ಕಾಗೆ ಬಂಗಾರಕ್ಕೆ ನಿರ್ದೇಶಕ ಸೂರಿ ಹೊಸ ಟ್ವಿಸ್ಟ್!
ನಿರ್ದೇಶಕ ಸೂರಿ 'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾದ ಮಧ್ಯೆ 'ಕಾಗೆ ಬಂಗಾರ' ಕಥೆಯನ್ನು ತಂದಿದ್ದಾರೆ. ಸಿನಿಮಾ ಮುಗಿದಾಗ 'ಕಾಗೆ ಬಂಗಾರ' ಸಿನಿಮಾ 2020ಕ್ಕೆ ಬಿಡುಗಡೆ ಆಗುತ್ತದೆ ಎಂದು ತೋರಿಸುತ್ತಾರೆ.

ನಿರ್ದೇಶಕ ಸೂರಿ 'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾದ ಮಧ್ಯೆ 'ಕಾಗೆ ಬಂಗಾರ' ಕಥೆಯನ್ನು ತಂದಿದ್ದಾರೆ. ಸಿನಿಮಾ ಮುಗಿದಾಗ 'ಕಾಗೆ ಬಂಗಾರ' ಸಿನಿಮಾ 2020ಕ್ಕೆ ಬಿಡುಗಡೆ ಆಗುತ್ತದೆ ಎಂದು ತೋರಿಸುತ್ತಾರೆ. ಜೊತೆಗೆ ತೆರೆ ಮೇಲೆ ಚಾರ್ಲಿ ಚಾಪ್ಲಿನ್ ಫೋಟೋ ಹಾಗೂ ಅವರ 'let's burn the city' ಎಂಬ ವಾಕ್ಯ ಕೂಡ ಬರುತ್ತದೆ.
‘ಕಾಗೆಬಂಗಾರ’ದಲ್ಲಿ ಈ ಮೊದಲೇ ಹೇಳಿದಂತೆ ಪ್ರಶಾಂತ್ ಸಿದ್ಧಿ ಮತ್ತು ಪೂರ್ಣಚಂದ್ರ ಮೈಸೂರು ಮುಖ್ಯಭೂಮಿಕೆಯಲ್ಲಿರಲಿದ್ದಾರೆ. ‘ಕೆಂಡಸಂಪಿಗೆ’ ಸಿನಿಮಾ ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿತ್ತು. ಹಾಗಾದರೆ ‘ಕಾಗೆಬಂಗಾರ’ವೂ ಹಾಗೇ ಇರಲಿದೆಯೇ? ಇಲ್ಲ ಎಂಬ ಉತ್ತರ ಸೂರಿ ಅವರಿಂದಲೇ ಸಿಕ್ಕಿದೆ. ಕಾಮಿಡಿ ಶೈಲಿಯಲ್ಲಿ ‘ಕಾಗೆಬಂಗಾರ’ ಸಿನಿಮಾ ತೆರೆಗೆ ತರಲು ಪ್ಲಾ್ಯನ್ ಮಾಡಿದ್ದು, ಮೊದಲ ಬಾರಿ ನಗಿಸುವ ಕೆಲಸಕ್ಕೆ ಕೈಹಾಕಲಿದ್ದಾರೆ.
ಈಗಾಗಲೇ ಸಿನಿಮಾ ಚಿತ್ರೀಕರಣಕ್ಕಾಗಿ ಲೊಕೇಷನ್ ಹುಡುಕಾಟದಲ್ಲಿರುವ ಸೂರಿ ಆಂಡ್ ಟೀಮ್ ಶೀಘ್ರದಲ್ಲಿ ಶೂಟಿಂಗ್ಗೆ ಚಾಲನೆ ನೀಡಲಿದೆ. ಈಗಾಗಲೇ ‘ಪಾಪ್ಕಾರ್ನ್ ಮಂಕಿ ಟೈಗರ್’ ಸಿನಿಮಾಕ್ಕೆ ತಾಂತ್ರಿಕವಾಗಿ ಕೆಲಸ ಮಾಡಿದ ಸಂಗೀತ ನಿರ್ದೇಶಕ ಚರಣ್ರಾಜ್, ಛಾಯಾಗ್ರಾಹಕ ಶೇಖರ್, ಸಂಕಲನಕಾರ ದೀಪು ಎಸ್. ಕುಮಾರ್ ಸೇರಿ ಹಲವರು ‘ಕಾಗೆಬಂಗಾರ’ದಲ್ಲೂ ಮುಂದುವರಿಯಲಿದ್ದಾರೆ ಎನ್ನಲಾಗುತ್ತಿದ್ದು, ಸುಧೀರ್ ಕೆ.ಎಂ. ಅವರೇ ನಿರ್ಮಾಣ ಮಾಡುವ ಸಾಧ್ಯತೆಗಳಿವೆ.
‘ಕಾಗೆಬಂಗಾರ’ದಲ್ಲಿ ಈ ಮೊದಲೇ ಹೇಳಿದಂತೆ ಪ್ರಶಾಂತ್ ಸಿದ್ಧಿ ಮತ್ತು ಪೂರ್ಣಚಂದ್ರ ಮೈಸೂರು ಮುಖ್ಯಭೂಮಿಕೆಯಲ್ಲಿರಲಿದ್ದಾರೆ. ‘ಕೆಂಡಸಂಪಿಗೆ’ ಸಿನಿಮಾ ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿತ್ತು. ಹಾಗಾದರೆ ‘ಕಾಗೆಬಂಗಾರ’ವೂ ಹಾಗೇ ಇರಲಿದೆಯೇ? ಇಲ್ಲ ಎಂಬ ಉತ್ತರ ಸೂರಿ ಅವರಿಂದಲೇ ಸಿಕ್ಕಿದೆ. ಕಾಮಿಡಿ ಶೈಲಿಯಲ್ಲಿ ‘ಕಾಗೆಬಂಗಾರ’ ಸಿನಿಮಾ ತೆರೆಗೆ ತರಲು ಪ್ಲಾ್ಯನ್ ಮಾಡಿದ್ದು, ಮೊದಲ ಬಾರಿ ನಗಿಸುವ ಕೆಲಸಕ್ಕೆ ಕೈಹಾಕಲಿದ್ದಾರೆ.
ಪಶಾಂತ್ ಸಿದ್ದಿ ಹಾಗೂ ಪೂರ್ಣಚಂದ್ರ ಮೈಸೂರು 'ಕಾಗೆ ಬಂಗಾರ'ದ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. '
ಈ ಬಗ್ಗೆ ಮಾತನಾಡಿದ ಸೂರಿ, ಈಗಾಗಲೇ ‘ಪಾಪ್ಕಾರ್ನ್ ಮಂಕಿ ಟೈಗರ್’ ಸಿನಿಮಾಕ್ಕೆ ತಾಂತ್ರಿಕವಾಗಿ ಕೆಲಸ ಮಾಡಿದ ಸಂಗೀತ ನಿರ್ದೇಶಕ ಚರಣ್ರಾಜ್, ಛಾಯಾಗ್ರಾಹಕ ಶೇಖರ್, ಸಂಕಲನಕಾರ ದೀಪು ಎಸ್. ಕುಮಾರ್ ಸೇರಿ ಹಲವರು ‘ಕಾಗೆಬಂಗಾರ’ದಲ್ಲೂ ಮುಂದುವರಿಯಲಿದ್ದಾರೆ ಎಂದು ಸೂರಿ ಹೇಳಿದ್ದಾರೆ.
ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾವನ್ನು ಕೆಲವು ಜನ ಮೆಚ್ಚಿದ್ದಾರೆ, ಎಲ್ಲರನ್ನು ತೃಪ್ತಿ ಪಡಿಸಲು ಸಾಧ್ಯವಿಲ್ಲ ಎಂದು ಸೂರಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


