ಸಿನಿಮಾ ಸುದ್ದಿ

ರಾಧಿಕಾ ಕುಮಾರಸ್ವಾಮಿ ನಟನೆಯ 'ದಮಯಂತಿ' ಚಿತ್ರದ ಟಾಕಿ ಪೋರ್ಷನ್ ಕಂಪ್ಲೀಟ್

ಸ್ಯಾಂಡಲ್​ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಅಭಿನಯದ, ನವರಸನ್ ನಿರ್ದೇಶನದ ಬಹುಕೋಟಿ ವೆಚ್ಚದ 'ದಮಯಂತಿ' ಚಿತ್ರದ ಟಾಕಿ ಪೋರ್ಷನ್ ಶೂಟಿಂಗ್ ಕಂಪ್ಲೀಟಾಗಿದೆ....

ರಾಧಿಕಾ ಕುಮಾರಸ್ವಾಮಿ ನಟನೆಯ 'ದಮಯಂತಿ' ಚಿತ್ರದ ಟಾಕಿ ಪೋರ್ಷನ್ ಕಂಪ್ಲೀಟ್
ರಾಧಿಕಾ ಕುಮಾರಸ್ವಾಮಿ
Published On :
ಸ್ಯಾಂಡಲ್​ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಅಭಿನಯದ, ನವರಸನ್ ನಿರ್ದೇಶನದ ಬಹುಕೋಟಿ ವೆಚ್ಚದ 'ದಮಯಂತಿ' ಚಿತ್ರದ ಟಾಕಿ ಪೋರ್ಷನ್ ಶೂಟಿಂಗ್ ಕಂಪ್ಲೀಟಾಗಿದೆ. 
ಒಂದು ಹಾಡಿನ ಶೂಟಿಂಗ್ ಬಾಕಿಯಿದ್ದು ಈ ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಲಾಗಿದೆ, .
'ಭೈರಾದೇವಿ' ಶೂಟಿಂಗ್ ವೇಳೆ ಗಾಯಗೊಂಡಿದ್ದ ರಾಧಿಕಾ ಚೇತರಿಸಿಕೊಂಡು ಮಾರ್ಚ್ 5 ರಿಂದ 'ದಮಯಂತಿ' ಶೂಟಿಂಗ್​​ಗೆ ಹಾಜರಾಗಿದ್ದರು. ನಿನ್ನೆ ಕಂಠೀರವ ಸ್ಟೂಡಿಯೋದಲ್ಲಿ ರಾಧಿಕಾ ದಮಯಂತಿ ಧರ್ಮಾಸ್ಪತ್ರೆ ಉದ್ಘಾಟನೆ ಮಾಡುವ ಸನ್ನಿವೇಶ ಸೆರೆ ಹಿಡಿಯವ ಮೂಲಕ ಚಿತ್ರೀಕರಣ ಮುಕ್ತಾಯಗೊಂಡಿತು.
ದಮಯಂತಿ ಚಿತ್ರ 80ರ ದಶಕದ ಕಥೆಯಾಗಿದ್ದು, ಇದರಲ್ಲಿ ರಾಧಿಕಾ,  ಡಬಲ್ ಶೇಡ್​​ನಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ಭಜರಂಗಿ ಲೋಕಿ ನೆಗೆಟಿವ್ ಶೇಡ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಮಿಸ್ಟರ್ ಮೊಮ್ಮಗ ಚಿತ್ರದ ನಾಯಕ ರವಿ ಈ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಗಂಡನ ಪಾತ್ರದಲ್ಲಿ, ತಂದೆಯ ಪಾತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರ ಆಪ್ತಮಿತ್ರ ರಾಜ್ ಬಹದ್ದೂರ್  ನಟಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.