ಶಕೀಲಾ ಬಯೋಪಿಕ್ ಹಕ್ಕು ನನ್ನದು: ಇಂದ್ರಜಿತ್ ಲಂಕೇಶ್
ಸುಗೇಶ್ ನಿರ್ದೇಶನದ 'ಶಕೀಲಾ' ಮಲೇಯಾಳಂ ಚಿತ್ರದ ಟ್ರೈಲರ್ ಜೂನ್ 28 ರಂದು ಬಿಡುಗಡೆಯಾಗಿದ್ದು, ಇಂದ್ರಜಿತ್ ಲಂಕೇಶ್ ನಿರ್ದೇಶನದ ಸಿನಿಮಾ ಏನಾಯಿತು ಎಂಬುದು ಸಿನಿ ರಸಿಕರನ್ನು ಕಾಡುತ್ತಿದೆ.

ಬೆಂಗಳೂರು: ಸುಗೇಶ್ ನಿರ್ದೇಶನದ 'ಶಕೀಲಾ' ಮಲೇಯಾಳಂ ಚಿತ್ರದ ಟ್ರೈಲರ್ ಜೂನ್ 28 ರಂದು ಬಿಡುಗಡೆಯಾಗಿದ್ದು, ಇಂದ್ರಜಿತ್ ಲಂಕೇಶ್ ನಿರ್ದೇಶನದ ಸಿನಿಮಾ ಏನಾಯಿತು ಎಂಬುದು ಸಿನಿ ರಸಿಕರನ್ನು ಕಾಡುತ್ತಿದೆ.ರಿಚಾ ಚಡ್ಡಾ ಮತ್ತು ಪಂಕಜ್ ತ್ರಿಪಾಠಿ ನಟಿಸಿರುವ ಶಕೀಲಾ ಚೊಚ್ಚಲ ಬಾಲಿವುಡ್ ಚಿತ್ರವನ್ನು ಇಂದ್ರಜಿತ್ ನಿರ್ದೇಶಿಸಿದ್ದು, ಆ ಚಿತ್ರ ಬಿಡುಗಡೆಯಾಗಬೇಕಿದೆ.
ಮಲಯಾಳಂ ಹೊಸ ಚಿತ್ರವನ್ನು ವೀಕ್ಷಿಸಿದ ಜನರು,ಇಂದ್ರಜಿತ್ ಲಂಕೇಶ್ ನಿರ್ದೇಶನದ ಹಿಂದಿ ಚಿತ್ರದ ಬಗ್ಗೆ ಪ್ರಶ್ನಿಸುತ್ತಿದ್ದಾರೆ.ಟೀಸರ್ ಬಿಡುಗಡೆಯಾದ ಬಳಿಕ ಸಾಕಷ್ಟು ಫೋನ್ ಕರೆ ಹಾಗೂ ಸಂದೇಶಗಳು ಬಂದಿದ್ದು,ಅದೊಂದು ಕಿರು ಚಿತ್ರ ಎಂಬುದನ್ನು ತಿಳಿದಿದ್ದೇನೆ.
ಅದು ಶಕೀಲಾ ಜೀವನಾಧಾರಿತ ಚಿತ್ರವಲ್ಲಾ, ಆದಾಗ್ಯೂ,ಶಕೀಲಾ ಎಂಬ ಹೆಸರಿಟ್ಟಿರುವುದರಿಂದ ಟೀಸರ್ ಸಾಕಷ್ಟು ವೈರಲ್ ಆಗಿದೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ಶಕೀಲಾ ಬಯೋಫಿಕ್ ಹಕ್ಕನ್ನು ನಾನು ಪಡೆದುಕೊಂಡಿದ್ದು,ಚಿತ್ರವನ್ನು ಪೂರ್ಣಗೊಳಿಸಿದ್ದೇನೆ.ಅದೊಂದು ಮಹಿಳಾ ಕೇಂದ್ರಿತ ಚಿತ್ರ. ಉತ್ತಮ ಸಂದೇಶವಿದೆ. ಸೆನ್ಸರ್ ಕೂಡಾ ಮುಗಿದಿದ್ದು, ಚಿತ್ರ ಬಿಡುಗಡೆಯಷ್ಟೇ ಬಾಕಿಯಿದೆ ಎಂದು ಅವರು ತಿಳಿಸಿದ್ದಾರೆ.
ಮ್ಯಾಜಿಕ್ ಸಿನಿಮಾ ಪ್ರೊಢಕ್ಷನ್ ಹೌಸ್ ಚಿತ್ರಮಂದಿರ ಪುನರ್ ಆರಂಭಕ್ಕೆ ಕಾಯುತ್ತಿದೆ. ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆ ಮಾಡುವ ಕುರಿತಂತೆಯೂ ವಿಚಾರಿಸುತ್ತಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ಶಕೀಲಾ ವಿಶ್ವದಾದ್ಯಂತ ಜನಪ್ರಿಯರಾಗಿದ್ದಾರೆ.ಸ್ಟ್ರೀಮಿಂಗ್ ಫ್ಲಾಟ್ ಫಾರ್ಮ್ ಗೆ ಆಕೆಯ ಬಯೋಪಿಕ್ ಸರಿಯಾಗಿದೆ ಆದರೆ, ಆಕೆಗೆ ದೊಡ್ಡ ಅಭಿಮಾನಿ ಬಳಗವೇ ಇದೆ.ಸಮಾಜದ ಎಲ್ಲಾ ವರ್ಗದವರು ಆಕೆಯ ಜೀವನಾಧಾರಿತ ಚಿತ್ರ ನೋಡಲು ಬಯಸುತ್ತಾರೆ. ಅದೇ ಕಾರಣದಿಂದ ಎರಡು ಫ್ಲಾಟ್ ಫಾರ್ಮ್ ಗಳಲ್ಲಿ ಚಿತ್ರ ಬಿಡುಗಡೆ ಮಾಡಲು ನಿರ್ಮಾಪಕರು ಎದುರು ನೋಡುತಿದ್ದಾರೆ.ಥಿಯೇಟರ್ ಓಪನ್ ಆದ ನಂತರ ಚಿತ್ರ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಹಿಂದಿಯಲ್ಲಿ ಚಿತ್ರ ಮಾಡಿದ್ದರೂ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಡಬ್ ಮಾಡಿ ಏಕಕಾಲದಲ್ಲಿ ಬಿಡುಗಡೆ ಮಾಡಲಾಗುವುದು, ಮುಂಬೈಯ ಬಹುರಾಷ್ಟ್ರೀಯ ಕಂಪನಿಯೊಂದು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಡಬ್ಬಿಂಗ್ ಮಾಡುವ ಹಕ್ಕು ಪಡೆದುಕೊಂಡಿದೆ ಎಂದು ಇಂದ್ರಜಿತ್ ಲಂಕೇಶ್ ಮಾಹಿತಿ ನೀಡಿದ್ದಾರೆ.
ಶಕೀಲಾ ಬಯೋಪಿಕ್ ನಲ್ಲಿ ಕನ್ನಡ ನಟ ಈಸ್ಟರ್ ನೊರೊನ್ಹಾ, ಮಲಯಾಳಂ ನಟ ರಾಜೀವ್ ಪಿಲ್ಲೈ ಕೂಡಾ ಅಭಿನಯಿಸುತ್ತಿದ್ದು, ವೀರ ಸಮರ್ಥ್ ಸಂಗೀತ ಸಂಯೋಜಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


