'ಭಗವಾನ್ ಶ್ರೀ ಕೃಷ್ಣ ಪರಮಾತ್ಮ' ಸಿನಿಮಾದಲ್ಲಿ ಧ್ರುವನ್
ಕೃಷ್ಣ ಜನ್ಮಾಷ್ಟಮಿ ದಿನದಂದು ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಸಿನಿಮಾ ತಂಡಕ್ಕೆ ನಟ ದರ್ಶನ್ ಶುಭ ಹಾರೈಸಿದ್ದಾರೆ. ಪಾರ್ವತಮ್ಮ ರಾಜ್ಕುಮಾರ್ ಸಹೋದರನ ಪುತ್ರನಾದ ಧ್ರುವನ್ ಈ ಚಿತ್ರದ ಮೂಲಕ ಗಾಂಧಿನಗರಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಬೆಂಗಳೂರು: ಕೃಷ್ಣ ಜನ್ಮಾಷ್ಟಮಿ ದಿನದಂದು ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಸಿನಿಮಾ ತಂಡಕ್ಕೆ ನಟ ದರ್ಶನ್ ಶುಭ ಹಾರೈಸಿದ್ದಾರೆ. ಪಾರ್ವತಮ್ಮ ರಾಜ್ಕುಮಾರ್ ಸಹೋದರನ ಪುತ್ರನಾದ ಧ್ರುವನ್ ಈ ಚಿತ್ರದ ಮೂಲಕ ಗಾಂಧಿನಗರಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ದರ್ಶನ್ ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಸಿನಿಮಾ ತಂಡಕ್ಕೆ ಶುಭ ಹಾರೈಸಿದ್ದಾರೆ. ಧ್ರುವನ್ ಚೊಚ್ಚಲ ಸಿನಿಮಾಗೆ ನಾಗೇಂದ್ರ ಪ್ರಸಾದ್ ಹಾಗೂ ಡಿ ಭಗವಾನ್ ಆಕ್ಷನ್ ಕಟ್ ಹೇಳ್ತಿದ್ದಾರೆ.
ಭರತ್ ವಿಷ್ಣುಕಾಂತ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಶುಭ ಹಾರೈಸಿದ್ದಾರೆ. ಈ ಮೊದಲು ಸೂರಜ್ ಕುಮಾರ್ ಎಂಬ ಹೆಸರಿಟ್ಟುಕೊಂಡಿದ್ದ ಧ್ರುವನ್ ರಘು ಕೋವಿ ನಿರ್ದೇಶನದ ಸಿನಿಮಾದಲ್ಲಿ ನಟಿಸಬೇಕಿತ್ತು, ಈ ಸಿನಿಮಾವನ್ನು ಬಿಎಸ್ ಸುಧೀಂದ್ರ ನಿರ್ಮಿಸುತ್ತಿದ್ದು ಪ್ರಿಯಾ ವಾರಿಯರ್ ನಟಿಸಬೇಕಿತ್ತು, ಕಳೆದ ವರ್ಷದ ನವೆಂಬರ್ ನಲ್ಲಿ ಶಿವರಾಜ್ ಕುಮಾರ್ ಮತ್ತು ದರ್ಶನ್ ಸಮ್ಮುಖದಲ್ಲಿಲಾಂಚ್ ಆಗಿತ್ತು. ಆದರೆ ಸಿನಿಮಾ ಶೂಟಿಂಗ್ ಆರಂಭವಾಗಲೇ ಇಲ್ಲ, ಆ ಸಿನಿಮಾ ಅಪ್ ಡೇಟ್ ಬಗ್ಗೆ ಯಾವುದು ಮಾಹಿತಿಗಳು ಇಲ್ಲ,
ನಾನು ತುಂಬಾ ಸಮಯ ಕಾದದ್ದೆ ಬಂತು. ನಿರ್ಮಾಪಕರ ಕಡೆಯಿಂದ ಯಾವುದೇ ಮಾಹಿತಿ ಬಂದಿಲ್ಲ, ಹೀಗಾಗಿ ನನ್ನ ಕೆರಿಯರ್ ಆರಂಭಿಸಲು ನಾನು ಮುಂದಾಗಗಿದ್ದೇನೆ, ಭಗವಾನ್ ಶ್ರೀ ಕೃಷ್ಣ ಪರಮಾತ್ಮ ನಿರ್ಮಾಪಕರು ಸ್ಪಷ್ಟತೆ ಹೊಂದಿದ್ದಾರೆ. ಯಾವ ರೀತಿ ಸಿನಿಮಾ ಶೂಟಿಂಗ್ ನಡೆಸಬೇಕೆಂಬ ಪ್ಲಾನ್ ಮಾಡಿದ್ದಾರೆ, ಹಿಂದಿನ ಸಿನಿಮಾ ಪ್ರಾಜೆಕ್ಟ್ ಮುಂದುವರಿಸುವುದು ರಘು ಕೋವಿ ಅವರಿಗೆ ಬಿಟ್ಟ ವಿಚಾರವಾಗಿದೆ ಎಂದು ಧ್ರುವನ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


