ಸಿನಿಮಾ ಸುದ್ದಿ

ಜಗ್ಗೇಶ್ ನಟನೆಯ 'ರಂಗನಾಯಕ' ಟೀಸರ್ ನೋಡಿ ಕಾಂಗ್ರೆಸ್ಸಿಗರು ಕೆರಳಿದ್ದೇಕೆ? ವಿಡಿಯೋ ವೈರಲ್!

ನವರಸ ನಾಯಕ ಜಗ್ಗೇಶ್ ಮತ್ತು ನಿರ್ದೇಶಕ ಗುರುಪ್ರಸಾದ್ ಮತ್ತೆ ಒಂದಾಗಿದ್ದಾರೆ. ಮಠ, ಎದ್ದೇಳು ಮಂಜುನಾಥ ಎಂಬ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದ ಈ ಜೋಡಿ ಇದೀಗ ರಂಗನಾಯಕ ಚಿತ್ರದಲ್ಲಿ ಒಂದಾಗಿದೆ.

ಜಗ್ಗೇಶ್ ನಟನೆಯ 'ರಂಗನಾಯಕ' ಟೀಸರ್ ನೋಡಿ ಕಾಂಗ್ರೆಸ್ಸಿಗರು ಕೆರಳಿದ್ದೇಕೆ? ವಿಡಿಯೋ ವೈರಲ್!
ಜಗ್ಗೇಶ್-ರಾಹುಲ್
Published On :

ನವರಸ ನಾಯಕ ಜಗ್ಗೇಶ್ ಮತ್ತು ನಿರ್ದೇಶಕ ಗುರುಪ್ರಸಾದ್ ಮತ್ತೆ ಒಂದಾಗಿದ್ದಾರೆ. ಮಠ, ಎದ್ದೇಳು ಮಂಜುನಾಥ ಎಂಬ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದ ಈ ಜೋಡಿ ಇದೀಗ ರಂಗನಾಯಕ ಚಿತ್ರದಲ್ಲಿ ಒಂದಾಗಿದೆ. ಆದರೆ ಚಿತ್ರದ ಟೀಸರ್ ಇದೀಗ ವಿವಾದಕ್ಕೆ ಕಾರಣವಾಗಿದ್ದು ರಾಹುಲ್ ಗಾಂಧಿಗೆ ಅಪಮಾನ ಮಾಡಲಾಗಿದೆ ಎಂದು ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಹರಿಕಥೆ, ಯಕ್ಷಗಾನ ಮಾದರಿಯ ಹಾಡಿನ ಹಿನ್ನೆಲೆಯಲ್ಲಿ ರಂಗನಾಯಕ ಚಿತ್ರದ ಟೀಸರ್ ಅನ್ನು ಗುರು ಪ್ರಸಾದ್ ಚಿತ್ರೀಕರಿಸಿದ್ದಾರೆ. ಜಗ್ಗೇಶ್ ಶ್ರೀವಿಷ್ಣು ಅವತಾರದಲ್ಲಿ ಕಾಣಿಸಿಕೊಂಡಿದ್ದು ಲಕ್ಷ್ಮಿಯನ್ನು ಎಬ್ಬಿಸುವಂತೆ ಟೀಸರ್ ನಲ್ಲಿ ತೋರಿಸಲಾಗಿದೆ. 

ಟೀಸರ್ ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಚಿಹ್ನೆಯನ್ನು ತೋರಿಸಲಾಗಿದೆ. ಅಲ್ಲದೆ ರಾಹುಲ್ ಗಾಂಧಿಯನ್ನು ರಾಹುಲ್ ಗಾಂಢಿ ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣವಾಗಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.