'ವಿವಾಹಿತರ ಸಂಘಕ್ಕೆ ಸ್ವಾಗತ’: ಧೃವ ಸರ್ಜಾ ಕಾಲೆಳೆದ ಗೋಲ್ಡನ್ ಸ್ಟಾರ್
ಇದೇ ತಿಂಗಳ ೨೪ರಂದು ಬಾಲ್ಯದ ಗೆಳತಿಯೊಡನೆ ಸಪ್ತಪದಿ ತುಳಿಯಲಿರುವ ಭರ್ಜರಿ ಹುಡುಗ ಧೃವ ಸರ್ಜಾ ಮದುವೆಯ ಕರೆಯೋಲೆ ಹಂಚುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

ಬೆಂಗಳೂರು: ಇದೇ ತಿಂಗಳ ೨೪ರಂದು ಬಾಲ್ಯದ ಗೆಳತಿಯೊಡನೆ ಸಪ್ತಪದಿ ತುಳಿಯಲಿರುವ ಭರ್ಜರಿ ಹುಡುಗ ಧೃವ ಸರ್ಜಾ ಮದುವೆಯ ಕರೆಯೋಲೆ ಹಂಚುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.
ಚಂದನವನದ ತಮ್ಮ ಆತ್ಮೀಯರಿಗೆ ಆಮಂತ್ರಣ ಪತ್ರಿಕೆ ಹಂಚುತ್ತಿರುವ ಧೃವ ಸರ್ಜಾ ಇಂದು ಗೋಲ್ಡನ್ ಸ್ಟಾರ್ ಗಣೇಶ್ ಅವರನ್ನೂ ಮದುವೆಗೆ ಆಮಂತ್ರಿಸಿ ಪತ್ರಿಕೆ ನೀಡಿದ್ದಾರೆ.
ಆರ್ ಆರ್ ನಗರದ ಮನೆಗೆ ಆಗಮಿಸಿ ಆಹ್ವಾನ ನೀಡಿದ ಧೃವ ಸರ್ಜಾಗೆ ಗಣೇಶ್ ಶುಭಾಶಯ ತಿಳಿಸಿದ್ದಾರೆ.
ಬಳಿಕ ಟ್ವಿಟರ್ ನಲ್ಲಿ ಧೃವ ಜತೆಗಿನ ಭೇಟಿಯ ಫೋಟೊ ಶೇರ್ ಮಾಡಿರುವ ಗಣೇಶ್, ಇದೇ ೨೪ರಂದು ನಿನ್ನ ಮದುವೆಯಾಗುತ್ತಿದೆ. ಹೀಗಾಗಿ ನಮ್ಮ ಸಂಘಕ್ಕೆ ಅಂದರೆ ವಿವಾಹಿತರ ಸಂಘಕ್ಕೆ ಸ್ವಾಗತ ಎಂದು ತಮಾಷೆ ಮಾಡಿದ್ದಾರೆ.
ಧ್ರುವ ಸರ್ಜಾ, ನಟ ಪ್ರಜ್ವಲ್ ದೇವರಾಜ್, ನಿರ್ದೇಶಕ ಮಹೇಶ್ ಕುಮಾರ್, ಬಿಗ್ ಬಾಸ್ ಸ್ಪರ್ಧಿ ಪ್ರಥಮ್ ಸೇರಿದಂತೆ ಅನೇಕರಿಗೆ ಈಗಾಗಲೇ ಆಮಂತ್ರಣ ಪತ್ರಿಕೆ ನೀಡಿ ಮದುವೆಗೆ ಆಹ್ವಾನ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


