ಸಿನಿಮಾ ಸುದ್ದಿ

ರವಿ ಶ್ರೀವತ್ಸ ನಿರ್ದೇಶನದ "ಎಂಆರ್" ಮೂಲಕ ಮಲಯಾಳಂ ನಟಿ ಸೌಮ್ಯ ಮೆನನ್ ಸ್ಯಾಂಡಲ್ ವುಡ್ ಪ್ರವೇಶ

ಮಲಯಾಳಂ ನಟಿ ಸೌಮ್ಯ ಮೆನನ್, ಮುತ್ತಪ್ಪ ರೈ ಜೀವನ ಚರಿತ್ರೆ ಆಧಾರಿತ ಸಿನಿಮಾ ಎಂಆರ್ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶಿಸುತ್ತಿದ್ದಾರೆ.

ರವಿ ಶ್ರೀವತ್ಸ ನಿರ್ದೇಶನದ "ಎಂಆರ್" ಮೂಲಕ ಮಲಯಾಳಂ ನಟಿ ಸೌಮ್ಯ ಮೆನನ್ ಸ್ಯಾಂಡಲ್ ವುಡ್ ಪ್ರವೇಶ
ಸೌಮ್ಯ ಮೆನನ್-ದೀಕ್ಷಿತ್
Published On :

ಮಲಯಾಳಂ ನಟಿ ಸೌಮ್ಯ ಮೆನನ್, ಮುತ್ತಪ್ಪ ರೈ ಜೀವನ ಚರಿತ್ರೆ ಆಧಾರಿತ ಸಿನಿಮಾ ಎಂಆರ್ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶಿಸುತ್ತಿದ್ದಾರೆ. 

ರವಿ ಶ್ರೀವತ್ಸ ನಿರ್ದೇಶನದಲ್ಲಿ  ಮುತ್ತಪ್ಪ ರೈ ಜೀವನ ಚರಿತ್ರೆ ಸಿನಿಮಾ ಆಗಿ ಮೂಡಿ ಬರಲಿದ್ದು, ಕಿನವಳ್ಳಿ, ಫ್ಯಾನ್ಸಿ ಡ್ರೆಸ್, ಚಿಲ್ಡ್ರನ್ಸ್ ಪಾರ್ಕ್ ಮತ್ತು ನೀಯುಮ್ ಎನ್ಜಾನಮ್ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಸೌಮ್ಯ ಮೆನನ್ ನಾಯಕಿಯ ಪಾತ್ರದಲ್ಲಿ ನಟಿಸಿದ್ದರೆ, ದೀಕ್ಷಿತ್ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಈ ಸಿನಿಮಾ ದೀಕ್ಷಿತ್ ಗೆ ಮೊದಲನೇ ಸಿನಿಮಾ ಆಗಿದ್ದು ದೀಕ್ಷಿತ್ ಅವರ ತಂದೆ ಶುಭರಾಜಣ್ಣ ಅವರ ಸೌಭಾಗ್ಯ ಲಕ್ಷ್ಮಿ ಫಿಲ್ಮ್ಸ್ ಬ್ಯಾನರ್ ನಡಿಯಲ್ಲಿ ತಯಾರಾಗುತ್ತಿದೆ.

ಮೂರು ಭಾಗಗಳ ಸರಣಿ ಚಿತ್ರ ಇದಾಗಿರಲಿದ್ದು, ಮುತ್ತಪ್ಪ ರೈ ಅವರ ಭೂಗತ ಚಟುವಟಿಕೆಗಳನ್ನೂ ಮೀರಿ ಅವರ ಜೀವನವನ್ನು ಸಿನಿಮಾದಲ್ಲಿ ತೋರಿಸಲಾಗುತ್ತದೆ. 

ಶಿಲ್ಹಾಂದ್ರ ರೆಸಾರ್ಟ್ ನಲ್ಲಿ ಪ್ರಾರಂಭದ ದೃಶ್ಯಗಳನ್ನು ಚಿತ್ರೀಕರಿಸಲಾಗಿದ್ದು, ಹಲವಾರು ಕಾರು, ಹೆಲಿಕಾಫ್ಟರ್ ಗಳನ್ನು ಸಿನಿಮಾದ ಪ್ರೊಮೋಷನ್ ಗಾಗಿಯೇ ಬಳಕೆ ಮಾಡಲಾಗಿತ್ತು.  ಎಂಆರ್ ಗೆ ಗುರುಕಿರಣ್ ಸಂಗೀತ ನೀಡಿದ್ದು, ಜನವರಿಯಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.

ಚಿರಂತನ್ ನಿರ್ದೇಶನದ, ದರ್ಶನ್ ಅಭಿನಯದ ಚಕ್ರವರ್ತಿ ಸಿನಿಮಾ ಸ್ವಲ್ಪಮಟ್ಟಿಗೆ ಮುತ್ತಪ್ಪ ರೈ ಅವರ ಕಥೆಯನ್ನು ಹೋಲುತ್ತಿತ್ತಾದರೂ ರಾಮ್ ಗೋಪಾಲ್ ವರ್ಮಾ ಸೇರಿದಂತೆ ಹಲವು ನಿರ್ದೇಶಕರು ಮುತ್ತಪ್ಪ ರೈ ಕುರಿತ ಸಿನಿಮಾ ಮಾಡುವುದಕ್ಕೆ ಉತ್ಸಾಹ ತೋರಿದ್ದರು. ಪ್ರಾರಂಭದ ದಿನಗಳಲ್ಲಿ ಮುತ್ತಪ್ಪ ರೈ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆ ಅನಂತರ ವಿವೇಕ್ ಒಬೆರಾಯ್ ಹೆಸರು ಕೇಳಿಬಂದಿತ್ತು. ಹಲವು ಭಾಷೆಗಳಲ್ಲಿ ಯೋಜನೆಗೊಂಡಿದ್ದ ಮುತ್ತಪ್ಪ ರೈ ಕುರಿತಾದ ಸಿನಿಮಾ ಕಾರಣಾಂತರಗಳಿಂದ ಪ್ರಾರಂಭವಾಗಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.