ನಾನು ದಕ್ಷಿಣ ಭಾರತೀಯ ಸಿನಿಮಾಗಳ ದೊಡ್ಡ ಅಭಿಮಾನಿ: ರವೀನಾ ಟಂಡನ್
20 ವರ್ಷಗಳ ನಂತರವೂ ಉಪೇಂದ್ರ ಸಿನಿಮಾದ ಮಸ್ತ್ ಮಸ್ತ್ ಹುಡುಗಿ ಬಂದ್ಲು ಹಾಡನ್ನು ನೆನೆಪಿಟ್ಟುಕೊಂಡಿದ್ದಾರೆ. 1999ರಲ್ಲಿ ಮೊದಲ ಬಾರಿಗೆ ಕನ್ನಡದಲ್ಲಿ ರವೀನಾ ನಟಸಿದ್ದರು.

20 ವರ್ಷಗಳ ನಂತರ ಮತ್ತೆ ಕನ್ನಡ ಸಿನಿಮಾದಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ ಕೆಜಿಎಫ್-2ನಲ್ಲಿ ನಟಿಸುತ್ತಿದ್ದಾರೆ.
20 ವರ್ಷಗಳ ನಂತರವೂ ಉಪೇಂದ್ರ ಸಿನಿಮಾದ ಮಸ್ತ್ ಮಸ್ತ್ ಹುಡುಗಿ ಬಂದ್ಲು ಹಾಡನ್ನು ನೆನೆಪಿಟ್ಟುಕೊಂಡಿದ್ದಾರೆ. 1999ರಲ್ಲಿ ಮೊದಲ ಬಾರಿಗೆ ಕನ್ನಡದಲ್ಲಿ ರವೀನಾ ನಟಸಿದ್ದರು.
ಸಿನಿಮಾ ಆಫರ್ ಹೇಗೆ ಬಂಂತಪ ಎಂಬುದು ನನಗೆ ನೆನಪಿಲ್ಲ, ಆದರೆ ಉಪೇಂದ್ರ ಸಿನಿಮಾ ಶೂಟಿಂಗ್ ಸಂಪೂರ್ಣ ನೆನಪಿದೆ. ನಾನು ಮಾಡಿದ ಪಾತ್ರ, ಹಾಗೂ ಶೂಟಿಂಗ್ ನಡೆದ ಜಾಗ ಎಲ್ಲವೂ ನೆನಪಿದೆ, ಆ ವಿಷಯವನ್ನು ನಾನು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರ ಜೊತೆ ಚರ್ಚಿಸಿದ್ದೇನೆ, ಉಪೇಂದ್ರ ಅವರಂತ ಜೀನಿಯಸ್ ಮ್ಯಾನ್ ಜೊತೆ ಕೆಲಸ ಮಾಡುವುದು ಅತ್ಯದ್ಭುತ ಅನುಭವ, ತುಂಬಾ ತಮಾಷೆಯಿತ್ತು ಎಂದು ಸ್ಮರಿಸಿದ್ದಾರೆ.
ಕೆಜಿಎಫ್ -2 ನಲ್ಲಿ ರವೀನಾ ಟಂಡನ್ ಮತ್ತು ಸಂಜಯ್ ದತ್ ಪಾತ್ರ ನಿರ್ವಹಿಸುತ್ತಿದ್ದಾರೆ.
“ಕೆಜಿಎಫ್ ಭಾಗ 1 ನಮ್ಮ ಪಾತ್ರ ಒಳಗೊಂಡಿದೆ, ಆದರೆ ಕೆಜಿಎಫ್ 2 ಪ್ರಾರಂಭವಾಗುವವರೆಗೂ ನಾವು ಚಿತ್ರೀಕರಣ ಪ್ರಾರಂಭಿಸಲಿಲ್ಲ. ಕೆಜಿಎಫ್ ಭಾಗ 1ರ ಕಥೆ ಕೇಳಿದ್ದೇನೆ, ನಿಜಕ್ಕೂ ಅದ್ಭುತವಾಗಿದೆ, ಭಾಗ 2 ರಲ್ಲಿ ಎಷ್ಟು ಉದ್ದದ ಪಾತ್ರ ಎಂಬ ಬಗ್ಗೆ ನನಗೆ ತಿಳಿದಿಲ್ಲ, ಕೆಜಿಎಫ್ ಪ್ಯಾನ್ ಇಂಡಿಯಾ ಆಗಿದೆ, ಪ್ಯಾನ್ ಇಂಡಿಯಾ ಈಗ ಬ್ರ್ಯಾಂಡ್ ಅಗುತ್ತಿದೆ.
ಕೆಜಿಎಫ್ ತುಂಬಾ ಹೊಸ ಯುಗದ ಸಿನೆಮಾವಾಗಿದ್ದು, ಅದನ್ನು ಅದ್ಭುತವಾಗಿ ಕಾರ್ಯಗತಗೊಳಿಸಲಾಗಿದೆ. ಯಶ್ ಅವರನ್ನು ನೋಡಿ, ಯಶ್ ಆನ್ ಸ್ಕ್ರೀನ್ ಪ್ರದರ್ಶನ ನಂಬಲು ಅಸಾಧ್ಯ, ನಾನು ಕೆಜಿಎಫ್ ಭಾಗ 1 ನೋಡಿದಾಗ ನಾನು ಕಳೆದು ಹೋದೆ ಎಂದು ಹೇಳಿರು ರವೀನಾ ನಾನು ಸೌತ್ ಇಂಡಿಯನ್ ಸಿನಿಮಾ ಫ್ಯಾನ್ ಆಗಿದ್ದೇನೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


