ಸಿನಿಮಾ ಸುದ್ದಿ

ಐಟಿ ಅಧಿಕಾರಿಗಳಿಂದ ಚೆನ್ನೈನಲ್ಲಿ ತಮಿಳು ನಾಯಕ ನಟ ವಿಜಯ್ ತೀವ್ರ ವಿಚಾರಣೆ

ತಮಿಳು ಚಿತ್ರ ನಿರ್ಮಾಣ ಸಂಸ್ಥೆಯೊಂದರ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಅಧಿಕಾರಿಗಳು ಬುಧವಾರ ತಮಿಳು ಚಿತ್ರರಂಗದ ನಾಯಕ ನಟ ವಿಜಯ್ ಅವರನ್ನು ಪ್ರಶ್ನೆಗೊಳಪಡಿಸಿದ್ದರು.

ಐಟಿ ಅಧಿಕಾರಿಗಳಿಂದ ಚೆನ್ನೈನಲ್ಲಿ ತಮಿಳು ನಾಯಕ ನಟ ವಿಜಯ್ ತೀವ್ರ ವಿಚಾರಣೆ
ಐಟಿ ಅಧಿಕಾರಿಗಳಿಂದ ಚೆನ್ನೈನಲ್ಲಿ ತಮಿಳು ನಾಯಕ ನಟ ವಿಜಯ್ ತೀವ್ರ ವಿಚಾರಣೆ
Published On :

ಚೆನ್ನೈ: ತಮಿಳು ಚಿತ್ರ ನಿರ್ಮಾಣ ಸಂಸ್ಥೆಯೊಂದರ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಅಧಿಕಾರಿಗಳು ಬುಧವಾರ ತಮಿಳು ಚಿತ್ರರಂಗದ ನಾಯಕ ನಟ ವಿಜಯ್ ಅವರನ್ನು ಪ್ರಶ್ನೆಗೊಳಪಡಿಸಿದ್ದರು.

ಚಿತ್ರವೊಂದರ ಚಿತ್ರೀಕರಣ ಸಮಯದಲ್ಲಿ ಸುಮಾರು ಐದು ಗಂಟೆಗಳ ಕಾಲ ವಿಜಯ್ ಅವರನ್ನು ಪ್ರಶ್ನಿಸಿದ ನಂತರ ಐಟಿ ಅಧಿಕಾರಿಗಳು ವಿಜಯ್ ಅವರ ನಿವಾಸದಲ್ಲೂ ವಿಚಾರಣೆ ಮುಂದುವರಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಎಜಿಎಸ್ ಸಿನಿಮಾಸ್  ಸಂಸ್ಥೆ ಕಚೇರಿ ಆಸ್ತಿಗಳ ಜತೆಗೆ ಸಿನಿಮಾ ಫೈನಾನ್ಷಿಯರ್ ಅನ್ಬು ಚೆಲಿಯನ್ ಅವರ ಮಧುರೈ ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿಜಯ್ ನಾಯಕರಾಗಿ ನಟಿಸಿದ್ದ  ಬಿಜಿಲ್  ಸಿನಿಮಾವನ್ನು ಕಳೆದ ವರ್ಷ ಎಜಿಎಸ್ ಸಿನೆಮಾಸ್ ನಿರ್ಮಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.