ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಬಾಲಕನ ಆಸೆ ಈಡೇರಿಸಿದ 'ಡಿ'ಬಾಸ್
ಅಭಿಮಾನಿಗಳ ಪಾಲಿನ ಪ್ರೀತಿಯ ದಾಸ, ಒಡೆಯ, ಬಾಕ್ಸ್ ಆಫೀಸ್ ಸುಲ್ತಾನ, 'ಡಿ'ಬಾಸ್ ದರ್ಶನ್ ಅವರ ಮಾನವೀಯ ಮುಖ ಇಂದು ಮತ್ತೊಮ್ಮೆ ಅನಾವರಣಗೊಂಡಿದೆ

ಬೆಂಗಳೂರು: ಅಭಿಮಾನಿಗಳ ಪಾಲಿನ ಪ್ರೀತಿಯ ದಾಸ, ಒಡೆಯ, ಬಾಕ್ಸ್ ಆಫೀಸ್ ಸುಲ್ತಾನ, 'ಡಿ'ಬಾಸ್ ದರ್ಶನ್ ಅವರ ಮಾನವೀಯ ಮುಖ ಇಂದು ಮತ್ತೊಮ್ಮೆ ಅನಾವರಣಗೊಂಡಿದೆ
ನೋಡಲು ಒರಟು ಒರಟಾಗಿ ಕಂಡರೂ ಅವರಲ್ಲಿನ ಮಗುವಿನಂತ ಮನಸ್ಸು, ಸಹಾಯ ಮಾಡುವ ಗುಣದಿಂದಾಗಿ ರಾಜ್ಯಾದ್ಯಂತ ಕೋಟ್ಯಂತರ ಅಭಿಮಾನಿ ವರ್ಗವನ್ನು ಪಡೆದುಕೊಂಡಿರುವ ದರ್ಶನ್ ಕಂಡರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಯುವಕ, ಯುವತಿಯರಿಂದ ಹಿಡಿದು ವಯೋವೃದ್ಧರಾದಿಯಾಗಿ ಎಲ್ಲರೂ ಪ್ರೀತಿಸುತ್ತಾರೆ.
ಇಂತಹ ಮನೋಭಾವದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಪುಟ್ಟ ಅಭಿಮಾನಿಯ ಆಸೆಯೊಂದನ್ನು ಈಡೇರಿಸಿದ್ದಾರೆ. ಕಿಡ್ನಿ ವೈಫಲ್ಯದಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಅವರ ಪುಟ್ಟ ಅಭಿಮಾನಿ ರತನ್ ನನ್ನು ಭೇಟಿ ಮಾಡುವ ಮೂಲಕ ಆತನ ಬಹುದಿನದ ಆಸೆಯೊಂದನ್ನು ಈಡೇರಿಸಿದ್ದಾರೆ.
ರತನ್ ಗೆ ದರ್ಶನ್ ಎಂದರೇ ಅಚ್ಚುಮೆಚ್ಚು. ದರ್ಶನ್ ಸಿನಿಮಾ ಬಂದರೆ ಅವುಗಳನ್ನು ನೋಡದೆ ಇರುತ್ತಿರಲಿಲ್ಲ. ರತನ್ ತಂದೆಯ ಆಟೋ ಮೇಲೂ ದರ್ಶನ್ ಅವರ ಭಾವಚಿತ್ರವನ್ನು ಹಾಕಿಸಿದ್ದಾರೆ.ಇಂತಹ ಅಪ್ಪಟ ಅಭಿಮಾನಿಯಾಗಿರುವ ಬಾಲಕ ರತನ್ ಹಾಗೂ ಅವರ ಕುಟುಂಬಸ್ಥರನ್ನು ಭೇಟಿ ಮಾಡುವ ಮೂಲಕ ಅವರಲ್ಲಿ ಸಂತಸ ಮೂಡಿಸಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇತ್ತೀಚಿಗೆ ಅಪಘಾತದಲ್ಲಿ ಮೃತಪಟ್ಟ ಅಭಿಮಾನಿಯ ಸಹೋದರಿಯರ ಮದುವೆ ಖರ್ಚುನ್ನು ಕೂಡಾ ವಹಿಸಿಕೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


