ಸಿನಿಮಾ ಸುದ್ದಿ

ಸುದೀಪ್ ಜೊತೆಗೆ ಕೋಟಿಗೊಬ್ಬ ಪ್ರಾಂಚೈಸಿ ಮುಂದುವರೆಸುತ್ತೇನೆ- ಸೂರಪ್ಪಬಾಬು

ಪೈಲ್ವಾನ್ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಕಿಚ್ಚ ಸುದೀಪ್, ಕೋಟಿಗೊಬ್ಬ 3 ಚಿತ್ರದ ಶೂಟಿಂಗ್ ನಲ್ಲಿ ಬ್ಯೂಸಿಯಾಗಲಿದ್ದಾರೆ. ವಿದೇಶದಲ್ಲಿ 15 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಯಲಿದ್ದು, ಚಿತ್ರತಂಡ ಈಗಾಗಲೇ ಪೊಲೆಂಡ್ ನಲ್ಲಿದೆ.

ಸುದೀಪ್ ಜೊತೆಗೆ ಕೋಟಿಗೊಬ್ಬ ಪ್ರಾಂಚೈಸಿ ಮುಂದುವರೆಸುತ್ತೇನೆ- ಸೂರಪ್ಪಬಾಬು
ಸಂಗ್ರಹ ಚಿತ್ರ
Published On :

ಪೈಲ್ವಾನ್ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಕಿಚ್ಚ ಸುದೀಪ್,ಕೋಟಿಗೊಬ್ಬ 3 ಚಿತ್ರದ ಶೂಟಿಂಗ್ ನಲ್ಲಿ ಬ್ಯೂಸಿಯಾಗಲಿದ್ದಾರೆ. ವಿದೇಶದಲ್ಲಿ 15 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಯಲಿದ್ದು, ಚಿತ್ರತಂಡ ಈಗಾಗಲೇ ಪೊಲೆಂಡ್ ನಲ್ಲಿದೆ. ಈ ವಾರದಲ್ಲಿ ಸುದೀಪ್ ಕೂಡಾ ಚಿತ್ರತಂಡವನ್ನು ಸೇರಲಿದ್ದಾರೆ.

ಸುದೀಪ್ ಜೊತೆಗೆ ಚೊಚ್ಚಲ ಬಾರಿಗೆ ಶಿವ ಕಾರ್ತಿಕ್ ನಿರ್ದೇಶನದ ಕೋಟಿಗೊಬ್ಬ3 ಚಿತ್ರವನ್ನು ಸೂರಪ್ಪ ಬಾಬು ನಿರ್ಮಿಸುತ್ತಿದ್ದಾರೆ. ಶೇ, 85 ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಕ್ಲೈಮ್ಯಾಕ್ಸ್ ಹಂತದ ಚಿತ್ರೀಕರಣಕ್ಕಾಗಿ ಚಿತ್ರ ತಂಡ ಪೊಲ್ಯಾಂಡ್ ಲ್ಲಿದೆ. ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ಬರಲಿದೆ. ಹಾಡುಗಳ ಸಿಕ್ವೇನ್ಸ್ ನಂತರ 10 ದಿನಗಳ ಕಾಲ ಡಬ್ಬಿಂಗ್ ಕೆಲಸ ನಡೆಯಲಿದೆ. 

ಬಿಗ್ ಬಜೆಟ್ ನ ಕೋಟಿಗೊಬ್ಬ 3 ಚಿತ್ರವನ್ನು ಭಾರತ, ಸೆರ್ಬಿಯಾ ಮತ್ತು ಪೊಲ್ಯಾಂಡ್ ನಲ್ಲಿ ಚಿತ್ರೀಕರಿಸಲಾಗಿದೆ. ಇದು ಆಕ್ಸನ್ ಎಂಟರ್ ಟೈನರ್ ಚಿತ್ರವಾಗಿದ್ದು, ಪೈಸಾ ವಸೂಲಿಯಾಗುವುದರಲ್ಲಿ ಅನುಮಾನವೇ ಇಲ್ಲ.ಆದಾಗ್ಯೂ, ಸ್ವಲ್ಪ ತಡವಾಗಿದೆ. ಇನ್ನೊಂದಿಷ್ಟು ಉತ್ತಮ ಅಂಶಗಳೊಂದಿಗೆ ಚಿತ್ರ ಬರುವುದಾಗಿ ಸೂರಪ್ಪ ಬಾಬು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೊನೆಯವರೆಗೂ ಸುದೀಪ್ ಜೊತೆಗೆ ಕೋಟಿಗೊಬ್ಬ ಪ್ರಾಂಚೈಸಿಯನ್ನು ಮುಂದುವರೆಸುತ್ತೇನೆ ಎಂದು ಸೂರಪ್ಪ ಬಾಬು ಹೇಳಿದರು.

ಕೋಟಿಗೊಬ್ಬ ಚಿತ್ರದ ಮೂಲಕ ಬಾಲಿವುಡ್ ನಟ ಅಪ್ತಾಬ್ ಶಿವ್ ದಾಸನಿ ಹಾಗೂ ಶ್ರದ್ದಾ ದಾಸ್  ಮೊದಲ ಬಾರಿಗೆ ಕನ್ನಡದಲ್ಲಿ ನಟಿಸುತ್ತಿದ್ದಾರೆ. ಮಡೋನಾ ಸೆಬಾಸ್ಟಿಯನ್ ಈ ಚಿತ್ರದ ನಾಯಕಿಯಾಗಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ ಅವರ 151ನೇ ಚಿತ್ರ ಸೈ ರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಸುದೀಪ್ ಅಭಿನಯಿಸಿದ್ದು, ಅಕ್ಟೋಬರ್ 2 ರಂದು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಈ ಚಿತ್ರ ತೆರೆ ಕಾಣಲಿದೆ. ಪ್ರಭುದೇವ ನಿರ್ದೇಶನದ ದಬಾಂಗ್ -3 ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಡಿಸೆಂಬರ್ ಈ ಚಿತ್ರ ಬಿಡುಗಡೆಯಾಗಲಿದೆ.

ಈ ಮಧ್ಯೆ ಮಂಜುನಾಥ್ ಗೌಡ ನಿರ್ಮಾಣದಲ್ಲಿ ಸುದೀಪ್ ಜೊತೆಗೆ ಚಿತ್ರ ಮಾಡಲು ನಿರ್ದೇಶಕ ಅನೂಪ್ ಬಂಡಾರಿ ಸಿದ್ಧತೆ ನಡೆಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.