ಸಿನಿಮಾ ಸುದ್ದಿ

ನಾಗಶೇಖರ್ ಮುಂದಿನ ಸಿನಿಮಾ ಸಂಜು ಅಲಿಯಾಸ್ ಸಂಜು

ಅಭಿಷೇಕ್ ಅಂಬರೀಷ್ ನಟನೆಯ ಅಮರ್ ಚಿತ್ರ ನಿರ್ದೇಶಕ ನಾಗಶೇಖರ್ ಮುಂದಿನ ಸಿನಿಮಾ ಘೋಷಿಸಿದ್ದಾರೆ, ಸಂಜಯ್ ಅಲಿಯಾಸ್ ಸಂಜು...

ನಾಗಶೇಖರ್ ಮುಂದಿನ ಸಿನಿಮಾ ಸಂಜು ಅಲಿಯಾಸ್ ಸಂಜು
ನಾಗಶೇಖರ್
Published On :
ಅಭಿಷೇಕ್ ಅಂಬರೀಷ್ ನಟನೆಯ ಅಮರ್ ಚಿತ್ರ ನಿರ್ದೇಶಕ ನಾಗಶೇಖರ್  ಮುಂದಿನ ಸಿನಿಮಾ ಘೋಷಿಸಿದ್ದಾರೆ,  ಸಂಜಯ್ ಅಲಿಯಾಸ್ ಸಂಜು ನಾಗಶೇಖರ್ ಅವರ ಮುಂದಿನ ಸಿನಿಮಾವಾಗಿದೆ.
ಚಿತ್ರದ ಟೈಟಲ್ ಕೂಡ ಅನೌನ್ಸ್ ಮಾಡಿದ್ದಾರೆ. ಹೌದು, ನಾಗಶೇಖರ್ ಹೊಸ ಚಿತ್ರಕ್ಕೆ 'ಸಂಜಯ್ ಅಲಿಯಾಸ್ ಸಂಜು' ಎಂದು ನಾಮಕರಣ ಮಾಡಿದ್ದಾರೆ. 
ಚಿತ್ರದ ಟೈಟಲ್ ಮತ್ತು ರಕ್ತಸಿಕ್ತವಾದ ಪೋಸ್ಟರ್ ಬ್ಯಾಗ್ರೌಂಡ್ ಮತ್ತು ಬೇಡಿ ಹಾಕಿದ ಕೈ ನೋಡುತ್ತಿದ್ರೆ ಇದೊಂದು ಕ್ರೈಮ್ ಆಧಾರಿತ ಚಿತ್ರ ಎನ್ನುವುದು ಗೊತ್ತಾಗುತ್ತಿದೆ.
ಸಂಜಯ್ ಅಲಿಯಾಸ್ ಸಂಜು' ಸಿನಿಮಾ ನೈಜ ಘಟನೆ ಆಧಾರಿತ ಸಿನಿಮಾವಂತೆ. ನಾಗಶೇಖರ್ ನಿರ್ದೇಶಕ ಬಹುತೇಕ ಚಿತ್ರಗಳು ನೈಜ ಘಟನೆ ಆಧಾರಿತ ಚಿತ್ರಗಳಾಗಿವೆ. 'ಅಮರ್' ಸಿನಿಮಾ ಕೂಡ ಸತ್ಯ ಘಟನೆ ಆಧಾರಿತ ಚಿತ್ರವೆಂದು ಹೇಳಿದ್ದಾರೆ ನಾಗಶೇಖರ್.
'ಸಂಜಯ್ ಅಲಿಯಾಸ್ ಸಂಜು' ಸಿನಿಮಾ ಸಂಜು ವೆಡ್ಸ್ ಗೀತಾ' ಚಿತ್ರದ ಪಾರ್ಟ್-2 ಇರಬಹುದಾ ಎನ್ನುವ ಅನುಮಾನ ಕೂಡ ಅನೇಕರನ್ನು ಕಾಡುತ್ತಿದೆ. ಆದ್ರೆ ಸದ್ಯ ಟೈಟಲ್ ಪೋಸ್ಟರ್ ಮಾತ್ರ ರಿವೀಲ್ ಮಾಡಿರುವ ನಾಗಶೇಖರ್ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.