ಮತ್ತೆ ಒಂದಾದ ಸತೀಶ್-ಉದಯ್, ಲವ್ ಇನ್ ಮಂಡ್ಯ ಸಿಕ್ವೇಲ್ ಮಾಡ್ತಾರಾ?
2014ರಲ್ಲಿ ಬಿಡುಗಡೆಯಾಗಿದ್ದ ಲವ್ ಇನ್ ಮಂಡ್ಯ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. ಇದೀಗ ಮಂಡ್ಯ ಸಿಕ್ವೇಲ್ ನಲ್ಲಿ ಸತೀಶ್ ನೀನಾಸಂ ಹಾಗೂ ನಿರ್ಮಾಪಕ ಉದಯ್ ಕೆ ಮೆಹ್ತಾ ಬಂದಾಗಲಿದ್ದಾರೆ.

Published On :
ಬೆಂಗಳೂರು: 2014ರಲ್ಲಿ ಬಿಡುಗಡೆಯಾಗಿದ್ದ ಲವ್ ಇನ್ ಮಂಡ್ಯ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. ಇದೀಗ ಮಂಡ್ಯ ಸಿಕ್ವೇಲ್ ನಲ್ಲಿ ಸತೀಶ್ ನೀನಾಸಂ ಹಾಗೂ ನಿರ್ಮಾಪಕ ಉದಯ್ ಕೆ ಮೆಹ್ತಾ ಬಂದಾಗಲಿದ್ದಾರೆ.
ಸತೀಶ್ ನೀನಾಸಂ ಹಾಗೂ ಸಿಂಧೂ ಲೋಕನಾಥ್ ಕಾಂಬಿನೇಷನ್ ನಲ್ಲಿ ಲವ್ ಇನ್ ಮಂಡ್ಯ ಮೂಡಿಬಂದಿತ್ತು. 5 ವರ್ಷಗಳ ಬಳಿಕ ಇದೀಗ ಮತ್ತೆ ಸತೀಶ್ ಮತ್ತು ಉದಯ್ ಒಂದಾಗಿದ್ದಾರೆ. ಮತ್ತೊಂದು ಪಕ್ಕಾ ಕಮರ್ಷಿಯಲ್ ಕಾಮಿಡಿ ಚಿತ್ರಕ್ಕೆ ಇಬ್ಬರೂ ಸೇರಿ ಸ್ಕೆಚ್ ಹಾಕಿದ್ದಾರೆ.
ಯುಗಾದಿ ಹಬ್ಬದ ದಿನ ಏಪ್ರಿಲ್ 6ರಂದು ಚಿತ್ರಕ್ಕೆ ಚಾಲನೆ ಸಿಗಲಿದೆ. ಸದ್ಯ ಚಿತ್ರತಂಡ ಎಲ್ಲದರಲ್ಲೂ ರಹಸ್ಯವನ್ನು ಕಾಯ್ದುಕೊಂಡಿದೆ. ಇನ್ನು ತಮ್ಮನೇ ನಿರ್ದೇಶನದಲ್ಲಿ ಮೈ ನೇಮ್ ಈಸ್ ಸಿದ್ದೇಗೌಡ ಅನೌನ್ಸ್ ಮಾಡಿರುವ ಸತೀಶ್, ಅತ್ತ ಗೋದ್ರಾ ಚಿತ್ರದಲ್ಲೂ ನಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
SandalwoodLove In Mandyaಲವ್ ಇನ್ ಮಂಡ್ಯಸ್ಯಾಂಡಲ್ವುಡ್Uday MehtaSathish Ninasamಸತೀಶ್ ನೀನಾಸಂಉದಯ್ ಕೆ ಮೆಹ್ತಾ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


