ಸಿನಿಮಾ ಸುದ್ದಿ

ರಕ್ಷಿತ್ ಶೆಟ್ಟಿ ಅಭಿನಯದ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರೀಕರಣ ಜನವರಿಯಲ್ಲಿ ಪ್ರಾರಂಭ

ರಕ್ಷಿತ್ ಶೆಟ್ಟಿ ಈಗ ಕಿರಣ್‌ರಾಜ್ ಅವರ "777 ಚಾರ್ಲಿ" ಚಿತ್ರೀಕರಣದ ಅಂತಿಮ ಹಂತದಲ್ಲಿ ನಿರತರಾಗಿದ್ದು, ಇದು ಡಿಸೆಂಬರ್ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ. ಆ ನಂತರದಲ್ಲಿ ನಟ ಹೇಮಂತ್ ಎಂ ರಾವ್ ಅವರ "ಸಪ್ತ ಸಾಗರದಾಚೆ ಎಲ್ಲೋ" ಚಿತ್ರೀಕರಣ ಪ್ರಾರಂಭಿಸಲಿದ್ದಾರೆ.

ರಕ್ಷಿತ್ ಶೆಟ್ಟಿ ಅಭಿನಯದ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರೀಕರಣ ಜನವರಿಯಲ್ಲಿ ಪ್ರಾರಂಭ
ರಕ್ಷಿತ್ ಶೆಟ್ಟಿ
Published On :

ರಕ್ಷಿತ್ ಶೆಟ್ಟಿ ಈಗ ಕಿರಣ್‌ರಾಜ್ ಅವರ "777 ಚಾರ್ಲಿ" ಚಿತ್ರೀಕರಣದ ಅಂತಿಮ ಹಂತದಲ್ಲಿ ನಿರತರಾಗಿದ್ದು, ಇದು ಡಿಸೆಂಬರ್ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ. ಆ ನಂತರದಲ್ಲಿ ನಟ ಹೇಮಂತ್ ಎಂ ರಾವ್ ಅವರ "ಸಪ್ತ ಸಾಗರದಾಚೆ ಎಲ್ಲೋ" ಚಿತ್ರೀಕರಣ ಪ್ರಾರಂಭಿಸಲಿದ್ದಾರೆ. ಈ ಚಿತ್ರದ ಶೂಟಿಂಗ್ 2021ರ ಜನವರಿ ಎರಡನೇ ವಾರದಲ್ಲಿ ಪ್ರಾರಂಭವಾಗಲಿದೆ. ಈ ಸುದ್ದಿಯನ್ನು ದೃಢೀಕರಿಸಿರುವ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ “ಇಡೀ ಶೂಟಿಂಗ್ ಒಂದೇ ಸ್ಟ್ರೆಚ್ ನಲ್ಲಿ ನಡೆಯಲಿದೆ. ಇದನ್ನು ಸಂಪೂರ್ಣವಾಗಿ ಬೆಂಗಳೂರಿನಲ್ಲೇ ಚಿತ್ರೀಕರಿಸಲಾಗುತ್ತದೆ" ಎಂದರು

ಇದೀಗ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿರುವ ನಿರ್ದೇಶಕ ಈ ಹಿಂದೆ ಪತ್ರಿಕೆಗೆ ನೀಡಿದ್ದ ಸಂದರ್ಶನವೊಂದರಲ್ಲಿ ತಾವು ಪ್ರೇಕ್ಷಕರನ್ನು ಮತ್ತೆ ಹಳೇ ಕಾಲದ ಪ್ರೇಮಕಥೆಗಳ ಲೋಕಕ್ಕೆ ಕೊಂಡೊಯ್ಯುತ್ತೇನೆ. ಹಾಲು ಜೆನು, ಬಂಧನ ಮುಂತಾದ ಚಿತ್ರಗಳ ನೆನಪು ತರುಸುವಮ್ತೆ ಚಿತ್ರ ಮಾಡುತ್ತೇನೆ ಎಂದು ತಿಳಿಸಿದ್ದರು.  ಇದರಂತೆ ಈ ಚಿತ್ರದೊಡನೆ ಅವರ ಈ ಮಾತುಗಳನ್ನು ನಿಜವಾಗಿಸಲು ಹೊರಟಿದ್ದಾರೆಂದು ಹೇಮಂತ್ ಹೇಳಿದ್ದಾರೆ. ಅದಕ್ಕೆ ಈಗಿನ ಕಮರ್ಷಿಯಲ್ ಎಂಟರ್ಟೈನರ್ ಚಿತ್ರಕ್ಕೆ ತಕ್ಕಂತೆ ಇತರ ಅಂಶಗಳೊಂದಿಗೆ ದೃಶ್ಯ ಕಾವ್ಯದ ಮೂಲಕ ಕಥೆ ಹೇಳುವ ಮಾದರಿಯನ್ನು ಪ್ರೇಕ್ಷಕರ ಮುಂದಿಡಲು ಯೋಜಿಸಿದ್ದಾರೆ.

ಚಿತ್ರದಲ್ಲಿ ರಕ್ಷಿತ್ ಎರಡು ಶೇಡ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂಗೀತ ನಿರ್ದೇಶಕ ಚರಣ್ ರಾಜ್ ಮತ್ತು ಅದ್ವೈತ ಗುರುಮೂರ್ತಿಛಾಯಾಗ್ರಹಣ ಮಾಡಲಿದ್ದು ಚಿತ್ರತಂಡವು ಉಳಿದ ಪಾತ್ರವರ್ಗ ಮತ್ತು ಸಿಬ್ಬಂದಿಯನ್ನು ಡಿಸೆಂಬರ್ ಅಂತ್ಯದೊಳಗೆ ಫೈನಲ್ ಮಾಡಲಿದೆ. 

ಹೇಮಂತ್ ಅವರ ಚಿತ್ರವಲ್ಲದೆ, ಕಿರಿಕ್ ಪಾರ್ಟಿಯ ಉತ್ತರಭಾಗ "ರಿಚಿ"ಯಲ್ಲಿಯೂ ಸಹ ರಕ್ಷಿತ್ ಅಭಿನಯಿಸುತ್ತಿದ್ದಾರೆ. ಮತ್ತೆ "ಪುಣ್ಯಕೋಟಿ" ಹೆಸರಿನ ಚಿತ್ರವೊಂದರಲ್ಲಿ ಸಹ ತೊಡಗಿಸಿಕೊಂಡಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.