ಸಿನಿಮಾ ಸುದ್ದಿ

'ಅವನೇ ಶ್ರೀಮನ್ನಾರಾಯಣ' ವೀಕ್ಷಕರ ಪ್ರತಿಕ್ರಿಯೆಗೆ ಬಹಳ ಸಂತೋಷವಿದೆ: ನಿರ್ದೇಶಕ ಸಚಿನ್ ರವಿ

ನಟ ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರ ವೀಕ್ಷಣೆ ಮಾಡಿದ ಜನರ ಪ್ರತಿಕ್ರಿಯೆ ಅತ್ಯುತ್ತಮವಾಗಿದ್ದು, ಬಹಳ ಸಂತೋಷವಾಗುತ್ತಿದೆ ಎಂದು ಚಿತ್ರದ ನಿರ್ದೇಶದ ಸಚಿನ್ ರವಿಯವರು ಹೇಳಿದ್ದಾರೆ.

'ಅವನೇ ಶ್ರೀಮನ್ನಾರಾಯಣ' ವೀಕ್ಷಕರ ಪ್ರತಿಕ್ರಿಯೆಗೆ ಬಹಳ ಸಂತೋಷವಿದೆ: ನಿರ್ದೇಶಕ ಸಚಿನ್ ರವಿ
ಅವನೇ ಶ್ರೀಮನ್ನಾರಾಯಣ
Published On :

ನಟ ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರ ವೀಕ್ಷಣೆ ಮಾಡಿದ ಜನರ ಪ್ರತಿಕ್ರಿಯೆ ಅತ್ಯುತ್ತಮವಾಗಿದ್ದು, ಬಹಳ ಸಂತೋಷವಾಗುತ್ತಿದೆ ಎಂದು ಚಿತ್ರದ ನಿರ್ದೇಶದ ಸಚಿನ್ ರವಿಯವರು ಹೇಳಿದ್ದಾರೆ. 

ಡಿ.27ರಂದು ಬಿಡುಗಡೆಗೊಂಡ ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಡುತ್ತಿದ್ದಾರೆ. ಚಿತ್ರ ಅತ್ಯುತ್ತಮವಾಗಿ ಪ್ರದರ್ಶನಗೊಳ್ಳುತ್ತಿದ್ದು, ಜನವರಿ 1 ರಂದು ತೆಲುಗು ಭಾಷೆಗೂ ಡಬ್ ಆಗಿದೆ, ಜನವರಿ 3 ರಂದು ತಮಿಳು ಹಾಗೂ ಮಲಯಾಳಂನಲ್ಲೂ ಚಿತ್ರ ಬಿಡುಗಡೆ ಕಂಡಿದೆ. 

ಮೂರು ಅನ್ಯ ಭಾಷೆಗಳಲ್ಲಿ ಚಿತ್ರ ತೆರೆಕಂಡ ಹಿನ್ನೆಲೆಯಲ್ಲಿ ಚಿತ್ರ ತಂಡ ಮೂರೂ ರಾಜ್ಯಗಳಿಗೂ ಭೇಟಿ ನೀಡಿ ಪ್ರೇಕ್ಷಕರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲದೆ, ಕೇರಳ, ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿಯೂ ಚಿತ್ರ ಉತ್ತಮವಾಗಿ ಪ್ರದರ್ಶನಗೊಳ್ಳುತ್ತಿರುವುದು ತಂಡಕ್ಕೆ ಸಂತಸ ತಂದಿದೆ. 

ಚಿತ್ರವು ಪ್ರೇಕ್ಷಕರಲ್ಲಿ ಸಾಕಷ್ಟು ಚರ್ಚೆಗಳನ್ನು ಮಾಡುವಂತೆ ಮಾಡಿದೆ. ಜನರ ಮಾತಿಗೆ ಹೆಚ್ಚಿನ ಪ್ರೇಕ್ಷಕರು ಚಿತ್ರ ನೋಡುವಂತಾಗುತ್ತಿದೆ. ಜನರಿಂದ ಸಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಇದೀಗ ಹಿಂದಿ ಭಾಷೆಯಲ್ಲೂ ಬಿಡುಗಡೆ ಮಾಡಲು ಸಿದ್ಧತೆಗಳು ನಡೆಯುತ್ತಿವೆ ಎಂದು ನಿರ್ದೇಶಕರು ಹೇಳಿದ್ದಾರೆ. 

ಬಾಲಿವುಡ್ ವರ್ಷನ್ ನಲ್ಲಿ ಕೆಲ ದೃಶ್ಯಗಳಿಗೆ ಕತ್ತರಿ ಬೀಳಲಿದ್ದು, 2 ಗಂಟೆ 52 ನಿಮಿಷಗಳ ಕಾಲ ಚಿತ್ರ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದ್ದಾರೆ. 

ನಿರ್ದೇಶಕಾನಾಗಿ ನಾನು 100 ಬಾರಿ ಚಿತ್ರವನ್ನು ನೋಡಿದ್ದೇನೆ. ಸ್ನೇಹಿತರು ಹಾಗೂ ಚಿತ್ರ ವಿಮರ್ಶಕರಿಂದ ವಿಭಿನ್ನ ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿವೆ. ಚಿತ್ರಕ್ಕೆ 10ರಲ್ಲಿ 8 ಅಂಕಗಳನ್ನು ನೀಡಿದ್ದಾರೆ. ಕೆಲವರು ಚಿತ್ರ ಬಹಳ ಇಷ್ಟವಾಯಿತು. ಆದರೆ, ಹೆಚ್ಚು ಸಮಯವಿರುವುದರಿಂದ ಕೊಂಚ ಬೇಸರ ತರಿಸಿತು ಎಂದಿದ್ದಾರೆ. ಚಿತ್ರ ಬಿಡುಗಡೆಗೂ ಮುನ್ನವೇ ನಾವು ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಜನರು ಸಂತೋಷಪಡಬೇಕೆಂಬುದು ನಾವು ನಿರೀಕ್ಷಿಸಿದ್ದೆವು. ಆದರೆ, ಪ್ರೇಕ್ಷಕರಿಗ ಅದು ಎಳೆದಂತೆ ಕಾಣತ್ತಿದೆ. ಹೀಗಾಗಿ ಜನರ ಪ್ರತಿಕ್ರಿಯೆ ಮೇರೆಗೆ ಕೆಲ ಅನಗತ್ಯ ದೃಶ್ಯವನ್ನು ತೆಗೆದುಹಾಕಲು ನಿರ್ಧರಿಸಿದ್ದೇವಂದಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.