ಸಿನಿಮಾ ಸುದ್ದಿ

ಪ್ರೀತಿಸಿದವರೊಂದಿಗೆ ಸಪ್ತಪದಿ ತುಳಿಯಲು ತಯಾರಾದ 'ಮೊಗ್ಗಿನ ಮನಸು' ಬೆಡಗಿ ಶುಭಾ ಪೂಂಜಾ

ಮೊಗ್ಗಿನ ಮನಸು ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶಿಸಿದ್ದ ನಟಿ ಶುಭಾ ಪೂಂಜಾ ಹಸೆಮಣೆ ಏರಲು ಸಿದ್ದತೆ ನಡೆಸಿದ್ದಾರೆ.

ಪ್ರೀತಿಸಿದವರೊಂದಿಗೆ ಸಪ್ತಪದಿ ತುಳಿಯಲು ತಯಾರಾದ 'ಮೊಗ್ಗಿನ ಮನಸು' ಬೆಡಗಿ ಶುಭಾ ಪೂಂಜಾ
ಶುಭಾ ಪೂಂಜಾ ಸುಮಂತ್ ಮಹಾಬಲ
Published On :

ಮೊಗ್ಗಿನ ಮನಸು ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶಿಸಿದ್ದ ನಟಿ ಶುಭಾ ಪೂಂಜಾ ಹಸೆಮಣೆ ಏರಲು ಸಿದ್ದತೆ ನಡೆಸಿದ್ದಾರೆ. 

ಜಯಕರ್ನಾಟಕ ಸಂಘಟೆನೆಯ ಮುಖಂಡ, ಉದ್ಯಮಿ ಸುಮಂತ್ ಮಹಾಬಲ ಅವರೊಂದಿಗೆ ವಿವಾಹವಾಗಲು ನಟಿ ಶುಭಾ ಪೂಂಜಾ  ನಿರ್ಧರಿಸಿದ್ದಾರೆ. ಈ ಇಬ್ಬರ ವಿವಾಹ ಮಂಗಳೂರಿನಲ್ಲಿ ನೆರವೇರಿದರೆ, ಆರತಕ್ಷತೆ ಬೆಂಗಳೂರಿನಲ್ಲಿ ನಡೆಯಲಿದೆ.

Story image

ಇನ್ನು ಶುಭಾ ಅವರನ್ನು ವರಿಸುತ್ತಿರುವ ಸುಮಂತ್ ಜಯಕರ್ನಾಟಕ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲೆ ವಿಭಾಗದ ಉಪಾಧ್ಯಕ್ಷರಾಗಿದ್ದಾರೆ. ಈ ಇಬ್ಬರೂ ಒಂದು ವರ್ಷದಿಂದ ಪ್ರೀತಿಸುತ್ತಿದ್ದು ಈ ಡಿಸೆಂಬರ್ ನಲ್ಲಿ ಸಪ್ತಪದಿ ತುಳಿಯುವ ನಿರೀಕ್ಷೆ ಇದೆ.

Story image

"ತ್ರಿದೇವಿ" ಚಿತ್ರದ ಮೂಲಕ ನಿರ್ಮಾಪಕಿಯಾಗಿ ಭಡ್ತಿ ಪಡೆದಿರುವ ನಟಿ ಸದ್ಯ "ರೈಮ್ಸ್" ಚಿತ್ರದಲ್ಲಿ ಟಿವಿ ವಾಹಿನಿಯೊಂದರ ನಿರೂಪಕಿ ಪಾತ್ರದಲ್ಲಿ ಕಾಣಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.