ಸಿನಿಮಾ ಸುದ್ದಿ

ನಿತ್ಯಾನಂದ ಸ್ವಾಮಿ ಜೊತೆಗಿನ ಫೋಟೋ ವೈರಲ್, ಗಾಯಕಿ ಚಿನ್ಮಯಿ ಶ್ರೀಪಾದ್ ಹೇಳಿದ್ದೇನು?

ವಿವಾದಿತ ದೇವ ಮಾನವ ನಿತ್ಯಾನಂದ ಸ್ವಾಮಿ ಕೈಯಿಂದ ದಕ್ಷಿಣ ಭಾರತದ ಖ್ಯಾತ ಗಾಯಕಿ ಚಿನ್ಮಯಿ ಶ್ರೀಪಾದ್ ಪ್ರಸಾದ ಸ್ವೀಕರಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದು ನಕಲಿ ಫೋಟೋ ಎಂದು ಸ್ವತಃ ಗಾಯಕಿ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ನಿತ್ಯಾನಂದ ಸ್ವಾಮಿ ಜೊತೆಗಿನ ಫೋಟೋ ವೈರಲ್, ಗಾಯಕಿ ಚಿನ್ಮಯಿ ಶ್ರೀಪಾದ್ ಹೇಳಿದ್ದೇನು?
ಚಿನ್ಮಯಿ ಶ್ರೀಪಾದ್
Published On :

ಚೆನ್ನೈ: ವಿವಾದಿತ ದೇವ ಮಾನವ ನಿತ್ಯಾನಂದ ಸ್ವಾಮಿ ಕೈಯಿಂದ ದಕ್ಷಿಣ ಭಾರತದ ಖ್ಯಾತ ಗಾಯಕಿ ಚಿನ್ಮಯಿ ಶ್ರೀಪಾದ್ ಪ್ರಸಾದ ಸ್ವೀಕರಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದು ನಕಲಿ ಫೋಟೋ ಎಂದು ಸ್ವತಃ ಗಾಯಕಿ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.  


ತಮ್ಮ ಟ್ವಿಟರ್​ ಖಾತೆಯಲ್ಲಿ ಅಸಲಿ ಫೋಟೋ ಮತ್ತು ಎಡಿಟ್​ ಮಾಡಲಾಗಿರುವ ನಕಲಿ ಫೋಟೋವನ್ನು ಪೋಸ್ಟ್​ ಮಾಡಿರುವ ಚಿನ್ಮಯಿ, ವೈರಲ್​ ಆಗಿರುವ ಫೋಟೋ ನಕಲಿ ಎಂದು ಹೇಳಿದರೂ ಇವರೆಲ್ಲಾ ಹೀಗ್ಯಾಕೆ ಮಾಡುತ್ತಿದ್ದಾರೆಂಬುದು ನನಗೆ ತಿಳಿಯುತ್ತಿಲ್ಲ. ನೀವಿದನ್ನು ಉಚಿತವಾಗಿ ಮಾಡುತ್ತಿದ್ದೀರಾ ಅಥವಾ ಯಾರಿಂದಲಾದರೂ ಹಣ ತೆಗೆದುಕೊಂಡು ಮಾಡುತ್ತಿದ್ದೀರಾ ಎಂದು ಕೇಳಿದ್ದಾರೆ. 


ಚಿನ್ಮಯಿ ಟ್ವೀಟ್​ ಮಾಡುತ್ತಲೇ ಫೋಟೋವನ್ನು ಎಡಿಟ್​ ಮಾಡಿ ಪೋಸ್ಟ್​ ಮಾಡಿದ್ದ ಟ್ವಿಟರ್​ ಬಳಕೆದಾರ ಫೋಟೋವನ್ನು ತೆಗೆದುಹಾಕಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.