ಸಿನಿಮಾ ಸುದ್ದಿ

ಕನ್ನಡಕ್ಕೆ 'ಬಾಹುಬಲಿ' ಪ್ರಭಾಸ್!

"ಕೆಜಿಎಫ್" ಮೂಲಕ ದೇಶದ ಗಮನ ಸೆಳೆದಿರುವ ಸ್ಯಾಂಡಲ್ ವುಡ್ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ತನ್ನ ಮುಂದಿನ ಚಿತ್ರ ಘೋಷಿಸಿದೆ.

ಕನ್ನಡಕ್ಕೆ 'ಬಾಹುಬಲಿ' ಪ್ರಭಾಸ್!
ಸಲಾರ್
Published On :

"ಕೆಜಿಎಫ್" ಮೂಲಕ ದೇಶದ ಗಮನ ಸೆಳೆದಿರುವ ಸ್ಯಾಂಡಲ್ ವುಡ್ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ತನ್ನ ಮುಂದಿನ ಚಿತ್ರ ಘೋಷಿಸಿದೆ.

"ಉಗ್ರಂ", "ಕೆಜಿಎಫ್" ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ "ಸಲಾರ್" ಹೆಸರಿನ ಪ್ಯಾನ್ ಇಂಡಿಯಾ ಚಿತ್ರದಲ್ಲಿ "ಬಾಹುಬಲಿ" ಖ್ಯಾತಿಯ ಪ್ರಭಾಸ್ ನಾಯಕರಾಗಿದ್ದಾರೆ. 

"ಕೆಜಿಎಫ್" ಮೂಲಕ ಹೊಸ ಕ್ರೇಜ್ ಸೃಷ್ಟಿಸಿರುವ ಪ್ರಶಾಂತ್ ನೀಲ್ ಇದೀಗ "ಬಾಹುಬಲಿ" ಮೂಲಕ ಹೆಸರಾದ ಪ್ರಭಾಸ್ ಜತೆ ಸೇರಿರುವುದು ಸಿನಿ ಪ್ರೇಕ್ಷಕರಲ್ಲಿ ಈ ಚಿತ್ರದ ಬಗ್ಗೆ ಕುತೂಹಲ ಇಮ್ಮಡಿಸುವಂತೆ ಮಾಡಿದೆ.

ಚಿತ್ರದ ಪೋಸ್ಟರ್ ಒಂದನ್ನು ಹಂಚಿಕೊಂಡಿರುವ ಸಂಸ್ಥೆ ಇದೊಂದು ಆಕ್ಷನ್ ಚಿತ್ರ ಎಂದು ಹೇಳಿಕೊಂಡಿದೆ. ಅದಕ್ಕೆ ತಕ್ಕಂತೆ ಪ್ರಭಾಸ್ ಕೈನಲ್ಲಿ  ಎಕೆ-47 ಇದ್ದು ಖಡಕ್ ಲುಕ್ ಎಲ್ಲರ ಗಮನ ಸೆಳೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.