ವರದಕ್ಷಿಣೆ ಕಿರುಕುಳ, ನಟಿ ರಮ್ಯಾರಿಂದ ಪೋಲೀಸರಿಗೆ ದೂರು
ತನ್ನ ಪತಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ನಟಿ ರಮ್ಯಾ ಬೆಂಗಳೂರು ಪೋಲೀಸರಿಗೆ ದುರು ಸಲ್ಲಿಸಿದ್ದಾರೆ. ಪತಿ ನನಗೆ ವರದಕ್ಷಿಣೆ ತರುವಂತೆ ಸತತ ಪೀಡಿಸುತ್ತಿದ್ದಾನೆ ಎಂದು ತಮಿಳಿನ ನಟಿ ರಮ್ಯಾ ಬೆಂಗಳೂರು ಕೊಡಿಗೇಹಳ್ಳಿ ಪೋಲೀಸರಿಗೆ ದೂರು ಸಲ್ಲಿಸಿದ್ದಾರೆ.

ಬೆಂಗಳೂರು: ತನ್ನ ಪತಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ನಟಿ ರಮ್ಯಾ ಬೆಂಗಳೂರು ಪೋಲೀಸರಿಗೆ ದುರು ಸಲ್ಲಿಸಿದ್ದಾರೆ. ಪತಿ ನನಗೆ ವರದಕ್ಷಿಣೆ ತರುವಂತೆ ಸತತವಾಗಿ ಪೀಡಿಸುತ್ತಿದ್ದಾನೆ ಎಂದು ತಮಿಳಿನ ನಟಿ ರಮ್ಯಾ ಬೆಂಗಳೂರು ಕೊಡಿಗೇಹಳ್ಳಿ ಪೋಲೀಸರಿಗೆ ದೂರು ಸಲ್ಲಿಸಿದ್ದಾರೆ.
2017ರಲ್ಲಿ ಕೊರಿಯೋಗ್ರಾಫರ್ ವರದರಾಜನ್ ಅವರೊಂದಿಗೆ ವಿವಾಹವಾಗಿದ್ದ ರಮ್ಯಾ ತಮ್ಮ ವಿವಾಹದ ವೇಳೆ ಪತಿಗೆ ದಲ್ಲಿ 25 ಲಕ್ಷ ಮೌಲ್ಯದ ಸೈಟ್, ಚಿನ್ನಾಭರಣ ಮತ್ತು ನಗದನ್ನು ವರದಕ್ಷಿಣೆಯಾಗಿ ನೀಡಿದ್ದರು.
ಆದರೆ ಇದೀಗ ಪತಿ ತಾನು ಡ್ಯಾನ್ಸ್ ಅಕಾಡಮಿ ತೆರೆಯಬೇಕೆಂದು ನೆಪ ಹೇಳಿ ಹೆಚ್ಚಿನ ಹಣ ತರುವಂತೆ ಪೀಡಿಸುತ್ತಿದ್ದಾರೆ. ಪತಿ ಹಾಗೂ ಆತನ ಕುಟುಂಬ ನನ್ನ ಮದುವೆಯಾದ ಅಂತರವೂ ಅವರ ಮನೆಗೆ ಕರೆದೊಯ್ಯದೆ ಹಿಂಸಿಸಿದ್ದರು. ಅಲ್ಲದೆ ಪತಿಗೆ ಸಹ ನೃತ್ಯಪಟು ಒಬ್ಬರ ಜತೆ ಅಕ್ರಮ ಸಂಬಧವೂ ಇದೆ ಎಂದು ರಮ್ಯಾ ದೂರಿನಲ್ಲಿ ಹೇಳಿದ್ದಾರೆ.
‘ಮಾಂಡಾ ಮಾಯಿಲ’ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ವಿಜೇತರಾಗಿದ್ದ ರಮ್ಯಾ ಅವರ ದೂರು ದಾಖಲಿಸಿಕೊಂಡಿರುವ ಪೋಲೀಸರು ತನಿಖೆ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


