ನಾನಂತೂ ತುಕಡೆ ಗ್ಯಾಂಗ್ ಜೊತೆ ನಿಲ್ಲಲ್ಲ: ದೀಪಿಕಾ ಜೆಎನ್ ಯು ಭೇಟಿ ಬಗ್ಗೆ ಕಂಗನಾ ಪ್ರತಿಕ್ರಿಯೆ
ಜೆಎನ್ಯು ಹಿಂಸಾಚಾರ ಘಟನೆ ಬೆನ್ನಲ್ಲೇ ದೀಪಿಕಾ ಪಡುಕೋಣೆ ವಿದ್ಯಾರ್ಥಿಗಳನ್ನು ಭೇಟಿಯಾದ ಪ್ರಕರಣ ನಟಿ ಕಂಗನಾ ರಾಣಾವತ್ ಪ್ರತಿಕ್ರಿಯಿಸಿದ್ಧಾರೆ.

ನವದೆಹಲಿ: ಜೆಎನ್ಯು ಹಿಂಸಾಚಾರ ಘಟನೆ ಬೆನ್ನಲ್ಲೇ ದೀಪಿಕಾ ಪಡುಕೋಣೆ ವಿದ್ಯಾರ್ಥಿಗಳನ್ನು ಭೇಟಿಯಾದ ಪ್ರಕರಣ ನಟಿ ಕಂಗನಾ ರಾಣಾವತ್ ಪ್ರತಿಕ್ರಿಯಿಸಿದ್ಧಾರೆ.
ದೀಪಿಕಾ ಹೋಗಿದ್ದು ಅವರ ವೈಯಕ್ತಿಕ ವಿಚಾರ.ಆದರೆ, ನಾನಂತೂ ತುಕಡೆ ಗ್ಯಾಂಗ್ ಜೊತೆ ಹೋಗಿ ನಿಲ್ಲಲಾರೆ ಎಂದು ಕಂಗನಾ ಸ್ಪಷ್ಟಪಡಿಸಿದ್ದಾರೆ. ಸ್ಪಾಟ್ ಬೋಯೆ ಎಂಬ ಜಾಲತಾಣದ ಜೊತೆಗಿನ ಸಂದರ್ಶನದಲ್ಲಿ ಕಂಗನಾ ಅವರು, ದೇಶ ಒಡೆಯುವವರನ್ನು ತಾನು ಯಾವತ್ತೂ ಬೆಂಬಲಿಸುವುದಿಲ್ಲ ಎಂದು ಹೇಳಿದ್ಧಾರೆ.
ಏನೇ ಆದರೂ ನಾನು ತುಕಡೆ ಗ್ಯಾಂಗ್ ಜೊತೆ ಹೋಗಿ ನಿಲ್ಲಲಾರೆ. ಈ ದೇಶವನ್ನು ವಿಭಜಿಸುವ ಯಾರನ್ನೇ ಆದರೂ ನಾನು ಬೆಂಬಲಿಸುವುದಿಲ್ಲ. ಯೋಧ ಸತ್ತಾಗ ಸಂಭ್ರಮಿಸುವ ಜನರಿಗೆ ಅಧಿಕಾರ ಸಿಗಬೇಕೆಂದು ನಾನು ಇಚ್ಛಿಸುವುದಿಲ್ಲ. ಅವರಲ್ಲಿ ಗುರುತಿಸಿಕೊಳ್ಳಲು ಬಯಸುವುದಿಲ್ಲ” ಎಂದು ಬಾಲಿವುಡ್ ಸ್ಟಾರ್ ನಟಿ ಕಂಗನಾ ತಿಳಿಸಿದ್ಧಾರೆ.
ದೀಪಿಕಾ ವೈಯಕ್ತಿಕ ನಿಲುವಿನ ಬಗ್ಗೆ ತಾನು ಮಾತನಾಡುವುದು ಸರಿಯಾಗದು. ನನಗೆ ಏನು ಬೇಕು ಎಂದು ನಾನು ಹೇಳಬಲ್ಲೆ. ಆಕೆ ಏನು ಮಾಡಬೇಕೆಂದು ನಾನು ಹೇಳುವುದಿಲ್ಲ ಎಂದಿದ್ಧಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


