ಸಿನಿಮಾ ಸುದ್ದಿ

ಬುಲೆಟ್ ಪ್ರಕಾಶ್ ಇರಲಿ, ಇಲ್ಲದಿರಲಿ ಎಂದಿಗೂ ನನ್ನ ಗೆಳೆಯನೇ, ನಿಮಗೆ ನಾನಿದ್ದೇನೆ: ಕುಟುಂಬಕ್ಕೆ ದರ್ಶನ್ ಅಭಯ

ಇವತ್ತಿಗೆ ಬುಲೆಟ್ ಪ್ರಕಾಶ್ ನನ್ನ ಗೆಳೆಯನಿರದಿರಬಹುದು ಆದರೆ ಒಂದಾನೊಂದು ಕಾಲದಲ್ಲಿ ನನ್ನ ಕುಚುಕು ಗೆಳೆಯನಾಗಿದ್ದು ಆತನ ಕುಟುಂಬಕ್ಕೆ ನಾನಿದ್ದೇನೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಯ ನೀಡಿದ್ದಾರೆ.

ಬುಲೆಟ್ ಪ್ರಕಾಶ್ ಇರಲಿ, ಇಲ್ಲದಿರಲಿ ಎಂದಿಗೂ ನನ್ನ ಗೆಳೆಯನೇ, ನಿಮಗೆ ನಾನಿದ್ದೇನೆ: ಕುಟುಂಬಕ್ಕೆ ದರ್ಶನ್ ಅಭಯ
ಪ್ರಕಾಶ್-ದರ್ಶನ್
Published On :

ಬೆಂಗಳೂರು: ಇವತ್ತಿಗೆ ಬುಲೆಟ್ ಪ್ರಕಾಶ್ ನನ್ನ ಗೆಳೆಯನಿರದಿರಬಹುದು ಆದರೆ ಒಂದಾನೊಂದು ಕಾಲದಲ್ಲಿ ನನ್ನ ಕುಚುಕು ಗೆಳೆಯನಾಗಿದ್ದು ಆತನ ಕುಟುಂಬಕ್ಕೆ ನಾನಿದ್ದೇನೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಯ ನೀಡಿದ್ದಾರೆ.

ಕನ್ನಡದ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರು ನಿನ್ನೆ ಕಿಡ್ನಿ ವೈಫಲ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. 44 ವರ್ಷಕ್ಕೆ ಬುಲೆಟ್ ಪ್ರಕಾಶ್ ಇಹ ಲೋಕ ತ್ಯಜಿಸಿದ್ದು ನೋವಿನ ವಿಷಯವಾಗಿತ್ತು. 

ಇನ್ನು ಬುಲೆಟ್ ಪ್ರಕಾಶ್ ಮತ್ತು ದರ್ಶನ್ ಕಲಾಸಿಪಾಳ್ಯ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಬುಲೆಟ್ ಪ್ರಕಾಶ್ ಮತ್ತು ದರ್ಶನ್ ಆಪ್ತ ಸ್ನೇಹಿತರಾಗಿದ್ದರು. ಆದರೆ ಕೆಲ ವರ್ಷಗಳಿಂದ ಕೆಲ ಭಿನ್ನಾಭಿಪ್ರಾಯದಿಂದಾಗಿ ಇಬ್ಬರು ದೂರವಾಗಿದ್ದರು. 

ಇದೀಗ ದರ್ಶನ್ ಅವರ ಈಗ ನನ್ನ ಗೆಳೆಯಾನೊ ಅಲ್ವೋ... ಆದರೆ ಒಂದು ಕಾಲದ ಗೆಳೆಯ ಯಾರು ಕೊಟ್ರೂ ಬಿಟ್ರೂ ಬುಲೆಟ್ ಪ್ರಕಾಶ್ ಮಗಳ ಮದುವೆ ಜವಾಬ್ದಾರಿ ನನ್ನದು ಎಂದು ದರ್ಶನ್ ಮಾತು. ಅಭಯ. ಹಾಸ್ಯನಟ ಬುಲೆಟ್ ಪ್ರಕಾಶ್ ಸಿನಿ ಪಯಣ ನಿಲ್ಲಿಸಿದ್ದಾರೆ. ಹಾಸ್ಯದ ನೆನಪೊಂದನ್ನು ಬಿಟ್ಟು ಅಗಲಿದ್ದಾರೆ ಎಂದು ದರ್ಶನ್ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.