ನಿರ್ದೇಶಕ ದಿನೇಶ್ ಬಾಬುರ 50ನೇ ಚಿತ್ರ 'ಕಸ್ತೂರಿ ನಿವಾಸ',ರಚಿತಾ ರಾಮ್ ನಾಯಕಿ
ಸುಪ್ರಭಾತ, ಅಮೃತ ವರ್ಷಿಣಿ, ಲಾಲಿ, ನಿಶ್ಯಬ್ಧ, ಅಭಿ ಮೊದಲಾದ ಹಿಟ್ ಚಿತ್ರಗಳನ್ನು ನೀಡಿದ ದಿನೇಶ್ ಬಾಬು ಅವರ 50ನೇ ಚಿತ್ರ ಕಸ್ತೂರಿ ನಿವಾ, ಇದಕ್ಕೆ ರಚಿತಾ ರಾಮ್ ನಾಯಕಿ.

ಸುಪ್ರಭಾತ, ಅಮೃತ ವರ್ಷಿಣಿ, ಲಾಲಿ, ನಿಶ್ಯಬ್ಧ, ಅಭಿ ಮೊದಲಾದ ಹಿಟ್ ಚಿತ್ರಗಳನ್ನು ನೀಡಿದ ದಿನೇಶ್ ಬಾಬು ಅವರ 50ನೇ ಚಿತ್ರ ಕಸ್ತೂರಿ ನಿವಾ, ಇದಕ್ಕೆ ರಚಿತಾ ರಾಮ್ ನಾಯಕಿ.
ಡಾ ರಾಜ್ ಕುಮಾರ್ ಅಭಿನಯದ ಸೂಪರ್ ಹಿಟ್ ಚಲನ ಚಿತ್ರ ಕಸ್ತೂರಿ ನಿವಾಸದ ಶೀರ್ಷಿಕೆಯನ್ನೇ ಈ ಚಿತ್ರ ಕೂಡ ಹೊಂದಿದ್ದು ಕಥೆ ಬೇರೆ ಎನ್ನುತ್ತಿದೆ ತಂಡ. ಚಿತ್ರದ ಟೈಟಲ್ ಪೋಸ್ಟ್ ಇತ್ತೀಚೆಗೆ ಬಿಡುಗಡೆಯಾಗಿದೆ.ಈ ಚಿತ್ರದಲ್ಲಿ ಕಸ್ತೂರಿ ಎನ್ನುವ ಹೆಸರು ವಿಶೇಷವಾಗಿರುವುದರಿಂದ ಅದನ್ನು ಆಯ್ಕೆಮಾಡಿಕೊಳ್ಳಲಾಯಿತು ಎಂದರು.
ದಿನೇಶ್ ಬಾಬು ಅವರೇ ಇದಕ್ಕೆ ಕಥೆ, ಚಿತ್ರಕಥೆ ಬರೆದಿದ್ದು ತಮ್ಮ ಜೀವನದಲ್ಲಿ ಆದ ಘಟನೆಯನ್ನೇ ತೋರಿಸುತ್ತಿದ್ದಾರಂತೆ. ಥ್ರಿಲ್ಲರ್ ಚಿತ್ರವಾದ ಇದರಲ್ಲಿ ಕೆಲವು ಹಾರರ್ ಅಂಶಗಳೂ ಇರುತ್ತವಂತೆ. 44 ಕನ್ನಡ ಚಿತ್ರಗಳು, 2 ತೆಲುಗು, 2 ಮಲಯಾಳಂ ಮತ್ತು ಒಂದು ತಮಿಳು ಚಿತ್ರವನ್ನು ನಿರ್ದೇಶನ ಮಾಡಿದ್ದರೂ ಕೂಡ ಈ ಚಿತ್ರವನ್ನು ಮೊದಲ ಚಿತ್ರದಂತೆಯೇ ಪರಿಗಣಿಸುತ್ತಾರಂತೆ ನಿರ್ದೇಶಕರು, ಅಷ್ಟು ಬದ್ಧತೆಯಿಂದ ಕೆಲಸ ಮಾಡಬೇಕೆನ್ನುತ್ತಾರೆ.
ಸೆಪ್ಟೆಂಬರ್ 25ರ ಹೊತ್ತಿಗೆ ಶೂಟಿಂಗ್ ಪ್ರಾರಂಭಿಸಲು ಚಿತ್ರತಂಡ ಯೋಚನೆ ಮಾಡುತ್ತಿದ್ದು ಇನ್ನೂ ಸ್ಥಳ ನಿಗದಿಪಡಿಸಿಲ್ಲ. ಪಿಕೆಎಚ್ ದಾಸ್ ಅವರ ಛಾಯಾಗ್ರಹಣ, ಗುಮಿನೇನಿ ವಿಜಯ್ ಸಂಗೀತವಿರುತ್ತದೆ.ಚಿತ್ರದಲ್ಲಿ ಕೇವಲ ಒಂದೇ ಒಂದು ಹಾಡು ಇರುವುದಂತೆ.
ರವೀಶ್ ಆರ್ ಸಿ ಮತ್ತು ರುಬೆನ್ ರಾಜ್ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದು ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


