ಸಿನಿಮಾ ಸುದ್ದಿ

'ನನ್ನ ಬರ್ತ್ ಡೇಗೆ ಅದ್ಭುತ ಗಿಫ್ಟ್, ನಾನು ಅಪ್ಪನಾದೆ', ನಿರ್ದೇಶಕ ಪವನ್ ಒಡೆಯರ್ ಹುಟ್ಟುಹಬ್ಬದಂದು ಡಬಲ್ ಸಂಭ್ರಮ!

ಸ್ಯಾಂಡಲ್‌ವುಡ್‌ನ ಮತ್ತೊಬ್ಬ ತಾರಾ ದಂಪತಿ ಸಂತಸದ ಸುದ್ದಿ ಹಂಚಿಕೊಂಡಿದ್ದಾರೆ. ಗೋವಿಂದಾಯ ನಮಃ, ಗೂಗ್ಲಿ ಮೊದಲಾದ ಚಿತ್ರಗಳ ನಿರ್ದೇಶಕ ಪವನ್‌ ಒಡೆಯರ್‌ ಅವರ ಪತ್ನಿ ನಟಿ ಅಪೇಕ್ಷಾ ಪುರೋಹಿತ್‌ ಗುರುವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

'ನನ್ನ ಬರ್ತ್ ಡೇಗೆ ಅದ್ಭುತ ಗಿಫ್ಟ್, ನಾನು ಅಪ್ಪನಾದೆ', ನಿರ್ದೇಶಕ ಪವನ್ ಒಡೆಯರ್ ಹುಟ್ಟುಹಬ್ಬದಂದು ಡಬಲ್ ಸಂಭ್ರಮ!
ನಿರ್ದೇಶಕ ಪವನ್ ಒಡೆಯರ್ ಮತ್ತು ಅಪೇಕ್ಷಾ ಪುರೋಹಿತ್(ಸಂಗ್ರಹ ಚಿತ್ರ)
Published On :

ಬೆಂಗಳೂರು: ಸ್ಯಾಂಡಲ್‌ವುಡ್‌ನ ಮತ್ತೊಬ್ಬ ತಾರಾ ದಂಪತಿ ಸಂತಸದ ಸುದ್ದಿ ಹಂಚಿಕೊಂಡಿದ್ದಾರೆ. ಗೋವಿಂದಾಯ ನಮಃ, ಗೂಗ್ಲಿ ಮೊದಲಾದ ಚಿತ್ರಗಳ ನಿರ್ದೇಶಕ ಪವನ್‌ ಒಡೆಯರ್‌ ಅವರ ಪತ್ನಿ ನಟಿ ಅಪೇಕ್ಷಾ ಪುರೋಹಿತ್‌ ಗುರುವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 

ಈ ಖುಷಿಯ ವಿಚಾರವನ್ನು ನಿರ್ದೇಶಕ ಪವನ್ ಒಡೆಯರ್ ಸೋಶಿಯಲ್‌ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳು, ಸ್ನೇಹಿತರು, ಬಂಧುಗಳು ಮತ್ತು ಹಿತೈಷಿಗಳಿಗಾಗಿ ಹಂಚಿಕೊಂಡಿದ್ದಾರೆ. 

ಇಲ್ಲಿ ಮತ್ತೊಂದು ವಿಶೇಷ ಸಂಗತಿಯೆಂದರೆ ಪವನ್ ಒಡೆಯರ್ ಅವರ ಹುಟ್ಟುಹಬ್ಬದ ದಿನವೇ ಅವರಿಗೆ ಮಗ ಜನಿಸಿದ್ದು. ಬರ್ತ್ ಡೇ ದಿನವೇ ನನಗೆ ಅದ್ಭುತವಾದ ಉಡುಗೊರೆ ಸಿಕ್ಕಿದೆ ಎಂದು ನಿರ್ದೇಶಕರು ಬರೆದುಕೊಂಡಿದ್ದಾರೆ.  2018ರ ಆಗಸ್ಟ್‌ನಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.