ಸಿನಿಮಾ ಸುದ್ದಿ

ಶಶಿಕಾಂತ್ ಗಟ್ಟಿಯ 'ರಾಂಚಿ'ಗೆ ಬಾಲಿವುಡ್ ನಿರ್ಮಾಪಕರು ಫಿದಾ!

ನಿರ್ದೇಶಕ ಶಶಿಕಾಂತ್ ಗಟ್ಟಿ ಅವರ ಮುಂಬರುವ ಚಿತ್ರ "ರಾಂಚಿ: ನಿಜಜೀವನದ ಘಟನೆಯನ್ನು ಆಧರಿಸಿ ತಯಾರಾಗಿದ್ದು ಇದೀಗ ಬಾಲಿವುಡ್‌ನಿಂದಲೂ ಮೆಚ್ಚುಗೆ ಗಿಟ್ಟಿಸಿದೆ.

ಶಶಿಕಾಂತ್ ಗಟ್ಟಿಯ 'ರಾಂಚಿ'ಗೆ ಬಾಲಿವುಡ್ ನಿರ್ಮಾಪಕರು ಫಿದಾ!
ರಾಂಚಿ ಚಿತ್ರದ ಒಂದು ದೃಶ್ಯ
Published On :

ನಿರ್ದೇಶಕ ಶಶಿಕಾಂತ್ ಗಟ್ಟಿ ಅವರ ಮುಂಬರುವ ಚಿತ್ರ "ರಾಂಚಿ: ನಿಜಜೀವನದ ಘಟನೆಯನ್ನು ಆಧರಿಸಿ ತಯಾರಾಗಿದ್ದು ಇದೀಗ ಬಾಲಿವುಡ್‌ನಿಂದಲೂ ಮೆಚ್ಚುಗೆ ಗಿಟ್ಟಿಸಿದೆ.

ಕಥಾವಸ್ತುವಿನ ನಿರೂಪಣೆಯ ಶೈಲಿ ಹಿಂದಿ ನಿರ್ಮಾಪಕರ ಗಮನ ಸೆಳೆದಿದ್ದು ಚಿತ್ರವನ್ನು ಹಿಂದಿಯಲ್ಲಿ ಸಹ ನಿರ್ಮಾಣ ಮಾಡಲು ಅವರು ಉತ್ಸುಕರಾಗಿದ್ದಾರೆ.ಚಿತ್ರವನ್ನು "ಸ್ಕೋಪ್"(ಎಸ್.ಕೆ. ಓಜಾ ಪಿಕ್ಚರ್ಸ್ ಮತ್ತು ಎಂಟರ್ಟೈನ್ಮೆಂಟ್) ಬ್ಯಾನರ್ ನಡಿ ನಿರ್ಮಾಣ ಮಾಡುವುದಾಗಿ ಹೇಳಲಾಗಿದ್ದು ಓಜಾ ಪುತ್ರ ರೂಪೇಶ್ ಓಜಾ ಈ ಚಿತ್ರದ ನಿರ್ಮಾಪಕರಾಗಲಿದ್ದಾರೆ. ಈ ಹಿಂದೆ ರೂಪೇಶ್ ಮರಾಠಿಯಲ್ಲಿ ಭಾರೀ ಯಶಸ್ಸು ಕಂಡಿದ್ದ "ಆನಂದಿ ಗೋಪಾಲ್" ಚಿತ್ರದ ನಿರ್ಮಾಣ ಮಾಡಿದ್ದರು.

ಈ ಚಿತ್ರದ ಬಗ್ಗೆ ಶಶಿಕಾಂತ್ ಗೆ ಮೊದಲ ಸುಳಿವು ಸಿಕ್ಕಿದ್ದು 2009ರಲ್ಲಿ. ಅದಾಗ ಅವರು ರಾಂಚಿಯಿಂದ ಒಂದು ಕರೆ ಸ್ವೀಕರಿಸಿದ್ದರು.ಅವರು ತಾವು ಸರ್ಕಾರದ ಪರವಾಗಿ ಮಾತನಾಡುವುದಾಗಿ ಹೇಳಿ ಒಂದು ಡಾಕ್ಯುಮೆಂಟರಿ ತಯಾರಿಸುವ ಬಗೆಗೆ ಉತ್ಸಾಹ ಹೊಂದಿರುವುದಾಗಿ ಹೇಳಿದ್ದರು. ಆದರೆ ನಿರ್ದೇಶಕರು ಸ್ಥಳಕ್ಕೆ ಭೇಟಿ ಕೊಟ್ಟ ನಂತರ ಅವ್ರು ಡಕಾಯಿತರೊಡನೆ ಸಂಪರ್ಕದಲ್ಲಿದ್ದಾರೆ ಎಂಬುದನ್ನು ಅರಿತರು.ಆಗ ತಾನು ಆ ದರೋಡೆಕೋರರ ಗ್ಯಾಂಗ್ ನಿಂದ ಪಾರಾಗಲು ಮತ್ತು ಆ ಗುಂಪನ್ನು ಪೋಲೀಸರಿಗೆ ಹಿಡಿದುಕೊಡಲು ಆತ ಮಾಡುವ ಪ್ರಯತ್ನ-ತನ್ನದೇ ಬದುಕಲ್ಲಿ ನಡೆದ ಕಥೆಯನ್ನು ದೊಡ್ಡ ಪರದೆಯಲ್ಲಿ ತೋರಿಸಲು ಗಟ್ಟಿ ತೀರ್ಮಾನಿಸಿದ್ದಾರೆ. ಇದೀಗ ಚಿತ್ರವು ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ತಯಾರಾಗುತ್ತಿದೆ. ನಿರೂಪಣೆಯ ಶೈಲಿ ಮೆಚ್ಚಿರುವ ಪ್ರೊಡಕ್ಷನ್ ಹೌಸ್ ಚಿತ್ರನಿರ್ಮಾಣಕ್ಕೆ ಒಪ್ಪಿದೆ ಎಂದು ನಿರ್ದೇಶಕರು ಹೇಳಿದ್ದಾರೆ.

“ಅವರು ಚಿತ್ರದ ಒಂದು ಫ್ರೇಮ್ ಸಹ ನೋಡಿಲ್ಲ. ನೈಜಕಥೆಗೆ ಗ್ರೀನ್ ಸಿಗ್ನಲ್ ನೀಡಿದ ನಿರ್ಮಾಪಕರು ಯಾವುದೇ ಕಮರ್ಷಿಯಲ್ ಉದ್ದೇಶಗಳಿಗಾಗಿ ಈ ಚಿತ್ರ ತಯಾರಿಸುತ್ತಿಲ್ಲ ಎಂಬುದಾಗಿ ಹೇಳಿದ್ದಾರೆ.ಅವರು ತಮ್ಮ ಸಂಸ್ಥೆಯನ್ನು ನವಯುಗದ ಚಿತ್ರಗಳ ತಯಾರಿಕೆಗಾಗಿ ಮೀಸಲಾಗಿಟ್ಟಿದ್ದಾರೆ.ನನ್ನ ಜೀವನ ಘಟನೆಯನ್ನು ಹೇಳಿದ ಕ್ಷಣ ಅವರೊಡನೆ ನನ್ನ ಸಂಪರ್ಕ ಬೆಳೆಯಲು ಕಾರಣವಾಗಿದೆ" 

ಕನ್ನಡ ಆವೃತ್ತಿ ಬಿಡುಗಡೆಯಾದ ನಂತರ ಹಿಂದಿ ಆವೃತ್ತಿಯ ಪ್ರಿಪ್ರೊಡಕ್ಷನ್ ಪ್ರಾರಂಬಕ್ಕೆ ನಿರ್ದೇಶಕರು ಯೋಜಿಸಿದ್ದಾರೆ.ಪ್ರಭು ಮುಂಡ್ಕೂರ್, ದಿವ್ಯಾ ಉರುದುಗಾ, ಆರತಿ ನಾಯರ್ ನಟಿಸಿರುವ ಈ ಚಿತ್ರದಲ್ಲಿ ಬಂಗಾಳಿ ನಟ ತೋತಾ ರಾಯ್ ಚೌಧರಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡ ಚಿತ್ರದ ಮೊದಲ ನಕಲು ಅಕ್ಟೋಬರ್ ಅಂತ್ಯದ ವೇಳೆ ತಯಾರಾಗೈದೆ. ಈಗ ಅಲ್ವಿನ್ ಫರ್ನಾಂಡಿಸ್ ಅವರೊಂದಿಗೆ ಸಂದೀಪ್ ಚೌಟ ಮುಂಬೈನಲ್ಲಿ ಧ್ವನಿಮುದ್ರಣ ಕಾರ್ಯದಲ್ಲಿದ್ದಾರೆ. "ಏತನ್ಮಧ್ಯೆ, ಪ್ರಸ್ತುತ ವಿಷುವಲ್ ಎಫೆಕ್ಟ್ಸ್ ಗಳನ್ನು ಬೆಂಗಳೂರಿನ ತಂಡವು ನಿರ್ವಹಿಸುತ್ತಿದೆ" ಎಂದು ಶಶಿಕಾಂತ್ ಹೇಳುತ್ತಾರೆ, ಅವರು ಶೀಘ್ರದಲ್ಲೇ ಚಿತ್ರದ ಟ್ರೈಲರ್ ನೊಡನೆ ಬರಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.