ನಟಿ ಅಮೂಲ್ಯ ಪಾಲಿನ ಪವರ್ ಫುಲ್ ಪುರುಷರು ಯಾರು ಗೊತ್ತಾ?
ಚೆಲುವಿನ ಚಿತ್ತಾರದ ಬೆಡಗಿ ಅಮೂಲ್ಯ ಅವರು ತಮ್ಮ ಜೀವನದ ಪವರ್ಫುಲ್ ಪುರುಷರು ಯಾರು ಅನ್ನೋದನ್ನ ಸಾಮಾಜಿಕ ಜಾಲತಾಣದಲ್ಲಿ ರಿವೀಲ್ ಮಾಡಿದ್ದಾರೆ.

ಚೆಲುವಿನ ಚಿತ್ತಾರದ ಬೆಡಗಿ ಅಮೂಲ್ಯ ಅವರು ತಮ್ಮ ಜೀವನದ ಪವರ್ಫುಲ್ ಪುರುಷರು ಯಾರು ಅನ್ನೋದನ್ನ ಸಾಮಾಜಿಕ ಜಾಲತಾಣದಲ್ಲಿ ರಿವೀಲ್ ಮಾಡಿದ್ದಾರೆ.

ಅಮೂಲ್ಯ ಮದುವೆಯಾದ ಬಳಿಕ ನಟನೆಯಿಂದ ಕೊಂಚ ದೂರ ಉಳಿದಿದ್ದರೂ, ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಅಣ್ಣಂದಿರ ಮತ್ತು ಪತಿಯ ಫೋಟೋ ಹಾಕಿ ಇವರೆಲ್ಲರೂ ನನ್ನ ಜೀವನದ ಪವರ್ಫುಲ್ ಪುರುಷರು ಎಂದು ಬರೆದುಕೊಂಡಿದ್ದಾರೆ.

ತಮ್ಮ ಸೋದರರು ಹಾಗೂ ಪತಿಯ ಜತೆ ನಿಂತಿರುವ ಫೋಟೋ ಹಂಚಿಕೊಂಡಿರುವ ಅಮೂಲ್ಯ ಇವೆರೆಲ್ಲರು ನನ್ನ ಜೀವನದ ಪವರ್ಫುಲ್ ಪುರುಷರು. ಇವರು ನನ್ನ ಕಠಿಣ ಸಮಯದಲ್ಲೂ ನನ್ನನ್ನು ನಂಬಿದ್ದರು.ನನ್ನ ಪುಟ್ಟ ಜಗತ್ತು ಶಾಂತಿ, ಖುಷಿಯಿಂದಿರಲು ಇವರೇ ಕಾರಣ ಎಂದು ಬರೆದಿದ್ದಾರೆ.
ನಟಿ ಅಮೂಲ್ಯ ಪಾಲಿಕೆ ಸದಸ್ಯ ರಾಮಚಂದ್ರೇಗೌಡರ ಮಗ ಉದ್ಯಮಿ ಜಗದೀಶ್ ಆರ್ ಚಂದ್ರ ಅವರನ್ನು ವಿವಾಹವಾಗಿದ್ದು ಮದುವೆ ಬಳಿಕ ಅವರು ಯಾವ ಚಿತ್ರದಲ್ಲಿ ಸಹ ಅಭಿನಯಿಸಿರಲಿಲ್ಲ.

2017 ರ "ಮಾಸ್ತಿಗುಡಿ" ಅಮೂಲ್ಯ ಕಡೇ ಬಾರಿಗೆ ಕಾಣಿಸಿಕೊಂಡಿದ್ದರು. ಅದು ಬಿಟ್ಟರೆ ಕಳೆದ ವರ್ಷ ತೆರೆಗೆ ಬಂದಿದ್ದ ನವರಸನಾಯಕ ಜಗ್ಗೇಶ್ ಅಭಿನಯದ "ಕಾಳಿದಾಸ ಕನ್ನಡ ಮೇಷ್ಟ್ರು" ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಅವರು ಅಭಿನಯಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


