ಸ್ಯಾಂಡಲ್ವುಡ್ ಹಿರಿಯ ನಿರ್ದೇಶಕ ಹ.ಸೂ.ರಾಜಶೇಖರ್ ವಿಧಿವಶ
ರಫ್ ಅಂಡ್ ಟಪ್ ಆಕ್ಷನ್ ಚಿತ್ರಗಳಿಗೆ ಹೆಸರಾಗಿದ್ದ ಹಿರಿಯ ನಿರ್ದೇಶಕ ಹ ಸೂ ರಾಜಶೇಖರ್ ಶನಿವಾರ ಮಧ್ಯಾಹ್ನ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಸುಮಾರು ೬೦ ವರ್ಷ ವಯಸ್ಸಾಗಿತ್ತು.

ಬೆಂಗಳೂರು: ರಫ್ ಅಂಡ್ ಟಪ್ ಆಕ್ಷನ್ ಚಿತ್ರಗಳಿಗೆ ಹೆಸರಾಗಿದ್ದ ಹಿರಿಯ ನಿರ್ದೇಶಕ ಹ ಸೂ ರಾಜಶೇಖರ್ ಶನಿವಾರ ಮಧ್ಯಾಹ್ನ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಸುಮಾರು ೬೦ ವರ್ಷ ವಯಸ್ಸಾಗಿತ್ತು.
ಮುತ್ತಿನ ಹಾರ, ಬಣ್ಣದ ಗೆಜ್ಜೆ, ಯುಗಪುರುಷ, ಚಿತ್ರದ ಸಹಾಯಕ ನಿರ್ದೇಶಕರಾಗಿದ್ದ ರಾಜಶೇಖರ್, ಕರ್ಫ್ಯೂ, ಗರುಡ, ಪಾಪಿಗಳ ಲೋಕದಲ್ಲಿ, ಬಣ್ಣದ ಹೆಜ್ಜೆ, ರಫ್ ಅಂಡ್ ಟಫ್, ಇನ್ಸ್ ಪೆಕ್ಟರ್ ಜಯಸಿಂಹ ಹಾಗೂ ಇನ್ನಿತರ ಚಿತ್ರಗಳನ್ನು ಸ್ವತಃ ನಿರ್ದೇಶಿಸಿದ್ದರು.
ಕನ್ನಡವಲ್ಲದೆ ತುಳು ಸಿನೆಮಾಗಳಿಗೆ ಕೂಡ ಆಕ್ಷನ್ ಕಟ್ ಹೇಳಿದ್ದರು. ಚಾಮರಾಜನಗರ ತಾಲೂಕಿನ ಹರಪನಹಳ್ಳಿ ಅವರ ಹುಟ್ಟೂರಾಗಿದ್ದು, ಹಲವು ವರ್ಷಗಳಿಂದ ಬೆಂಗಳೂರಿನ ಕತ್ತರಿಗುಪ್ಪೆಯಲ್ಲಿ ವಾಸವಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


