ಶಿವಣ್ಣ, ದರ್ಶನ್ ನನ್ನ ಚಿತ್ರದ ಮಹೂರ್ತಕ್ಕೆ ಆಗಮಿಸಿದ್ದು ಅದ್ಭುತ ಕ್ಷಣ: ಧ್ರುವನ್
ಸೂರಜ್ ಕುಮಾರ್ ಧ್ರುವನ್ ಆಗಿ ಹೆಸರು ಬದಲಿಸಿಕೊಂಡ ಬಳಿಕ ಅವರ ಅದೃಷ್ಟ ಖುಲಾಯಿಸಿದೆ.ರಘು ಕೋವಿ ನಿರ್ದೇಶನದಲ್ಲಿ ಈ ನವನಟ ಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇನ್ನು ಚಿತ್ರದ ಮಹೂರ್ತ ಶುಕ್ರವಾರ ನೆರವೇರಿದ್ದು ಈ ವೇಳೆ ಸ್ಟಾರ್ ನಟರಾದ ಶಿವರಾಜ್‌ಕುಮಾರ್ ಮತ್ತು ದರ್ಶನ್ ಕ್ಲಾಪ್‌ಬೋರ್ಡ್ ಟೇಕ್ ಮಾಡಿ ಶುಭಕೋರಿದ್ದು ವಿಶೇಷವಾಗಿತ್ತು.

ಸೂರಜ್ ಕುಮಾರ್ ಧ್ರುವನ್ ಆಗಿ ಹೆಸರು ಬದಲಿಸಿಕೊಂಡ ಬಳಿಕ ಅವರ ಅದೃಷ್ಟ ಖುಲಾಯಿಸಿದೆ.ರಘು ಕೋವಿ ನಿರ್ದೇಶನದಲ್ಲಿ ಈ ನವನಟ ಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇನ್ನು ಚಿತ್ರದ ಮಹೂರ್ತ ಶುಕ್ರವಾರ ನೆರವೇರಿದ್ದು ಈ ವೇಳೆ ಸ್ಟಾರ್ ನಟರಾದ ಶಿವರಾಜ್‌ಕುಮಾರ್ ಮತ್ತು ದರ್ಶನ್ ಕ್ಲಾಪ್‌ಬೋರ್ಡ್ ಟೇಕ್ ಮಾಡಿ ಶುಭಕೋರಿದ್ದು ವಿಶೇಷವಾಗಿತ್ತು.
ಬಿ.ಎಸ್.ಸುಧೀಂದ್ರ ನಿರ್ಮಿಸಿರುವ ಈ ಚಿತ್ರಮಲಯಾಳಂ ನಟಿ ಪ್ರಿಯಾ ವಾರಿಯರ್‌ಗೆ ಎರಡನೇ ಕನ್ನಡ ಚಿತ್ರವಾಗಿರಲಿದೆ.ಶ್ರೇಯಸ್ ಮಾನ್ಯು ಅಭಿನಯದ ’ವಿಷ್ಣು ಪ್ರಿಯಾ” ಈ ನಟಿಯ ಚ್ವೊಚ್ಚಲ ಕನ್ನಡ ಸಿನಿಮಾ ಆಗಿದೆ.
"ಇದು ನನ್ನ ಪಾಲಿನ ಅತ್ಯದ್ಭುತ ಕ್ಷಣ ಇದನ್ನು ನಾನು ಕೆಲವೇ ಮಾತುಗಳಲ್ಲಿ ಹೇಳಲು ಸಾಧ್ಯವಿಲ್ಲ." ಧ್ರುವನ್ ಹೇಳಿದ್ದಾರೆ.
ಇನ್ನೂ ಹೆಸರಿಡದ ಈ ಚಿತ್ರ ಚಿತ್ರೀಕರಣ ಡಿಸೆಂಬರ್ ಎರಡನೇ ವಾರದಿಂದ ಬೆಂಗಳೂರಿನಲ್ಲಿ ಪ್ರಾರಂಭವಾಗಲಿದೆ. ಇನ್ನು ಧ್ರುವನ್ ನಟ ನಿರ್ಮಾಪಕ ಎಸ್.ಎ.ಶ್ರೀನಿವಾಸ್ ಅವರ ಪುತ್ರರಾಗಿದ್ದಾರೆ. ಶ್ರೀನಿವಾಸ್ ಕನ್ನಡದ ವರನಟ ಡಾ. ರಾಜ್ ಪತ್ನಿ ಪಾರ್ವತಮ್ಮ ರಾಜ್‌ಕುಮಾರ್ ಅವರ ಸಹೋದರ ಎನ್ನುವುದು ಗಾನೀಯ ಅಂಶ. ಚಿತ್ರದ ಸಂಗೀತವನ್ನು ಅರ್ಜುನ್ ಜನ್ಯಾ ಸಂಯೋಜಿಸಲಿದ್ದು, ಸತ್ಯ ಹೆಗ್ಡೆ ಕ್ಯಾಮರಾಮ್ಯಾನ್ ಆಗಿ ಸೈನ್ ಅಪ್ ಆಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


