ಸಿನಿಮಾ ಸುದ್ದಿ

'ದೇವಕಿ'ಯಾಗಿ ಬದಲಾಯ್ತು ಪ್ರಿಯಾಂಕಾ ಉಪೇಂದ್ರ ನಟನೆಯ ಹೌರಾ ಬ್ರಿಡ್ಜ್!

ಎಚ್. ಲೋಹಿತ್ ನಿರ್ದೇಶನದ ಪ್ರಿಯಾಂಕಾ ಉಪೇಂದ್ರ ನಟನೆಯ ‘ಹೌರಾಬ್ರಿಡ್ಜ್’ ಚಿತ್ರದ ಟೈಟಲ್ ಬದಲಾಗಿಸಲಾಗಿದೆ, ಸಿನಿಮಾ ಕಥೆಗೂ ಟೈಟಲ್ ಗೂ ಹೊಂದಾಣಿಕೆಯಾಗದ ...

'ದೇವಕಿ'ಯಾಗಿ ಬದಲಾಯ್ತು  ಪ್ರಿಯಾಂಕಾ ಉಪೇಂದ್ರ ನಟನೆಯ ಹೌರಾ ಬ್ರಿಡ್ಜ್!
ಪ್ರಿಯಾಂಕಾ ಉಪೇಂದ್ರ
Published On :
ಎಚ್. ಲೋಹಿತ್ ನಿರ್ದೇಶನದ  ಪ್ರಿಯಾಂಕಾ ಉಪೇಂದ್ರ ನಟನೆಯ ‘ಹೌರಾಬ್ರಿಡ್ಜ್’ ಚಿತ್ರದ ಟೈಟಲ್ ಬದಲಾಗಿಸಲಾಗಿದೆ, ಸಿನಿಮಾ ಕಥೆಗೂ ಟೈಟಲ್ ಗೂ ಹೊಂದಾಣಿಕೆಯಾಗದ ಕಾರಣ ಶೀರ್ಷಿಕೆ ಬದಲಾಯಿಸಲಾಗಿದೆ.
‘ದೇವಕಿ’ ಮೂಲಕ ಮೊದಲ ಬಾರಿಗೆ ‘ರಿಯಲ್ ಸ್ಟಾರ್’ ಉಪೇಂದ್ರ-ಪ್ರಿಯಾಂಕಾ ಅವರ ಪುತ್ರಿ ಐಶ್ವರ್ಯಾ ಉಪೇಂದ್ರ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದಾರೆ. ಇದೇ ಬುಧವಾರ ಚಿತ್ರದ ಫಸ್ಟ್​ಲುಕ್ ಮತ್ತು ಟೀಸರ್ ಕೂಡ ಬಿಡುಗಡೆ ಆಗಲಿದೆ. ಮೊದಲ ಚಿತ್ರದಲ್ಲೇ ತಾಯಿಯೊಂದಿಗೆ ಐಶ್ವರ್ಯಾ ನಟಿಸಿರುವುದು ವಿಶೇಷ. 
‘ಇಡೀ ಸಿನಿಮಾ ಚಿತ್ರೀಕರಣ ಸಂಪೂರ್ಣವಾಗಿ ಕೊಲ್ಕತ್ತದಲ್ಲೇ ನಡೆದಿದೆ. ಮೊದಲು ‘ಹೌರಾ ಬ್ರಿಡ್ಜ್’ ಎಂದು ಶೀರ್ಷಿಕೆ ಫೈನಲ್ ಮಾಡಿದ್ದೆವು. ಶೂಟಿಂಗ್ ಮುಗಿದ ಮೇಲೆ ಪೋಸ್ಟ್ ಪ್ರೊಡಕ್ಷನ್ ಮಾಡುವಾಗ ‘ದೇವಕಿ’ ಶೀರ್ಷಿಕೆಯೇ ಸೂಕ್ತ ಎನಿಸಿ, ಅದನ್ನೇ ಫಿಕ್ಸ್ ಮಾಡಿದೆವು. ಚಿತ್ರದ ಕಥಾನಾಯಕಿ ಪಾತ್ರವು ದೇವಕಿ ಎಂದೇ ಇದೆ. ಅಲ್ಲದೆ, ದೇವಕಿ ಎಂಬುದು ಎಲ್ಲ ಕಡೆಗೂ ಸಲ್ಲುವಂತಹ ಹೆಸರಾಗಿದೆ’ ಎಂದು ನಿರ್ದೇಶಕ ಲೋಹಿತ್ ಹೇಳಿದ್ದಾರೆ.
ಮೊದಲ ಪ್ರಯತ್ನದಲ್ಲೇ ಹಾರರ್ ಸಿನಿಮಾ ಮಾಡಿದ್ದ ನಿರ್ದೇಶಕರು, ಈ ಬಾರಿ ಯಾವ ಜಾನರ್​ಗೆ ಕೈ ಹಾಕಿದ್ದಾರೆ ಎಂಬ ರಹಸ್ಯವನ್ನು ಬಿಟ್ಟುಕೊಟ್ಟಿಲ್ಲ. ಎಚ್.ಸಿ. ವೇಣು ಛಾಯಾಗ್ರಹಣ ಮಾಡಿದ್ದು, ನೋಬಿನ್ ಪೌಲ್ ಸಂಗೀತ ನಿರ್ದೇಶನ ಮಾಡಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.