ಅಂತಿಮ ಘಟ್ಟ ತಲುಪಿದ ಕೆಜಿಎಫ್ 2 ಶೂಟಿಂಗ್: ಶೀಘ್ರದಲ್ಲೇ ಬಿಡುಗಡೆ ಡೇಟ್ ರಿವೀಲ್!
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾ ಶೂಟಿಂಗ್ ಬಹುತೇಕ ಫೈನಲ ಹಂತ ತಲುಪಿದೆ. ಸದ್ಯ ಸಿನಿಮಾ ತಂಡ ಹೈದಾರಾಬಾದ್ ಮತ್ತು ಮೈಸೂರಿನನ ಕೆಲ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸುತ್ತಿದೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾ ಶೂಟಿಂಗ್ ಬಹುತೇಕ ಫೈನಲ ಹಂತ ತಲುಪಿದೆ. ಸದ್ಯ ಸಿನಿಮಾ ತಂಡ ಹೈದಾರಾಬಾದ್ ಮತ್ತು ಮೈಸೂರಿನನ ಕೆಲ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸುತ್ತಿದೆ.
ಕೆಜಿಎಫ್ ಮೊದಲ ಭಾಗ ನೋಡಿದ್ದ ಪ್ರೇಕ್ಷಕರಿಗೆ 2ನೇ ಭಾಗದ ಬಗ್ಗೆ ಅತೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿನಿಮಾ ತಂಡ ಶೇ. 80 ರಷ್ಟು ಪ್ರಮಾಣದ ಚಿತ್ರೀಕರಣ ಮುಗಿಸಿದೆ, ನಿಗದಿತ ಸಮಯದಲ್ಲಿ ಶೂಟಿಂಗ್ ಪೂರ್ಣಗೊಳಿಸಲು ಚಿತ್ರತಂಡ ಬಿರುಸಾಗಿ ಕೆಲಸ ಮಾಡುತ್ತಿದೆ.
ಮೈಸೂರಿನಲ್ಲಿ ಕೆಜಿಎಫ್2 ಟಾಕಿ ಪೋರ್ಸನ್ ನಡೆಯುತ್ತಿದೆ, ಯಶ್ ಮತ್ತು ಶ್ರೀನಿಧಿ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು, ಇದಾದ ನಂತರ ಹೈದರಾಬಾದ್ ನಲ್ಲಿ ಪರಮುಖ ಸನ್ನಿವೇಶಗಳನ್ನು ಚಿತ್ರೀಕರಿಸಲಾಗುತ್ತದೆ. ಬೆಂಗಳೂರು ಮತ್ತು ಕೋಲಾರದಲ್ಲಿ ಶೂಟಿಂಗ್ ನಡೆಯಲಿದೆ.
ಅಧೀರಾ ಪಾತ್ರದಲ್ಲಿ ಸಂಜಯ್ ದತ್, ಮತ್ತೊಂದು ಪಾತ್ರದಲ್ಲಿ ರವೀನಾ ಟಂಡನ್ ನಟಿಸುತ್ತಿರುವುದು ಖಚಿತವಾಗಿದೆ, ಹಾಗೂ ರವೀನಾ ತಮ್ಮ ಭಾಗದ ಶೂಟಿಂಗ್ ಗಾಗಿ ಶೀಘ್ರವೇ ಸೆಟ್ ಗೆ ಬರಲಿದ್ದಾರೆ. ಇದೇ ವೇಳೆ ಚಿತ್ರ ತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸುತ್ತಿದೆ. ಶೂಟಿಂಗ್ ಮುಗಿದ ಕೂಡಲೇ ಚಿತ್ರ ರಿಲೀಸ್ ಡೇಟ್ ಪ್ರಕಟಿಸಲಾಗುವುದು
ಕೆಜಿಎಫ್: ಚಾಪ್ಟರ್ 1 ಸಿನಿಮಾ ಬಾಕ್ಸಾಫೀಸಲ್ಲಿ ಮಾಡಿದ ಮೋಡಿಯ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ನಾಲ್ಕು ಭಾಷೆಗಳಲ್ಲಿ ರಿಲೀಸ್ ಆದ ಕೆಜಿಎಫ್ ಎಲ್ಲಾ ಭಾಷೆಗಳಲ್ಲೂ ಸದ್ದು ಮಾಡಿತು. ಇದೀಗ ಕೆಜಿಎಫ್: ಚಾಪ್ಟರ್ 2 ಸಿನಿಮಾ ಸಹ ಅಪಾರ ನೀರೀಕ್ಷೆಗಳನ್ನು ಹುಟ್ಟುಹಾಕಿದೆ.
ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ, ಅಚ್ಯುತ ಕುಮಾರ್, ಅನಂತ್ ನಾಗ್, ನಾಸರ್, ಅರ್ಚನಾ ಜೋಯಿಸ್, ವಸಿಷ್ಠ ಸಿಂಹ, ಮಾಳವಿಕಾ ಅವಿನಾಶ್ ಹಾಗೂ ರಾಮಚಂದ್ರ ರಾಜು ಪಾತ್ರವರ್ಗದಲ್ಲಿದ್ದು ರವಿ ಬಸ್ರೂರ್ ಸಂಗೀತ ಚಿತ್ರಕ್ಕಿದೆ. ವಿಜಯ್ ಕಿರಂಗದೂರ್ ನಿರ್ಮಾಣದ ಈ ಸಿನಿಮಾ 2020 ರ ಬಿಗ್ ಬಜೆಟ್ ಸಿನಿಮಾವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


