ದರ್ಶನ್ ಹುಟ್ಟು ಹಬ್ಬದಂದು ಗದ್ದಲ: ಮೂರು ಕೇಸ್ ದಾಖಲು
ದರ್ಶನ್ ಹುಟ್ಟುಹಬ್ಬದಂದು ಉಂಟಾದ ಗಲಾಟೆ ಸಂಬಂಧ ದರ್ಶನ್ ಅಭಿಮಾನಿಗಳು ಹಾಗೂ ಅವರ ಮ್ಯಾನೇಜರ್ ವಿರುದ್ಧ ಮೂರು ಎಫ್ ಐ ಆರ್ ದಾಖಲಾಗಿವೆ.

ಬೆಂಗಳೂರು: ದರ್ಶನ್ ಹುಟ್ಟುಹಬ್ಬದಂದು ಉಂಟಾದ ಗಲಾಟೆ ಸಂಬಂಧ ದರ್ಶನ್ ಅಭಿಮಾನಿಗಳು ಹಾಗೂ ಅವರ ಮ್ಯಾನೇಜರ್ ವಿರುದ್ಧ ಮೂರು ಎಫ್ ಐ ಆರ್ ದಾಖಲಾಗಿವೆ.
ಫೆಬ್ರವರಿ 15 ಮತ್ತು 16 ರಂದು ಹುಟ್ಟಹಬ್ಬ ಸಂಭ್ರಮಾಚರಣೆ ಸಂಬಂಧ ರಾಜರಾಜೇಶ್ವರಿ ನಗರದ ಐಡಿಯಲ್ಸ್ ಹೋಮ್ ನಿವಾಸಿಗಳು ದೂರು ದಾಖಲಿಸಿದ್ದಾರೆ.
ದರ್ಶನ್ ಅಭಿಮಾನಿಗಳು ತಮ್ಮ ಮನೆಯ ಹೂ ಕುಂಡಗಳನ್ನು ಹಾಳು ಮಾಡಿದ್ದಾರೆಂದು ಒಂದು ದೂರು ಹಾಗೂ ಮನೆ ಮುಂದೆ ನಿಲ್ಲಿಸಿದ್ದ ಎಸ್ ಯು ವಿ ಕಾರಿಗೆ ಹಾನಿಯಾಗಿದ್ದು 40 ಸಾವಿರ ರು ನಷ್ಟವಾಗಿದೆ ಎಂದ ಮತ್ತೊಬ್ಬರು ದೂರು ದಾಖಲಿಸಿದ್ದಾರೆ.
ಮುಂದಿನ ದಿನಗಳಲ್ಲಿ ಈ ರೀತಿಯ ಸಂಭ್ರಮಾಚರಣೆಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದ್ದಾರೆ. ನಿವಾಸಿಗಳು ನೀಡಿರುವ ದೂರನ್ನು ಗಂಭೀರವಾಗಿ ಪರಿಗಣಿಸಿದ್ದು, ಸಿಸಿಟಿವಿ ಕ್ಯಾಮೆರಾ ಫೂಟೇಜ್ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿಸಿಟಿವಿಯಲ್ಲಿ ದೃಶ್ಯಗಳು ಸೆರೆಯಾಗಿವೆ, ಆದರೆ ಕತ್ತಲಾದ್ದರಿಂದ ವಿಡಿಯೋ ಸ್ಪಷ್ಟವಾಗಿಲ್ಲ, ಆಯೋಜಕರಿಗೆ ಹೇಳಿಕೆ ಕೊಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ಪೊಲೀಸ್ ಪೇದೆ ದೇವರಾಜ್ ಎಂಬುವರು ಜ್ಞಾನಭಾರತಿ ನಗರ ಪೊಲೀಸ್ ಠಾಣೆಯಲ್ಲಿ ದರು ದಾಖಲಿಸಿದ್ದಾರೆ, ದರ್ಶನ್ ಅಭಿಮಾನಿಯೊಬ್ಬರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಅಬಿಮಾನಿಯೊಬ್ಬ ತಮ್ಮ ಮೇಲೆ ಹಲ್ಲೆ ಮಾಡಿದ್ದರಿಂದ ತಮ್ಮ ಮೂಗು ಹಾಗೂ ಬಲ ಗಣ್ಣಿಗೆ ಗಾಯವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


