ಹೊಸ ಅವತಾರದಲ್ಲಿ `ದಾರಿ ತಪ್ಪಿದ ಮಗ’
ನಾಲ್ಕೂವರೆ ದಶಕಗಳ ಹಿಂದೆ ಒಮ್ಮೆ ತಿರುಗಿನೋಡಿದರೆ, ಚಂದನವನದಲ್ಲಿ ಅದೆಷ್ಟು ಚಂದದ ಚಿತ್ರಗಳು ತೆರೆಗೆ ಬಂದಿದ್ದವು, ಅಂತಹ ಸದಭಿರುಚಿಯ ಚಿತ್ರಗಳು ಈಗೇಕಿಲ್ಲ ಎನಿಸುತ್ತದೆ. ಈ ನಿಟ್ಟಿನಲ್ಲಿ, ಅಂದಿನ ಕಾಲಘಟ್ಟದ ಚಿತ್ರಗಳನ್ನು...

ಬೆಂಗಳೂರು: ನಾಲ್ಕೂವರೆ ದಶಕಗಳ ಹಿಂದೆ ಒಮ್ಮೆ ತಿರುಗಿನೋಡಿದರೆ, ಚಂದನವನದಲ್ಲಿ ಅದೆಷ್ಟು ಚಂದದ ಚಿತ್ರಗಳು ತೆರೆಗೆ ಬಂದಿದ್ದವು, ಅಂತಹ ಸದಭಿರುಚಿಯ ಚಿತ್ರಗಳು ಈಗೇಕಿಲ್ಲ ಎನಿಸುತ್ತದೆ. ಈ ನಿಟ್ಟಿನಲ್ಲಿ, ಅಂದಿನ ಕಾಲಘಟ್ಟದ ಚಿತ್ರಗಳನ್ನು ನೋಡಬಯಸುವ ಪ್ರೇಕ್ಷಕರಿಗಾಗಿ ೧೯೭೫ರಲ್ಲಿ ತೆರೆಕಂಡ 'ದಾರಿ ತಪ್ಪಿದ ಮಗ’ ಮತ್ತೆ ಹೊಸ ಅವತಾರದಲ್ಲಿ ಬರಲಿದೆ.
ಅಂದು ಪೇಕೇಟಿ ಶಿವರಾಂ ನಿರ್ಮಿಸಿ ನಿರ್ದೇಶಿಸಿದ್ದ ಬಹುತಾರಾಗಣದ ಚಿತ್ರದಲ್ಲಿ ರಸಿಕರ ರಾಜ, ಕರ್ನಾಟಕ ರತ್ನ ಡಾ ರಾಜ್ಕುಮಾರ್, ಜಯಮಾಲಾ, ಆರತಿ, ಕಲ್ಪನಾ, ಮಂಜುಳ ನಾಯಕ, ನಾಯಕಿಯರಾಗಿದ್ದರೆ, ಪೋಷಕ ಪಾತ್ರದಲ್ಲಿ ಎಂ ವಿ ರಾಜಮ್ಮ, ವಜ್ರಮುನಿ, ಕೆ ಎಸ್ ಅಶ್ವತ್ಥ್ ಮೊದಲಾದವರಿದ್ದಾರೆ.
ಇದೇ ನವೆಂಬರ್ 22ರಂದು ದಾರಿತಪ್ಪಿದ ಮಗ ಮತ್ತೆ ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.
ಅಂದು 35 ಎಂ ಎಂನಲ್ಲಿದ್ದ ಚಿತ್ರವನ್ನು ಇಂದು ಸಿನಿಮಾಸ್ಕೋಪ್ 7.1 ಡಿಟಿಎಸ್ 2ಕೆ ತಂತ್ರಜ್ಞಾನ ಅಳವಡಿಸಲಾಗಿದ್ದು, ಮುನಿರಾಜು ಅವರು ಚಿತ್ರ ನಿರ್ಮಾಣ ಸಂಸ್ಥೆ ಜಯಪ್ರಭ ಪ್ರೊಡಕ್ಷನ್ಸ್ ಮೂಲಕ ಹೊರತರುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


