'ಭೀಷ್ಮ'ನಾಗಿ ತೆಲುಗು ಚಿತ್ರರಂಗಕ್ಕೆ ಮತ್ತೆ ಪ್ರವೇಶಿಸಿದ ಅನಂತ್ ನಾಗ್
ಸುದೀರ್ಘ 42 ವರ್ಷಗಳ ನಂತರ ಕನ್ನಡದ ಹಿರಿಯ ನಟ ಅನಂತ್ ನಾಗ್ ತೆಲುಗು ಚಿತ್ರರಂಗಕ್ಕೆ ಮರು ಪ್ರವೇಶ ಮಾಡುತ್ತಿದ್ದಾರೆ.

ಸುದೀರ್ಘ 42 ವರ್ಷಗಳ ನಂತರ ಕನ್ನಡದ ಹಿರಿಯ ನಟ ಅನಂತ್ ನಾಗ್ ತೆಲುಗು ಚಿತ್ರರಂಗಕ್ಕೆ ಮರು ಪ್ರವೇಶ ಮಾಡುತ್ತಿದ್ದಾರೆ. ಭೀಷ್ಮ ಚಿತ್ರದಲ್ಲಿ ನಟಿಸುತ್ತಿದ್ದು ನಿತಿನ್ ಮತ್ತು ರಶ್ಮಿಕಾ ಮಂದಣ್ಣ ಅದಕ್ಕೆ ನಾಯಕ-ನಾಯಕಿಯರು.
1977ರಲ್ಲಿ ತೆರೆಕಂಡಿದ್ದ ಪ್ರೇಮಲೋಕಲು ಚಿತ್ರದ ನಂತರ ಅನಂತ್ ನಾಗ್ ನಟಿಸುತ್ತಿರುವ ತೆಲುಗು ಚಿತ್ರ ಭೀಷ್ಮ. ಅದನ್ನು ಕೆ ರಾಘವೇಂದ್ರ ರಾವ್ ನಿರ್ದೇಶನ ಮಾಡಿದ್ದರು. ಜಯಸುಧಾ ನಾಯಕಿಯಾಗಿದ್ದರು.
ಭೀಷ್ಮ ಚಿತ್ರದ ನಿರ್ದೇಶಕ ವೆಂಕು ಕುಡುಮೂಲ ಅವರು ಅನಂತ್ ನಾಗ್ ಅವರನ್ನು ಚಿತ್ರಕ್ಕೆ ಕರೆತರಲು ಹಲವು ಸುತ್ತಿನ ಮಾತುಕತೆ ನಡೆಸಿದ್ದರಂತೆ. ಇದರಲ್ಲಿ ಅನಂತ್ ನಾಗ್ ಅವರು ಬ್ರಹ್ಮಚಾರಿಯ ಪಾತ್ರ ಮಾಡುತ್ತಿದ್ದು ಸಾವಯವ ಕೃಷಿಯಲ್ಲಿ ತೊಡಗಿರುತ್ತಾರೆ.
ಚಿತ್ರದಲ್ಲಿ ಆಹಾರ ಕಲಬೆರಕೆ ವಿಷಯಗಳಿವೆ. ಚಿತ್ರದ ಕ್ಸೈಮ್ಯಾಕ್ಸ್ ದೃಶ್ಯಕ್ಕೆ ಅನಂತ್ ನಾಗ್ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.
ಸೂರ್ಯದೇವರ ನಾಗ ವಂಶಿ ನಿರ್ಮಾಣದ ಚಿತ್ರವನ್ನು ಪಿಡಿವಿ ಪ್ರಸ್ತುತಪಡಿಸುತ್ತಿದೆ. ಈ ಮಧ್ಯೆ ಅನಂತ್ ನಾಗ್ ನಟನೆಯ ಪಿ ವಾಸು ನಿರ್ದೇಶನದ ಆಯುಷ್ಮಾನ್ ಭವ ತೆರೆಗೆ ಬರಲು ಸಜ್ಜಾಗಿದೆ. ಇನ್ನೊಂದೆಡೆ ರಕ್ಷಿತ್ ಶೆಟ್ಟಿಯ ರುದ್ರಪ್ರಯಾಗ, ಯೋಗರಾಜ್ ಭಟ್ ಅವರ ಗಾಳಿಪಟ-2 ಚಿತ್ರಗಳಲ್ಲಿ ಕೂಡ ಅನಂತ್ ನಾಗ್ ಅಭಿನಯಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


