರಂಜೀವಿ ಅವರು ಇಹಲೋಕ ತ್ಯಜಿಸಿದ್ದು, ಚಿತ್ರತಂಡ ಕಂಗಾಲಾಗುವಂತೆ ಮಾಡಿತ್ತು.
ಇದರಂತೆ ಸಂಕಷ್ಟದಲ್ಲಿದ್ದ ಚಿತ್ರತಂಡಕ್ಕೆ ಧ್ರುವಸರ್ಜಾ ಅವರು ಬೆಂಬಲ ನೀಡಿದ್ದು, ಚಿರಂಜೀವಿ ಪಾತ್ರಕ್ಕೆ ಧ್ವನಿ ನೀಡಲು ಒಪ್ಪಿಕೊಂಡಿದ್ದಾರೆ. ಈ ಮೂಲಕ ಸಹೋದರನ ಪಾತ್ರಕ್ಕೆ ತಮ್ಮ ಧ್ವನಿಯ ಮೂಲಕ ಜೀವ ತುಂಬಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


