ವಿನೋದ್ ಪ್ರಭಾಕರ್ ಗೆ ಜೋಡಿಯಾಗಲಿದ್ದಾರೆ ಪಾರ್ವತಿ ಅರುಣ್
ವಿನೋದ್ ಪ್ರಭಾಕರ್ ದರ್ಶನ್ ಜೊತೆ “ರಾಬರ್ಟ್’ ನಲ್ಲಿ ನಟಿಸಿರೋದು ಗೊತ್ತೇ ಇದೆ. ಸದ್ಯಕ್ಕೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅವರು ಮನೆಯಲ್ಲಿದ್ದಾರೆ. ಆದರೂ, ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಬೆಂಗಳೂರು: ವಿನೋದ್ ಪ್ರಭಾಕರ್ ದರ್ಶನ್ ಜೊತೆ “ರಾಬರ್ಟ್’ ನಲ್ಲಿ ನಟಿಸಿರೋದು ಗೊತ್ತೇ ಇದೆ. ಸದ್ಯಕ್ಕೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅವರು ಮನೆಯಲ್ಲಿದ್ದಾರೆ. ಆದರೂ, ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹಾಗಂತ, ಚಿತ್ರೀಕರಣಕ್ಕೆ ಹೊರಡುತ್ತಿಲ್ಲ. ಕೋವಿಡ್ 19 ಸಮಸ್ಯೆ ಬಗೆಹರಿದ ನಂತರ ಅವರು ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ವಿನೋದ್ ಪ್ರಭಾಕರ್ ನಟಿಸಲಿರುವ ಹೊಸ ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಈ ಚಿತ್ರಕ್ಕೆ ಪ್ರಮೋದ್ ಕುಮಾರ್ ನಿರ್ದೇಶಕರು. ಇನ್ನು, ಹೇಮಾವತಿ ಮುನಿಸ್ವಾಮಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಇವರು “ಕುಲ್ಫಿ’ ಚಿತ್ರ ನಿರ್ಮಿಸಿದ್ದರು. ಈಗ ವಿನೋದ್ ಪ್ರಭಾಕರ್ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಇನ್ನು, “ಗೀತಾ’ ಸಿನಿಮಾದಲ್ಲಿ ನಾಯಕಿಯಾಗಿದ್ದ ಮಲಯಾಳಂ ಚಿತ್ರರಂಗದ ನಟಿ ಪಾರ್ವತಿ ಅರುಣ್ ವಿನೋದ್ ಪ್ರಭಾಕರ್ ಆವರಿಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ವಿನೋದ್ ಪ್ರಭಾಕರ್ ಚಿತ್ರಗಳೆಂದರೆ, ಪಕ್ಕಾ ಆ್ಯಕ್ಷನ್ ಮಯವಾಗಿರುತ್ತವೆ. ಈ ಸಿನಿಮಾ ಕೂಡ ಭರ್ಜರಿ ಆ್ಯಕ್ಷನ್ ಹೊಂದಿದ್ದು, ಈಗಿನ ಟ್ರೆಂಡ್‌ಗೆ ತಕ್ಕಂತೆ ಕಥೆ ಹೆಣೆದಿರುವ ನಿರ್ದೇಶಕರು, ವಿನೋದ್ ಪ್ರಭಾಕರ್ ಫ್ಯಾನ್ಸ್‌ಗೆ ಬೇಕಾದ ಎಲ್ಲಾ ಎಲಿಮೆಂಟ್ಸ್ ಇಟ್ಟು ಸಿನಿಮಾ ಮಾಡುತ್ತಿದ್ದಾರೆ.
ಕೋವಿಡ್ 19 ಸಮಸ್ಯೆ ಬಗೆಹರಿದ ಬಳಿಕ ಚಿತ್ರದ ಫಸ್ಟ್ ಲುಕ್ ಅನ್ನು ಗ್ರ್ಯಾಂಡ್ ಆಗಿ ರಿಲೀಸ್ ಮಾಡುವ ಮೂಲಕ ಮುಹೂರ್ತ ಮಾಡುವ ಯೋಚನೆ ನಿರ್ಮಾಪಕರದ್ದು. ಚಿತ್ರದಲ್ಲಿ ಭರ್ಜರಿ ಐದು ಫೈಟ್ಸ್‌ಗಳಿದ್ದು, ಚಿತ್ರದ ಎಲ್ಲಾ ಹಾಡುಗಳಿಗೂ “ಬಹದ್ದೂರ್’ ಚೇತನ್ ಸಾಹಿತ್ಯ ಬರೆಯುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


