ಸಿನಿಮಾ ಸುದ್ದಿ

ಆಗಸ್ಟ್ 23ಕ್ಕೆ ರಚಿತಾರಾಮ್-ಧನಂಜಯ್ ಅಭಿನಯದ ಚಿತ್ರದ ಶೀರ್ಷಿಕೆ ಬಿಡುಗಡೆ

ಧನಂಜಯ್ ಮತ್ತು ರಚಿತಾ ರಾಮ್ ಅಭಿನಯದ ಮುಂಬರುವ ಚಿತ್ರದ ಫಸ್ಟ್ ಲುಕ್ ಮತ್ತು ಶೀರ್ಷಿಕೆ ಧನಂಜಯ್ ಅವರ ಹುಟ್ಟುಹಬ್ಬ ದಿನವಾದ ಆಗಸ್ಟ್ 23ರಂದು ಬಿಡುಗಡೆಯಾಗಲಿದೆ.

ಆಗಸ್ಟ್ 23ಕ್ಕೆ ರಚಿತಾರಾಮ್-ಧನಂಜಯ್ ಅಭಿನಯದ ಚಿತ್ರದ ಶೀರ್ಷಿಕೆ ಬಿಡುಗಡೆ
ರಚಿತಾ ರಾಮ್, ಧನಂಜಯ್
Published On :

ಧನಂಜಯ್ ಮತ್ತು ರಚಿತಾ ರಾಮ್ ಅಭಿನಯದ ಮುಂಬರುವ ಚಿತ್ರದ ಫಸ್ಟ್ ಲುಕ್ ಮತ್ತು ಶೀರ್ಷಿಕೆ ಧನಂಜಯ್ ಅವರ ಹುಟ್ಟುಹಬ್ಬ ದಿನವಾದ ಆಗಸ್ಟ್ 23ರಂದು ಬಿಡುಗಡೆಯಾಗಲಿದೆ.

ಫಸ್ಟ್ ಲುಕ್ ಗೆ ಫೋಟೋ ಶೂಟ್ ಬ್ಯುಸಿಯಲ್ಲಿದೆ ಸದ್ಯ ಚಿತ್ರತಂಡ. ನಿರ್ದೇಶಕ ಎಸ್ ರವೀಂದ್ರನಾಥ್ ಜೊತೆ ರಚಿತಾ ರಾಮ್ ಈ ಹಿಂದೆ ಕೆಲಸ ಮಾಡಿದ್ದರೆ ಧನಂಜಯ್ ಅವರಿಗೆ ಈ ನಿರ್ದೇಶಕರ ಜೊತೆ ಮೊದಲ ಚಿತ್ರ. ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ಶೂಟಿಂಗ್ ಆರಂಭವಾಗುವ ನಿರೀಕ್ಷೆಯಿದೆ. 

ಈ ಮಧ್ಯೆ ರಚಿತಾ ಮತ್ತು ಧನಂಜಯ್ ಡಾಲಿ ಎಂಬ ಪ್ರಭು ಶ್ರೀನಿವಾಸ್ ಚಿತ್ರದಲ್ಲಿ ಸಹ ಒಟ್ಟಾಗಿ ಅಭಿನಯಿಸುತ್ತಿದ್ದಾರೆ. ಯೋಗೇಶ್ ನಾರಾಯಣ್ ಇದರ ನಿರ್ಮಾಪಕರು. 

ರಚಿತಾ ಅವರ 100 ಮತ್ತು ಏಕ್ ಲವ್ ಯಾ ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ತೆಲುಗು ಚಿತ್ರ ಸೂಪರ್ ಮಚಿಯ ಶೂಟಿಂಗ್ ಮುಗಿಸಿರುವ ರಚಿತಾ ಏಪ್ರಿಲ್, ಲಿಲ್ಲಿ ಮತ್ತು ವೀರಂ ಶೂಟಿಂಗ್ ಗಾಗಿ ಕಾಯುತ್ತಿದ್ದಾರೆ.

ಯುವರತ್ನ ಮತ್ತು ಪೊಗರು ಚಿತ್ರಗಳ ಬಿಡುಗಡೆಗೆ ಕಾಯುತ್ತಿರುವ ಧನಂಜಯ್ ಬಡವ ರಾಸ್ಕಲ್ ಶೂಟಿಂಗ್ ಮುಗಿಸಿದ್ದಾರೆ. ಇನ್ನು ಎಂ ಪಿ ಜಯರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಧನಂಜಯ್ ಅವರ ಚಿತ್ರದ ಶೀರ್ಷಿಕೆಯನ್ನು ನಾಳೆ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.