ನಿಮ್ಮ ಪ್ರಾರ್ಥನೆ ವ್ಯರ್ಥವಾಗುವುದಿಲ್ಲ: ಫೇಸ್ಬುಕ್ ವಿಡಿಯೋದಲ್ಲಿಕಣ್ಣೀರಿಟ್ಟ ಎಸ್ಪಿಬಿ ಪುತ್ರ ಚರಣ್
ಖ್ಯಾತ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ಪುತ್ರ ಎಸ್ಪಿ ಚರಣ್ ತಮ್ಮ ಫೇಸ್ಬುಕ್ ಪುಟದಲ್ಲಿ ಹೊಸ ವಿಡಿಯೋವೊಂದನ್ನು ಅಪ್ ಲೋಡ್ ಮಾಡಿದ್ದು ಅವರ ತಂದೆಯ ಆರೋಗ್ಯ ಸ್ಥಿತಿ ನಿನ್ನೆ ಇದ್ದಂತೆಯೇ ಇದೆ ಎಂದು ಹೇಳಿದ್ದಾರೆ.

ಖ್ಯಾತ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ಪುತ್ರ ಎಸ್ಪಿ ಚರಣ್ ತಮ್ಮ ಫೇಸ್ಬುಕ್ ಪುಟದಲ್ಲಿ ಹೊಸ ವಿಡಿಯೋವೊಂದನ್ನು ಅಪ್ ಲೋಡ್ ಮಾಡಿದ್ದು ಅವರ ತಂದೆಯ ಆರೋಗ್ಯ ಸ್ಥಿತಿ ನಿನ್ನೆ ಇದ್ದಂತೆಯೇ ಇದೆ ಎಂದು ಹೇಳಿದ್ದಾರೆ.
ಹಾಗಿದ್ದರೂ ಚರಣ್ ವೀಡಿಯೊದಲ್ಲಿ ಕಣ್ಣೀರು ಹಾಕಿದ್ದು ಗಾಯಕ ಶೀಘ್ರದಲ್ಲೇ ಚೇತರಿಸಿಕೊಳ್ಳಲು ಚಿತ್ರರಂಗದ ಸದಸ್ಯರು ಸಾಮೂಹಿಕ ಪ್ರಾರ್ಥನಾ ಸಭೆಯನ್ನು ಆಯೋಜಿಸಿದ್ದಕ್ಕಾಗಿ ಇಡೀ ಚಲನಚಿತ್ರ ಕ್ಷೇತ್ರದ ಸೋದರರು ಹಾಗೂ ಅವರ ತಂದೆಯ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ನಿಮ್ಮೆಲ್ಲರ ಟ್ವೀಟ್ ಹಾಗೂ ವೀಡಿಯೊಗಳನ್ನು ನೋಡುವುದರಿಂದ ನಮಗೆ ಭರವಸೆ ಸಿಗುತ್ತದೆ ಎಂದು ಚರಣ್ ವಿಡಿಯೋದಲ್ಲಿ ಹೇಳಿದ್ದಾರೆ.
"ನನ್ನ ತಂದೆಯ ಆರೋಗ್ಯ ಸ್ಥಿತಿಯಲ್ಲಿ ಇದುವರೆಗೆ ಯಾವುದೇ ದೊಡ್ಡ ಬೆಳವಣಿಗೆಗಳು ಕಂಡುಬಂದಿಲ್ಲ. ಆದ್ದರಿಂದ, ಹೆಚ್ಚಾಗಿ ಹೇಳಲು ಏನೂ ಇಲ್ಲ ಎಂದು ನಾನು ಭಾವಿಸಿದ್ದೇನೆ, ಆದರೆ ರವಸೆಯನ್ನು ಜೀವಂತವಾಗಿರಿಸಿದ್ದೇನೆ. ನಂಬಿಕೆ ಉಳ್ಳವನಾಗಿದ್ದೇನೆ. ನಮ್ಮ ಕುಟುಂಬದ ಒಳಿತಿಗಾಗಿ ತಾವೆಲ್ಲಾ ಮಾಡುತ್ತಿರುವ ಪ್ರಾರ್ಥನೆಗಳು ಖಂಡಿತವಾಗಿಯೂ ನನ್ನ ತಂದೆಯನ್ನು ಸಾಧ್ಯವಾದಷ್ಟು ಬೇಗ ಚೇತರಿಸಿಕೊಳ್ಳಲು ಸಹಾಯ ಮಾಡುತ್ತವೆ ಎಂಬ ವಿಶ್ವಾಸವಿದೆ.
"ನನ್ನ ತಂದೆಯ ಶೀಘ್ರ ಚೇತರಿಕೆಗಾಗಿ ಇಂದು ಸಂಜೆ 6 ಗಂಟೆಗೆ ಒಟ್ಟಿಗೆ ಸೇರುತ್ತಿರುವ ಚಲನಚಿತ್ರೋದ್ಯಮ, ಸಂಗೀತ ಉದ್ಯಮ ಮತ್ತು ದೇಶಾದ್ಯಂತದ ಅವರ ಅಭಿಮಾನಿಗಳಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಮ್ಮ ಕುಟುಂಬ ನಿಮಗೆಂದೂ ಕೃತಜ್ಞರಾಗಿರುತ್ತೇವೆ. ನಿಮ್ಮ ಪ್ರೀತಿ ಮತ್ತು ವಾತ್ಸಲ್ಯಕ್ಕಾಗಿ. ನಮಗಾಗಿ ಮತ್ತು ನನ್ನ ತಂದೆಗಾಗಿ ಪ್ರಾರ್ಥಿಸುತ್ತಿರುವ ಜನರು, ನನ್ನ ತಂದೆಯ ಯೋಗಕ್ಷೇಮಕ್ಕಾಗಿ ಈ ಸಾಮೂಹಿಕ ಪ್ರಾರ್ಥನೆಯನ್ನು ಪ್ರಾರಂಭಿಸಿದ ಎಲ್ಲರಿಗೂ ನಾವು ಆಭಾರಿಯಾಗಿದ್ದೇನೆ.
"ನನಗೆ ಹೇಳ್ಅಲು ಪದಗಲೇ ಸಿಕ್ಕುತ್ತಿಲ್ಲ. ನಿಮಗೆ ನಾನು ನಮಸ್ಕರಿಸುತ್ತೇನೆ, ನಿಮ್ಮ ಪ್ರಾರ್ಥನೆಗಳು ವ್ಯರ್ಥವಾಗುವುದಿಲ್ಲ. ದೇವರಿಗೆ ಆತ್ಮಸಾಕ್ಷಿಯಿದೆ, ಆದ್ದರಿಂದ ಅವರು ಶೀಘ್ರದಲ್ಲೇ ಗುಣವಾಗುತ್ತಾರೆ ಎಂಬ ವಿಶ್ವಾಸವಿದೆ. ನಿಮ್ಮ ಪ್ರಾರ್ಥನೆಗಳು ನಮಗೆ ಭರವಸೆ ನೀಡುತ್ತದೆ. " ಚರಣ್ ಹೇಳಿದ್ದಾರೆ.
ಎಸ್ಪಿ ಬಾಲಸುಬ್ರಹ್ಮಣ್ಯಂ ಅವರು ಕೊರೋನಾವೈರಸ್ ಸೋಂಕಿಗೆ ತುತ್ತಾಗಿ ಆಗಸ್ಟ್ 5 ರಂದು ಚೆನ್ನೈನ ಎಂಜಿಎಂ ಹೆಲ್ತ್ಕೇರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆಗಸ್ಟ್ 13 ರ ರಾತ್ರಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತು ತರುವಾಯ, ಅವರನ್ನು ವೆಂಟಿಲೇಟರ್ ಸಹಾಯದಲ್ಲಿರಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


