'ವಿಂಡೋ ಸೀಟ್' ಗಾಗಿ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ಧರಿಸಿದ ಶೀತಲ್ ಶೆಟ್ಟಿ
"ವಿಂಡೋ ಸೀಟ್" ಚಿತ್ರದ ಶೂಟಿಂಗ್ ಜನವರಿಯಲ್ಲಿ ಪೂರ್ಣವಾದಾಗ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಆರು ತಿಂಗಳ ನಂತರ ಪ್ರಾರಂಭವಾಗಲಿದೆ ಎನ್ನುವುದು ಚಿತ್ರತಂಡದ ಅರಿವಿಗೂ ಬಂದಿರಲಿಲ್ಲ. ಆದರೆ ಈಗ ಹೆಚ್ಚಿನ ಕೆಲಸ ಕಾರ್ಯಗಳಿಗೆ ಬಾಗಿಲು ತೆರೆದಿರುವ ಕಾರಣ ಶೀತಲ್ ಶೆಟ್ಟಿ ನಿರ್ದೇಶನದ ಚೊಚ್ಚಲಚಿತ್ರದ ಬಗ್ಗೆ ಶನಿವಾರ ಅಧಿಕೃತ ಪ್ರಕಟಣೆ ಹೊರಬಂದಿದೆ.

"ವಿಂಡೋ ಸೀಟ್" ಚಿತ್ರದ ಶೂಟಿಂಗ್ ಜನವರಿಯಲ್ಲಿ ಪೂರ್ಣವಾದಾಗ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಆರು ತಿಂಗಳ ನಂತರ ಪ್ರಾರಂಭವಾಗಲಿದೆ ಎನ್ನುವುದು ಚಿತ್ರತಂಡದ ಅರಿವಿಗೂ ಬಂದಿರಲಿಲ್ಲ. ಆದರೆ ಈಗ ಹೆಚ್ಚಿನ ಕೆಲಸ ಕಾರ್ಯಗಳಿಗೆ ಬಾಗಿಲು ತೆರೆದಿರುವ ಕಾರಣ ಶೀತಲ್ ಶೆಟ್ಟಿ ನಿರ್ದೇಶನದ ಚೊಚ್ಚಲಚಿತ್ರದ ಬಗ್ಗೆ ಶನಿವಾರ ಅಧಿಕೃತ ಪ್ರಕಟಣೆ ಹೊರಬಂದಿದೆ.
ಕೆಎಸ್‌ಕೆ ಶೋರೀಲ್ ಸಹಭಾಗಿತ್ವದಲ್ಲಿ ಈ ಚಿತ್ರ ತಯಾರಾಗುತ್ತಿದ್ದು ನಿರೂಪ್ ಭಂಡಾರಿ ರಿ ನಾಯಕನಾಗಿ ನಟಿಸಿರುವ ರೊಮ್ಯಾಂಟಿಕ್-ಥ್ರಿಲ್ಲರ್ ಚಿತ್ರವನ್ನು ಫ್ಯಾಂಟಮ್ ನಿರ್ಮಾಪಕ ಮಂಜುನಾಥ್ ಗೌಡ ಅಲಿಯಾಸ್ ಜ್ಯಾಕ್ ಮಂಜು ನಿರ್ಮಾಣ ಮಾಡಿದ್ದಾರೆ.
ಶೀತಲ್ ನಿರ್ದೇಶಕರಾಗಿರುವುದರ ಜತೆಗೆ ಚಿತ್ರಕ್ಕೆ ಕಥೆಯನ್ನೂ ಬರೆದಿದ್ದು ಅಮೃತ ಅಯ್ಯಂಗಾರ್ ಮತ್ತು ಸಂಜನಾ ಆನಂದ್ ಚಿತ್ರದ ಪ್ರಧಾನ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.. ಈ ಚಿತ್ರದಲ್ಲಿ ರವಿಶಂಕರ್ ಕೂಡ ಮುಖ್ಯ ಪಾತ್ರದಲ್ಲಿದ್ದು ನಟ ಸೂರಜ್ ಮತ್ತು ನಾಟಕ ಕಲಾವಿದ ಲೇಖಾ ಕೂಡ ತಂಡದ ಭಾಗವಾಗಿದ್ದಾರೆ.
ಅರ್ಜುನ್ ಜನ್ಯಾ ಸಂಗೀತ ಡಿಒಪಿ ವಿಘ್ನೇಶ್ ರಾಜ್ ಕ್ಯಾಮೆರಾ ವರ್ಕ್ ಹಾಗೂ ರಿತ್ವಿತ್ ಎಡಿಟಿಂಗ್ ವರ್ಕ್ ಕೆಲಸದಲ್ಲಿ ತೊಡಗಿದ್ದಾರೆ."ಜನವರಿಯಲ್ಲಿ ಶೂಟಿಂಗ್ ಪೂರ್ಣಗೊಂಡಿದೆ, ಮತ್ತು ನಾವು ಈಗ ಹಿನ್ನೆಲೆ ಸಂಗೀತದ ಕೆಲಸದಲ್ಲಿ ತೊಡಗಿದ್ದೇನೆ. ದ್ವಿತೀಯಾರ್ಧದ ಎಡಿಟಿಂಗ್ ನಡೆಯುತ್ತಿದೆ. " ಶೀತಲ್ ಹೇಳಿದ್ದಾರೆ.
"ಸಾಂಕ್ರಾಮಿಕ ರೋಗವು ಶೀಘ್ರವೇ ಗುಣವಾಗಲಿದೆ ಎಂದು ನಾನು ಆಶಿಸುವೆ. 2020 ರಲ್ಲಿ ನನ್ನ ನಿರ್ದೇಶನದ ಚಿತ್ರ ಬಿಡುಗಡೆ ಮಾಡಲು ನನಗೆ ಸಾಧ್ಯವಾಗಿದೆ" ಎಂದು ಅವರು ಹೇಳುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


