ಜಾಲತಾಣ ಬಲ್ಲವನಿಗೆ ಕೋಟಿಕಣ್ಣು ಅರಿವಿರಲಿ ಮನುಜ: ಜಾರುವ ಪರದೆಯ ಮುಂದೆ ನಾಟಕ ನೈಜವಿರಲಿ
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಈಡಾಗಿರುವ ಡ್ರೋನ್ ಪ್ರತಾಪ್ ಖಾಸಗಿ ವಾಹಿನಿಯೊಂದರಲ್ಲಿ ಸುಮಾರು ಮೂರು ಗಂಟೆಗಳ ಕಾಲ ಕುಳಿತು ತನ್ನ ಬಗೆಗಿನ ಆರೋಪಗಳಿಗೆ ಉತ್ತರ ನೀಡಿದ್ದಾನೆ.

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಈಡಾಗಿರುವ ಡ್ರೋನ್ ಪ್ರತಾಪ್ ಖಾಸಗಿ ವಾಹಿನಿಯೊಂದರಲ್ಲಿ ಸುಮಾರು ಮೂರು ಗಂಟೆಗಳ ಕಾಲ ಕುಳಿತು ತನ್ನ ಬಗೆಗಿನ ಆರೋಪಗಳಿಗೆ ಉತ್ತರ ನೀಡಿದ್ದಾನೆ.
ಡ್ರೋಣ್ ಪ್ರತಾಪ್ ನನ್ನು ನಾಡಿಗೆ ಪರಿಚಯಿಸಿ ತಪ್ಪು ಮಾಡಿದೆ’ ಎಂದು ಇತ್ತೀಚೆಗಷ್ಟೇ ಹೇಳಿದ್ದ ಹಿರಿಯ ನಟ ಜಗ್ಗೇಶ್, ಈತನ ಉತ್ತರಗಳನ್ನೆಲ್ಲ ಟಿವಿಯಲ್ಲಿ ನೋಡಿ ತಮ್ಮ ಅಭಿಪ್ರಾಯವನ್ನು ಟ್ವಿಟ್ಟರ್ ನಲ್ಲಿ ಮಾರ್ಮಿಕವಾಗಿ ಹಂಚಿಕೊಂಡಿದ್ದಾರೆ.
ಪ್ರತಾಪ್ ಸಂದರ್ಶನ ನಡೆಯುತ್ತಿದ್ದ ಸಮಯದಲ್ಲೇ ಸರಣಿ ಟ್ವೀಟ್‌ಗಳನ್ನು ಮಾಡಿರುವ ಜಗ್ಗೇಶ್ ಎಲ್ಲಿಯೂ ಪ್ರತಾಪ್‌ನ ಹೆಸರನ್ನು ಪ್ರಸ್ತಾಪಿಸಿಲ್ಲ. ‘‘ಪ್ರಾಮಾಣಿಕವಾಗಿ ಕಲಿತು ಅರಿತ ಜ್ಞಾನಿ ಸಾವಿರ ಅನುಮಾನದ ಪ್ರಶ್ನೆಗೆ ಒಂದೆ ಮಾತಿನಲ್ಲಿ ಸಾಕ್ಷಿಸಮೇತ ಉತ್ತರಕೊಟ್ಟು ಪುಟಿದೇಳುತ್ತಾನೆ! ಆಂತರ್ಯದಲ್ಲಿ ಗೆದ್ದು ಗಳಿಸಲು ವಾಮಮಾರ್ಗ ಅನುಸರಿಸುವವ ಮಾತಿಗೆ ಮಾತು ಪೋಣಿಸಿ ಅನುಮಾನಿಸಿದವರ ದಾರಿ ತಪ್ಪಿಸಿ ಬೀಸುವ ದೊಣ್ಣೆ ತಪ್ಪಿಸಿಕೊಳ್ಳಲು ಯತ್ನಿಸುತ್ತಾನೆ! ಜಾಲತಾಣ ಬಲ್ಲವರಿಗೆ ಕೋಟಿ ಕಣ್ಣು ಅರಿವಿರಲಿ ಮನುಜ!’’ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


