ಅಜಯ್ ರಾವ್ ನಟನೆಯ ಕೃಷ್ಣ ಟಾಕೀಸ್ ಗೆ ಸುದೀಪ್ ಗಾಯನ
ಅಜೇಯ್‌ರಾವ್ ಅಭಿನಯದ “ಕೃಷ್ಣ ಟಾಕೀಸ್’ ಚಿತ್ರಕ್ಕೆ ಹಾಡೊಂದನ್ನು ಹಾಡಲು ನಟ ಕಿಚ್ಚ ಸುದೀಪ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಅಜೇಯ್‌ರಾವ್ ಅಭಿನಯದ “ಕೃಷ್ಣ ಟಾಕೀಸ್’ ಚಿತ್ರಕ್ಕೆ ಹಾಡೊಂದನ್ನು ಹಾಡಲು ನಟ ಕಿಚ್ಚ ಸುದೀಪ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಸುದೀಪ್ ಒಳ್ಳೆಯ ಗಾಯಕರು ಅನ್ನೋದು ಎಲ್ಲರಿಗೂ ಗೊತ್ತು. ಅವರು ಸುಮ್ಮನೆ ಹಾಡಲು ಒಪ್ಪುವುದಿಲ್ಲ. ಸಾಹಿತ್ಯ ಇಷ್ಟವಾಗಬೇಕು, ಟ್ಯೂನ್ ಚೆನ್ನಾಗಿದೆ ಎನಿಸಬೇಕು. ಎಲ್ಲದ್ದಕ್ಕೂ ಹೆಚ್ಚಾಗಿ, ಟ್ರೆಂಡಿ ಸಾಂಗ್ ಅಂದರೆ ಅವರು ಹಾಡಲು ಮುಂದಾಗುತ್ತಾರೆ.
ಅಷ್ಟಕ್ಕೂ ಸುದೀಪ್ ಹಾಡಲು ಒಪ್ಪಿರೋದು ಸಂಗೀತ ನಿರ್ದೇಶಕ ಶ್ರೀಧರ್ ವಿ.ಸಂಭ್ರಮ್ ಅವರಿಗಾಗಿ. ಹೌದು, ಸುದೀಪ್ ಅವರನ್ನು ಇತ್ತೀಚೆಗೆ ಶ್ರೀಧರ್ ವಿ. ಸಂಭ್ರಮ್ ಅವರು ಭೇಟಿಯಾಗಿ ಹಾಡುವಂತೆ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ, ಸುದೀಪ್ ಹಾಡುವ ಟ್ರಾಕ್ ಸಾಂಗ್ ಅನ್ನು ಸಹ ಸುದೀಪ್ ಅವರಿಗೆ ಕೇಳಿಸಿದ್ದಾರೆ. ಹಾಡು ಕೇಳಿದ ಸುದೀಪ್, ಇಷ್ಟಪಟ್ಟು, ಹಾಡುವುದಾಗಿ ಹೇಳಿದ್ದಾರೆ.
ಪ್ರಮೋದ್ ಮರವಂತೆ ಮತ್ತು ಅಭಿ ಎಸ್. ಇಬ್ಬರೂ ಸೇರಿ ಬರೆದಿರುವ “ನೈಟಿ ಮಾತ್ರ ಹಾಕೋಬೇಡ ಮೇನಕ, ನಮಗೆ ನೈಂಟಿ ಹೊಡದಂಗಾಗ್ತದೆ ಜೀವಕ…’ ಎಂಬ ಹಾಡಿಗೆ ಸುದೀಪ್ ಅವರು ಧ್ವನಿಯಾಗಲಿದ್ದಾರೆ. ಈ ಚಿತ್ರವನ್ನು ವಿಜಯ್ ಆನಂದ್ ನಿರ್ದೇಶಿಸಿದ್ದು, ಗೋವಿಂದರಾಜು ನಿರ್ಮಾಣ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


